ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಗೆಗೂಡಾದ ದೆಹಲಿ, ಪ್ರತಿ ದಿನ ಕ್ಷೀಣಿಸುತ್ತಿದೆ ವಾಯುಗುಣಮಟ್ಟ

|
Google Oneindia Kannada News

ನವದೆಹಲಿ, ನವೆಂಬರ್ 09: ವಾಯುಮಾಲಿನ್ಯದಿಂದಾಗಿ ದೆಹಲಿ, ಪಂಜಾಬ್, ಹರ್ಯಾಣ, ಉತ್ತರ ಪ್ರದೇಶದ ಲಕ್ಷಾಂತರ ಜನರ ಆರೋಗ್ಯ ಕ್ಷೀಣಿಸುತ್ತಾ ಬರುತ್ತಿದೆ.

ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದೆ. ಕಣ್ಣುರಿ ಹಾಗೂ ತಲೆನೋವಿನಂತಹ ಸಮಸ್ಯೆಗಳಿಗೂ ಇದು ಕಾರಣವಾಗಿದೆ.

ದೆಹಲಿಯಲ್ಲಿ ವಾಯು ಗುಣಮಟ್ಟ ಕೊಂಚ ಸುಧಾರಣೆ ದೆಹಲಿಯಲ್ಲಿ ವಾಯು ಗುಣಮಟ್ಟ ಕೊಂಚ ಸುಧಾರಣೆ

ಕಳೆದ ಕೆಲವು ದಿನಗಳಿಂದ ವಾಯುಮಾಲಿನ್ಯ ದಿಂದಾಗಿ ದೆಹಲಿ,ಎನ್‌ಸಿಆರ್‌ನಲ್ಲಿ ಜನರ ಸ್ಥಿತಿ ಗಂಭೀರವಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ಪ್ರಕಾರ ಸೋಮವಾರ ದೆಹಲಿಯ ಗಾಳಿಯ ಗುಣಮಟ್ಟ ಮತ್ತಷ್ಟು ಕ್ಷೀಣಿಸಿದೆ. ದೆಹಲಿಯ ಆನಂದ್ ಇಲಾಖೆಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 484 ಎಕ್ಯೂಐ, ಮುಂಡಕಾದಲ್ಲಿ 470, ಓಖ್ಲಾದಲ್ಲಿ 465, ವಾಜಿರ್‌ಪುರದಲ್ಲಿ 468 ಎಕ್ಯೂಐ ಇದೆ.

Delh Air Pollution Level Still In Severe Category

ರಾಷ್ಟ್ರ ರಾಜಧಾನಿ ದೆಹಲಿಯ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು ವಾಯುಗುಣಮಟ್ಟ ಅತ್ಯಂತ ಕಳಪೆಮಟ್ಟಕ್ಕೆ ಬಂದು ತಲುಪಿದೆ. ಸೋಮವಾರ ಬೆಳಗ್ಗೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು ಜನರು ಹೈರಾಣಾಗಿದ್ದಾರೆ. ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯಾದರು ಪರಿಸ್ಥಿತಿಯನ್ನು ತಹಬದಿಗೆ ತರುವ ಸರಕಾರದ ಪ್ರಯತ್ನ ಫಲನೀಡುತ್ತಿಲ್ಲ.

ದೀಪಾವಳಿಯ ನಂತರದಲ್ಲಿ ದೆಹಲಿ ಅಕ್ಷರಶಃ ಹೊಗೆಗೂಡಾಗಿ ಪರಿವರ್ತನೆಗೊಂಡಿದೆ. ರಾಷ್ಟ್ರ ರಾಜಧಾನಿಯ ವಾಯುಗುಣಮಟ್ಟ ತೀವ್ರ ಹದಗೆಡುತ್ತಿದ್ದು ಸುಪ್ರೀಂ ಕೋರ್ಟ್ ನೇಮಿಸಿರುವ ಸಮಿತಿ ದೆಹಲಿಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.

English summary
The air quality in Delhi is still in severe category for the third consecutive day on Monday morning. The Air Quality Index (AQI) is 484 in Anand Vihar, 470 in Mundka, 465 in Central Okhla Phase 2 and 468 in Wazirpur, all in the 'severe category' according to the Central Pollution Control Board (CPCB).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X