ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ವಿವಿ ವಿದ್ಯಾರ್ಥಿ ಕೊಲೆಗೆ ಕಾರಣವಾದ ಸ್ನೇಹ, ಐವರ ಬಂಧನ

|
Google Oneindia Kannada News

ನವದೆಹಲಿ, ಅಕ್ಟೋಬರ್.10: ಅನ್ಯಧರ್ಮೀಯ ಯುವತಿ ಜೊತೆ ಸ್ನೇಹ ಹೊಂದಿದ್ದಕ್ಕೆ 18 ವರ್ಷದ ವಿದ್ಯಾರ್ಥಿಯನ್ನು ಹೊಡೆದು ಕೊಂದಿರುವ ಘಟನೆ ವಾಯುವ್ಯ ದೆಹಲಿಯ ಆದರ್ಶ್ ನಗರದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ನವದೆಹಲಿ ವಿಶ್ವವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿ ರಾಹುಲ್ ರಜಪೂತ್, ಅನ್ಯಧರ್ಮೀಯ ಯುವತಿ ಜೊತೆಗೆ ಗೆಳತನ ಹೊಂದಿದ್ದೇ ಸಾವಿನ ಕಾರಣ ಎಂದು ಆರೋಪಿಸಲಾಗಿದೆ. ಪೊಲೀಸರ ಪ್ರಕಾರ, ರಾಹುಲ್ ರಜಪೂತ್ ಜೊತೆಗಿನ ಸ್ನೇಹಕ್ಕೆ ಯುವತಿ ಸಂಬಂಧಿಕರು ಸಾಕಷ್ಟು ಬಾರಿ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಇಬ್ಬರ ಸ್ನೇಹ ಹಾಗೆ ಮುಂದುವರಿದಿತ್ತು.

ಹತ್ರಾಸ್ ಅತ್ಯಾಚಾರ ಆರೋಪಿಗಳ ಮನೆಗೆ ವಕೀಲ ಎ.ಪಿ ಸಿಂಗ್
ಕಳೆದ ಬುಧವಾರ ಮತ್ತೆ ಯುವತಿ ಜೊತೆಗೆ ರಾಹುಲ್ ರಜಪೂತ ಕಾಣಿಸಿಕೊಂಡಿದ್ದನ್ನು ಯುವತಿಯ ಸಂಬಂಧಿಕರು ನೋಡಿದ್ದರು. ಅದಾದ ಬಳಿಕ ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಐವರು ಆರೋಪಿಗಳ ತಂಡವು ರಾಹುಲ್ ರಜಪೂತ್ ನನ್ನು ನಂದಾ ರಸ್ತೆಗೆ ಬರುವಂತೆ ಕರೆದಿದ್ದರು. ವಿದ್ಯಾರ್ಥಿ ರಾಹುಲ್ ಅಲ್ಲಿಗೆ ಬರುತ್ತಿದ್ದಂತೆ ಐವರು ಆರೋಪಿಗಳು ಆತನ ಮೇಲೆ ಹಲ್ಲೆ ನಡೆಸಿದ್ದು, ಈ ದೃಶ್ಯವು ಸಿಸಿ ಕ್ಯಾಮರಾದಲ್ಲೂ ಕೂಡಾ ಸೆರೆಯಾಗಿತ್ತು.

Delhi: 18-Years Old Student Beaten To Killed For Friendship With Women, 5 Arrested

ಎರಡು ವರ್ಷಗಳ ಸ್ನೇಹಕ್ಕೆ ಸಂಬಂಧಿಕರ ವಿರೋಧ:
ರಾಹುಲ್ ರಜಪೂತ್ ಮತ್ತು ಯುವತಿ ಪರಸ್ಪರ ಪರಿಚಯಸ್ಥರಾಗಿದ್ದರು. ಕಳೆದ ಎರಡು ವರ್ಷಗಳಿಂದಲೂ ಸ್ನೇಹಿತರಾಗಿದ್ದರು. ಯುವತಿ ಸಂಬಂಧಿಕರಿಗೆ ಈ ಸ್ನೇಹವನ್ನು ಸಹಿಸಿಕೊಳ್ಳುವುದಕ್ಕೆ ಆಗಲಿಲ್ಲ. ಅದರಲ್ಲೂ ಯುವತಿ ಸಹೋದರನಂತೂ ತೀರಾ ಕೋಪಗೊಂಡಿದ್ದು, ಹಲವು ಬಾರಿ ಬೆದರಿಕೆ ಹಾಕಿದ್ದನು ಎಂದು ರಾಹುಲ್ ರಜಪೂತ್ ಅವರ ಮಾವ ತಿಳಿಸಿದ್ದಾರೆ.

"ಕಳೆದ ಬುಧವಾರ ನನಗೆ ಒಂದು ಫೋನ್ ಕರೆ ಬಂತು. ಯಾರೋ ನಾಲ್ಕೈದು ಜನರು ನನ್ನ ಅಳಿಯನ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ನನ್ನ ಸ್ನೇಹಿತರು ತಿಳಿಸಿದರು. ನಾವು ಪೊಲೀಸರನ್ನು ಸಂಪರ್ಕಿಸಿದಾಗ ಆ ಯುವತಿ ಸಹೋದರ ಮತ್ತು ಆತನ ಸಂಗಡಿಗರೇ ನನ್ನ ಅಳಿಯ ಮೇಲೆ ಹಲ್ಲೆ ನಡೆಸಿರುವುದು ಎಂದು ತಿಳಿದು ಬಂತು. ನನ್ನ ಅಳಿಯನಿಗೆ ಹೊಡೆದಿದ್ದು, ಆತನ ಮೇಲೆ ಹಲ್ಲೆ ನಡೆಸಿ ಒಡ್ಡಿರುವ ಬಗ್ಗೆ ನಾನು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದೇನೆ" ಎಂದು ಮೃತ ರಾಹುಲ್ ರಜಪೂತ್ ಮಾವ ತಿಳಿಸಿದ್ದಾರೆ.

ದೇಹದ ಮೇಲೆ ಯಾವುದೇ ಗಾಯಗಳಿರಲಿಲ್ಲ:
ರಾಹುಲ್ ರಜಪೂತ್ ದೇಹದ ಮೇಲೆ ಯಾವುದೇ ರೀತಿ ಗಂಭೀರ ಗಾಯಗಳು ಆಗಿರಲಿಲ್ಲ. ಆದರೆ ಹಲ್ಲೆ ನಡೆಸಿದ ಕೆಲವು ಹೊತ್ತಿನ ಬಳಿಕ ಆತನು ವಾಂತಿ ಮಾಡಿಕೊಂಡಿದ್ದು, ತಲೆ ಸುತ್ತಿ ಬೀಳುವ ಪರಿಸ್ಥಿತಿ ತಲುಪಿದ್ದನು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಆತನು ಪ್ರಾಣ ಬಿಟ್ಟಿದ್ದಾನೆ ಎಂದು ಮೃತ ರಾಹುಲ್ ರಜಪೂತ್ ಅವರ ತಂದೆ ಆರೋಪಿಸಿದ್ದಾರೆ.

ಕೇಸ್ ದಾಖಲಿಸಿಕೊಂಡ ಪೊಲೀಸರಿಂದ ಐವರ ಬಂಧನ:
ಭಾರತೀಯ ದಂಡ ಸಂಹಿತೆ 302 ಮತ್ತು 34ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಮೊಹ್ಮದ್ ರಾಜ್, ಮನ್ವರ್ ಹುಸೇನ್ ಸೇರಿದಂತೆ ಮೂವರು ಅಪ್ರಾಪ್ತ ವಯಸ್ಸಿನ ಆರೋಪಿಗಳನ್ನು ಬಂಧಿಸಿದ್ದಾರೆ. ಮೂವರು ಅಪ್ರಾಪ್ತ ಆರೋಪಿಗಳನ್ನು ಬಾಲಗೃಹಕ್ಕೆ ಕಳುಹಿಸಿದ್ದು, ಯುವತಿಯನ್ನು ನಾರಿ ನಿಕೇತನ ಗೃಹಕ್ಕೆ ಕಳುಹಿಸಲಾಗಿದೆ.

ಜಾತಿ ಬಣ್ಣ ಹಚ್ಚುವುದು ಬೇಡ:
ರಾಹುಲ್ ರಜಪೂತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಧರ್ಮದ ಬಣ್ಣ ಬಳಿಯುವುದು ಬೇಡ ಎಂದು ವಾಯುವ್ಯ ದೆಹಲಿ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ಮನವಿ ಮಾಡಿಕೊಂಡಿದ್ದಾರೆ. ಸಂತ್ರಸ್ತ ರಾಹುಲ್ ರಜಪೂತ್ ತಂದೆ ಕೂಡಾ ಅದೇ ಮಾತನ್ನು ಆಡಿದ್ದು, ಈ ಪ್ರಕರಣಕ್ಕೆ ಧರ್ಮದ ಬಣ್ಣ ಹಚ್ಚುವುದು ಬೇಡ ಎಂದಿದ್ದಾರೆ.

English summary
Delhi: 18-Years Old Student Beaten To Killed For Friendship With Women, 5 Arrested
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X