ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಮು ಗಲಭೆಗೆ ಕುಮ್ಮಕ್ಕು ಎಎಪಿ ಶಾಸಕ ತ್ರಿಪಾಠಿ ಬಂಧನ

By Mahesh
|
Google Oneindia Kannada News

ಎಎಪಿ ಶಾಸಕಿ ಅಲ್ಕಾ ಲಂಬಾ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ ಆರೋಪದ ಮೇಲೆ ಬಿಜೆಪಿ ಶಾಸಕ ಒಪಿ ಶರ್ಮ ಅವರು ಸದನದಿಂದ ಹೊರ ಬಿದ್ದ ಘಟನೆ ಬಳಿಕ ಎಎಪಿ ಶಾಸಕರೊಬ್ಬರ ಬಂಧನ ಸುದ್ದಿ ಬಂದಿದೆ.

2013ರಲ್ಲಿ ದೆಹಲಿಯಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡಿದ ಆರೋಪ ಹೊತ್ತಿದ್ದ ದೆಹಲಿಯ ಮಾಡೆಲ್ ಟೌನ್ ಕ್ಷೇತ್ರದ ಶಾಸಕ ಅಖಿಲೇಶ್ ತ್ರಿಪಾಠಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರೋಹಿಣಿ ಕೋರ್ಟ್ ಕಳಿಸಿದೆ.

ಆಮ್ ಆದ್ಮಿ ಪಕ್ಷದ ಶಾಸಕಿ ಸರಿತಾ ಸಿಂಗ್ ಅವರು ಕರ್ತವ್ಯ ನಿರತ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಅವರ ಜೊತೆ ಅನುಚಿತವಾಗಿ ವರ್ತಿಸಿ, ನಿಂದಿಸಿ, ಕಿರುಕುಳ ನೀಡಿದ ಆರೋಪ ಹೊತ್ತುಕೊಂಡಿದ್ದಾರೆ. ಶಾಸಕಿ ಸರಿತಾ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.[ಶಾಸಕಿ ಸರಿತಾ ಸಿಂಗ್ ವಿರುದ್ಧ ಕೇಸ್ ]

Delhi AAP MLA Akhilesh Tripathi arrested in riot case

ಅರವಿಂದ್ ಕೇಜ್ರಿವಾಲ್ ಸೇರಿದಂತೆ 21 ಆಪ್ ಶಾಸಕರ ವಿರುದ್ಧ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಹಾಕಲು ದೆಹಲಿ ಪೊಲೀಸರು ಸಜ್ಜಾಗಿದ್ದಾರೆ ಎಂಬ ಸುದ್ದಿಯಿದೆ. [ಎಎಪಿ ಶಾಸಕರಿಗೆ ಪೊಲೀಸ್ ಭೀತಿ]

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ರಾಜಕೀಯ ಸಂಬಂಧ 6 ಪ್ರಕರಣಗಳು ಸೇರಿದಂತೆ 25ಕ್ಕೂ ಅಧಿಕ ಕ್ರಿಮಿನಲ್ ಕೇಸುಗಳು ಬಾಕಿ ಉಳಿದಿವೆ. ನಕಲಿ ಪದವಿ, ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ನಂತರ ನಕಲಿ ಮದ್ಯ ಸಂಗ್ರಹದಲ್ಲೂ ಎಎಪಿ ಮುಖಂಡರ ಹೆಸರು ತಗುಲಿ ಹಾಕಿಕೊಂಡಿದೆ.

English summary
In a major blow to Arvind Kejriwal-led Aam Aadmi Party, its MLA Akhilesh Tripathi was arrested by the Delhi Police on Thursday.Tripathi arrested in a 2-yr-old rioting case; Sent to judicial custody by metropolitan magistrate of Rohini court
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X