ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಮೂರು ಮಕ್ಕಳ ನಿಗೂಢ ಸಾವು, ತನಿಖೆಗೆ ಆದೇಶ

|
Google Oneindia Kannada News

ನವದೆಹಲಿ, ಜುಲೈ 25: ಪೂರ್ವ ದೆಹಲಿಯ ಮಂಡಾವಾಲಿಯಲ್ಲಿ ಮೂರು ಮಕ್ಕಳು ನಿಗೂಢವಾಗಿ ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ದೆಹಲಿ ಸರ್ಕಾರ ಆದೇಶಿಸಿದೆ.

ಪ್ರಾಥಮಿಕ ಶವಪರೀಕ್ಷೆ ವರದಿಯ ಪ್ರಕಾರ ಮಕ್ಕಳು ಅಪೌಷ್ಠಿಕತೆಯಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಈ ಕುರಿತು ಕೂಲಂಕಷ ತನಿಖೆ ನಡೆಸುವಂತೆ ಆದೇಶಿಸಲಾಗಿದೆ.

Delhi: 3 sisters die of starvation, magisterial probe ordered

ಅಪೌಷ್ಟಿಕತೆಯಲ್ಲಿ ಉತ್ತರ ಕೋರಿಯಾಕ್ಕಿಂತ ಕೆಳಸ್ಥಾನದಲ್ಲಿ ಭಾರತ!ಅಪೌಷ್ಟಿಕತೆಯಲ್ಲಿ ಉತ್ತರ ಕೋರಿಯಾಕ್ಕಿಂತ ಕೆಳಸ್ಥಾನದಲ್ಲಿ ಭಾರತ!

2,4, 8 ವರ್ಷದ ಮೂವರು ಸಹೋದರಿಯರು ಬುಧವಾರ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದನ್ನು ಕಂಡ ನೆರೆಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಅವರು ಆಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.

ದೇಹದ ಮೇಲೆ ಯಾವುದೇ ಗಾಯದ ಗುರುತೂ ಇಲ್ಲದ ಕಾರಣ ಇದೊಂದು ಸಹಜ ಸಾವು ಎಂದು ಮೊದಲು ಹೇಳಲಾಗಿತ್ತಾದರೂ. ನಂತರ ಅವರು ಬಿದ್ದಿದ್ದ ಜಾಗದಲ್ಲಿ ಕೆಲವು ಔಷಧಗಳು, ಮಾತ್ರೆಗಳು ಕಾಣಿಸಿದ್ದರಿಂದ ಅವರಿಗೆ ವಿಷ ಉಣಿಸಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿತ್ತು. ಸದ್ಯಕ್ಕೆ ಶವ ಪರೀಕ್ಷೆಯ ಪ್ರಾಥಮಿಕ ವರದಿ, ಅವರು ಹಸಿವು ಮತ್ತು ಅಪೌಷ್ಠಿಕತೆಯಿಂದ ಮೃತರಾಗಿದ್ದಾರೆಂದು ಹೇಳಿದೆಯಾದರೂ, ಈ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ದೆಹಲಿ ಸರ್ಕಾರ ಆದೇಶಿಸಿದೆ.

English summary
The Delhi government on Thursday ordered a magisterial inquiry into the deaths of three sisters who were found dead in east Delhi's Mandawali area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X