ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಕ್ತಿಯೊಬ್ಬನ ಜೀವ ಉಳಿಸಿದ ಹೆವೀ ಟ್ರಾಫಿಕ್ಕು

|
Google Oneindia Kannada News

ಬೆಂಗಳೂರು, ನವೆಂಬರ್ 21: ಎಲ್ಲರಿಂದಲೂ ಸಮಾನವಾಗಿ ದ್ವೇಷಿಸಲ್ಪಡುವ ಟ್ರಾಫಿಕ್ಕು ದೆಹಲಿಯಲ್ಲಿ ವ್ಯಕ್ತಿಯೊಬ್ಬನನ್ನು ಕಾಪಾಡಿದೆ.

ಹೌದು, ದೆಹಲಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಗಿಜಿ ಗುಡುವ ಟ್ರಾಫಿಕ್ಕಿನಿಂದಾಗಿ ವ್ಯಕ್ತಿಯೊಬ್ಬ ಅಪಹರಣಕಾರರಿಂದ ಬಚಾವ್ ಆಗಿದ್ದಾನೆ.

ಬೆಂಗಳೂರು ಟ್ರಾಫಿಕ್ ನ ವಿರಾಟ ರೂಪ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ಬೆಂಗಳೂರು ಟ್ರಾಫಿಕ್ ನ ವಿರಾಟ ರೂಪ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

Recommended Video

ಲಂಚ ಪಡೆದ ಪೊಲೀಸರು ಅಮಾನತು

ದೆಹಲಿಯ ಸಚಿನ್ ಪಾಠಕ್ ಎಂಬ ವ್ಯಕ್ತಿಯನ್ನು ಸೋಮವಾರ ಕೆಲವು ದುಷ್ಕರ್ಮಿಗಳು ಓಕ್ಲಾ ಬರ್ಡ್ ಮೆಟ್ರೋ ಸ್ಟೇಷನ್ ಬಳಿ ಅಪಹರಣ ಮಾಡಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಅಲ್ಲಿಂದ ಮುಂದೆ ಕಲಿಂಡ್‌ಕುಂಜ್ ಗಡೆ ಹೊರಟಿದ್ದಾರೆ ಆದರೆ ಅಲ್ಲಿ ಟ್ರಾಫಿಕ್ಕಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.

 Delhi: A Man Escaped From Kidnap Because Of Traffic

ನಂತರ ಟೂ ಟರ್ನ್‌ ತೆಗೆದುಕೊಂಡು ಒನ್‌ವೇ ನಲ್ಲಿ ವಿರುದ್ಧವಾಗಿ ಸೆಕ್ಟೇರ್ 96 ಬಳಿ ಗೋಶಾಲಾ ಕಡೆಗೆ ತೆರಳುತ್ತಿದ್ದ ವೇಳೆ ಕಾರು ಪಂಕ್ಚರ್ ಆಗಿದೆ. ಆಗ ಅಪಹರಣಕಾರರು ಬೇರೆ ವಾಹನ ತಡೆಯಲು ಕಾರಿನಿಂದ ಇಳಿದಿದ್ದಾರೆ. ಇದೇ ಸಮಯಕ್ಕಾಗಿ ಕಾದಿದ್ದ ಸಚಿನ್ ಪಾಠಕ್ ಕಾರಿನಿಂದ ಇಳಿದು ಪರಾರಿ ಆಗಿದ್ದಾರೆ.

ಬೆಂಗಳೂರಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ'ದಟ್ಟಣೆ ತೆರಿಗೆ' ಪರಿಹಾರಬೆಂಗಳೂರಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ'ದಟ್ಟಣೆ ತೆರಿಗೆ' ಪರಿಹಾರ

ಘಟನೆಯ ಬಗ್ಗೆ ಸಚಿನ್ ಪಾಠಕ್‌ ರಿಂದ ದೂರು ಪಡೆದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಇದರಲ್ಲಿ ನಾಲ್ಕು ಮಂದಿ ನೇರವಾಗಿ ಅಪಹರಣದಲ್ಲಿ ಭಾಗಿಯಾಗಿದ್ದರು. ಇನ್ನಿಬ್ಬರು ಅವರಿಗೆ ಸಹಾಯ ಮಾಡಿದ್ದರು. ಆರೋಪಿಗಳು ಕದ್ದ ಕಾರೊಂದರಲ್ಲಿ ಬಂದೂಕು ಮತ್ತಿತರೆ ಆಯುಧಗಳನ್ನು ಇಟ್ಟುಕೊಂಡು ಪ್ರಯಾಣ ಮಾಡಬೇಕಾದರೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

English summary
Delhi man Sachin Phatak escapes from kidnap because of heavy traffic. assailants car struck in traffic and broke down so Sachin Pathak escapes easily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X