ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಿಂದ ತುರ್ತಾಗಿ ಫೈಟರ್ ಜೆಟ್, ಯುದ್ಧನೌಕೆ ಕಳುಹಿಸಲು ರಾಜನಾಥ್ ಸಿಂಗ್ ಮನವಿ

|
Google Oneindia Kannada News

ನವದೆಹಲಿ, ಜೂನ್ 22: ಚೀನಾ ನಡುವಿನ ಗಡಿ ಸಂಘರ್ಷ ಉತ್ತುಂಗಕ್ಕೇರಿರುವಾಗ ರಷ್ಯಾದಿಂದ ಆದಷ್ಟು ಬೇಗ ಫೈಟರ್ ಜೆಟ್, ಯುದ್ಧ ನೌಕೆ , ಯುದ್ಧ ಟ್ಯಾಂಕರ್‌ಗಳನ್ನು ಕಳುಹಿಸುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾವನ್ನು ಮನವಿ ಮಾಡಲಿದ್ದಾರೆ.

Recommended Video

Karnataka Lockdown? ಲಾಕ್ ಡೌನ್ ಎದುರಿಸಲು ಕರ್ನಾಟಕ ರಾಜ್ಯ ಎಲ್ಲಾ ರೀತಿಯಲ್ಲೂ ರೆಡಿ | Oneindia Kannada

ಎರಡನೇ ಮಹಾಯುದ್ಧದಲ್ಲಿ ವಿಜಯೋತ್ಸವದ 75ನೇ ವರ್ಷಾಚರಣೆಯ ನೆನಪಿಗಾಗಿ ಮಾಸ್ಕೊದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಕ್ಕೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೆರಳಿದ್ದಾರೆ. ಜೂನ್ 24, 2020 ರಂದು ವಿಕ್ಟರಿ ಪೆರೇಡ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

2ನೇ ಮಹಾಯುದ್ಧದ 75 ನೇ ವಿಜಯೋತ್ಸವ ಆಚರಣೆಗೆ ಮಾಸ್ಕೋಗೆ ತೆರಳಲಿರುವ ರಾಜನಾಥ್ ಸಿಂಗ್2ನೇ ಮಹಾಯುದ್ಧದ 75 ನೇ ವಿಜಯೋತ್ಸವ ಆಚರಣೆಗೆ ಮಾಸ್ಕೋಗೆ ತೆರಳಲಿರುವ ರಾಜನಾಥ್ ಸಿಂಗ್

ಮೂರು ದಿನಗಳ ಪ್ರವಾಸ ಇದಾಗಿದ್ದು, ಈ ವೇಳೆ ಫೈಟರ್ ಜೆಟ್‌, ಯುದ್ಧ ಟ್ಯಾಂಕರ್ ಹಾಗೂ ಸಬ್‌ಮೆರಿನ್ ಗಳನ್ನು ಆದಷ್ಟು ಬೇಗ ಜಲ ಮಾರ್ಗದ ಬದಲು ವಾಯು ಮಾರ್ಗದ ಮೂಲಕ ಕಳುಹಿಸುವಂತೆ ಮನವಿ ಮಾಡಲಿದ್ದಾರೆ.

Defence Minister Rajnath Singh Will Request Russia To Urgent Supply Of War Equipments

ರಾಜನಾಥ್ ಸಿಂಗ್ ಈ ಪ್ರವಾಸದ ವೇಳೆ ರಷ್ಯಾದ ಅಗ್ರ ರಾಜಕೀಯ ನಾಯಕರನ್ನು ಭೇಟಿ ಮಾಡಲಿದ್ದು, ಚೀನಾ ಗಡಿ ವಿವಾದದ ಕುರಿತು ವಿವರಿಸಲಿದ್ದಾರೆ.

'' ಈ ಭೇಟಿ ವೇಳೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಷ್ಯಾದಿಂದ ತುರ್ತಾಗಿ ಯುದ್ಧ ಉಪಕರಣಗಳ ಸಾಗಾಟಕ್ಕೆ ಮನವಿ ಮಾಡಲಿದ್ದು, ರಷ್ಯಾದ ಸು-30 ಫೈಟರ್ ಜೆಟ್‌ಗಳು,ಮಿಗ್ -29 ಯುದ್ಧ ವಿಮಾನ, ನೌಕಾದಳಕ್ಕೆ ಮಿಗ್29k ಹಾಗೂ T-90 ಯುದ್ಧ ಟ್ಯಾಂಕರ್‌ಗಳು ಜೊತೆಗೆ ಸಬ್‌ಮೆರಿನ್‌ಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಲಿದ್ದಾರೆ'' ಎಂದು ಸರ್ಕಾರಿ ಮೂಲಗಳು ಎನ್‌ಐಗೆ ತಿಳಿಸಿವೆ.

ಮೂಲಗಳ ಪ್ರಕಾರ ಈ ಯುದ್ಧ ಉಪಕರಣಗಳು ಭಾರತಕ್ಕೆ ಈ ಮೊದಲೇ ತಲುಪುತ್ತಿದ್ದವು. ಆದರೆ ಕೋವಿಡ್-19 ಕಾರಣ ಹಲವು ಸಮಯದಿಂದ ನೌಕೆಗಳು ತಟಸ್ಥವಾಗಿವೆ ಎನ್ನಲಾಗಿದೆ. ಹೀಗಾಗಿ ವಾಯು ಮಾರ್ಗ ಮೂಲಕ ಸಾಗಾಟಕ್ಕೆ ಸಿಂಗ್ ರಷ್ಯಾವನ್ನು ಮನವಿ ಮಾಡಲಿದ್ದಾರೆ.

English summary
Defence Minister Rajnath Singh Will Request Russia To Urgent Supply Of Spares and associated equipment To India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X