• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

MSME ಗೆ ಹೊಸ ವ್ಯಾಖ್ಯಾನ: ಹೂಡಿಕೆಯ ಮಿತಿ ಪರಿಷ್ಕರಿಸಿದ ಸರ್ಕಾರ

|

ನವದೆಹಲಿ, ಮೇ 13: ಎಂಎಸ್‌ಎಂಇ (Ministry of Micro, Small and Medium Enterprises)ಗೆ ಕೇಂದ್ರ ಸರ್ಕಾರ ಹೊಸ ರೂಪ ನೀಡಿದೆ. ಅತಿ ಸಣ್ಣ ಕೈಗಾರಿಕೆ, ಸಣ್ಣ ಕೈಗಾರಿಕೆ, ಮಧ್ಯಮ ಕೈಗಾರಿಕೆಯ ಹೂಡಿಕೆಯಲ್ಲಿ ಇದ್ದ ಮೀತಿಯನ್ನು ಸರ್ಕಾರ ಪರಿಷ್ಕರಿಸಿದೆ.

   20 ಲಕ್ಷ ಕೋಟಿಯಲ್ಲಿ ಯಾರಿಗೆ ಎಷ್ಟು ಎಂದು ವಿವರಿಸಿದ ನಿರ್ಮಲ ಸೀತಾರಾಮನ್ | Nirmala Sitharaman

   ಹೊಸ ಪರಿಷ್ಕರಣೆಯ ವಿವರ

   ಅತಿ ಸಣ್ಣ ಕೈಗಾರಿಕೆ: 1 ಕೋಟಿ ರೂಪಾಯಿವರೆಗಿನ ಹೂಡಿಕೆ ಮತ್ತು 5 ಕೋಟಿ ರೂಪಾಯಿವರೆಗಿನ ವಹಿವಾಟು ಹೊಂದಿರುವ ಕಂಪನಿ

   20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ಯಾರಿಗೆ ಸಿಕ್ತು ಲಾಭದ ಪಾಲು.?

   ಸಣ್ಣ ಕೈಗಾರಿಕೆ: 10 ಕೋಟಿ ರೂಪಾಯಿವರೆಗಿನ ಹೂಡಿಕೆ ಹಾಗೂ 50 ಕೋಟಿ ರೂ.ವರೆಗಿನ ವಹಿವಾಟು ಹೊಂದಿರುವ ಕಂಪನಿ

   ಮದ್ಯಮ ಕೈಗಾರಿಕೆ: 20 ಕೋಟಿ ರೂಪಾಯಿವರೆಗಿನ ಹೂಡಿಕೆ ಹಾಗೂ 200 ಕೋಟಿ ರೂಪಾಯಿವರೆಗಿನ ವಹಿವಾಟನ್ನು ಹೊಂದಿರುವ ಕಂಪನಿ

   ಐಟಿ ರಿಟರ್ನ್ಸ್ ಸಲ್ಲಿಕೆ ದಿನಾಂಕ ವಿಸ್ತರಣೆ ಏನು ಲಾಭ?

   ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಎಂಎಸ್‌ಎಂಇ ಹೊಸ ಪರಿಷ್ಕರಣೆಯ ವಿವರವನ್ನು ನೀಡಿದರು. ಲಾಕ್‌ಡೌನ್‌ನಿಂದ ಕುಸಿದಿರುವ ಆರ್ಥಿಕತೆಯನ್ನು ಮೇಲೆ ಎತ್ತಲು ಸರ್ಕಾರ ಈ ನಿಯಮಗಳನ್ನು ತೆಗೆದುಕೊಂಡಿದೆ.

   ಈ ಹಿಂದೆ 25 ಲಕ್ಷಕ್ಕಿಂತ ಕಡಿಮೆ ಹೂಡಿಕೆ ಹಾಗೂ 10 ಲಕ್ಷಕ್ಕಿಂತ ಕಡಿಮೆ ವಹಿವಾಟು ಇರುವ ಕಂಪನಿಯನ್ನು ಅತಿ ಸಣ್ಣ, 5 ಕೋಟಿಗಿಂತ ಕಡಿಮೆ ಹೂಡಿಕೆ ಹಾಗೂ 2 ಕೋಟಿಗಿಂತ ಕಡಿಮೆ ವಹಿವಾಟು ಇರುವ ಸಂಸ್ಥೆಯನ್ನು ಸಣ್ಣ ಹಾಗೂ 10 ಕೋಟಿಗಿಂತ ಕಡಿಮೆ ಹೂಡಿಕೆ ಹಾಗೂ 5 ಕೋಟಿಗಿಂತ ಕಡಿಮೆ ವಹಿವಾಟು ಹೊಂದಿರುವ ಕಂಪನಿಯನ್ನು ಮಧ್ಯಮ ಕೈಗಾರಿಕೆ ಎಂದು ಕರೆಯಲಾಗುತ್ತಿತ್ತು.

   English summary
   Definition of MSMEs gets a revision, Investment limit to be revised upwards, additional criteria of turnover also being introduced.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X