ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಎನ್‌ಯು ಭೇಟಿ ನಂತರ ಸ್ಕಿಲ್ ಇಂಡಿಯಾ ವಿಡಿಯೋದಿಂದ ದೀಪಿಕಾ ಔಟ್

|
Google Oneindia Kannada News

ನವದೆಹಲಿ, ಜನವರಿ 10: ಜೆಎನ್‌ಯು ಭೇಟಿ ನೀಡಿ, ಜೆಎನ್‌ಯು ಹಿಂಸಾಚಾರದ ವಿರುದ್ಧ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆಗೆ ಬೆಂಬಲ ನೀಡಿದ ನಂತರ ದೀಪಿಕಾ ಪಡುಕೋಣೆಯನ್ನು ಸ್ಕಿಲ್ ಇಂಡಿಯಾ ವಿಡಿಯೋದಿಂದ ಕೈಬಿಡಲಾಗಿದೆ.

ಕೇಂದ್ರ ಸರ್ಕಾರದ ಸರ್ಕಾರಿ ಯೋಜನೆ ಸ್ಕಿಲ್ ಇಂಡಿಯಾ ದ ಪ್ರಚಾರ ವಿಡಿಯೋದಿಂದ ದೀಪಿಕಾ ಪಡುಕೋಣೆ ಅವರ ದೃಶ್ಯವನ್ನು ಕೈಬಿಡಲಾಗಿದೆ.

ದೀಪಿಕಾ ವಿರುದ್ಧ ರಾಘವೇಂದ್ರ ಔರಾದ್ಕರ್ ಟ್ವೀಟ್‌ ಪ್ರಕರಣಕ್ಕೆ ಟ್ವಿಸ್ಟ್ದೀಪಿಕಾ ವಿರುದ್ಧ ರಾಘವೇಂದ್ರ ಔರಾದ್ಕರ್ ಟ್ವೀಟ್‌ ಪ್ರಕರಣಕ್ಕೆ ಟ್ವಿಸ್ಟ್

ಸ್ಕಿಲ್ ಇಂಡಿಯಾ ಪ್ರಚಾರ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ಅವರು ಆಸಿಡ್ ದಾಳಿಗೆ ತುತ್ತಾದವರ ಪರವಾಗಿ ಹಾಗೂ ಸ್ಕಿಲ್ ಇಂಡಿಯಾ ಯೋಜನೆ ಕುರಿತಾಗಿ ಮಾತನಾಡಿದ್ದರು. ಆದರೆ ದೀಪಿಕಾ ಪಡುಕೋಣೆ ಜೆಎನ್‌ಯು ಭೇಟಿ ನಂತರ ಈ ದೃಶ್ಯಗಳನ್ನು ತೆಗೆದುಹಾಕಲಾಗಿದೆ.

Deepika Padukones Video Dropped From Skill India Promotional Video

ಪ್ರಚಾರ ವಿಡಿಯೋ ಚಿತ್ರೀಕರಣ ಮಾಡುವಾಗ ಈ ದೀಪಿಕಾ ಅಭಿನಯದ ದೃಶ್ಯ ಇತ್ತು. ಆದರೆ ಬುಧವಾರ ವಿಡಿಯೋ ಬಿಡುಗಡೆ ಆದಾಗ ದೀಪಿಕಾ ದೃಶ್ಯ ಅಥವಾ ದ್ವನಿ ವಿಡಿಯೋದಲ್ಲಿ ಇಲ್ಲ. ದೀಪಿಕಾ ಪಡುಕೋಣೆ ಇಲ್ಲದೆ ಪ್ರಚಾರದ ವಿಡಿಯೋ ಬಿಡುಗಡೆ ಸಹ ಆಗಿದೆ.

ಸ್ಕಿಲ್ ಇಂಡಿಯಾ ಪ್ರಚಾರ ವಿಡಿಯೋದಲ್ಲಿ ಈ ಮೊದಲು ದೀಪಿಕಾ ಪಡುಕೋಣೆ ಅವರ 45 ಸೆಕೆಂಡ್‌ಗಳ ದೃಶ್ಯ ಇತ್ತು ಆದರೆ ಈಗ ಆ ದೃಶ್ಯಗಳನ್ನು ಕೈಬಿಡಲಾಗಿದೆ. 'ಸರ್ಕಾರವು ಆಸಿಡ್ ದಾಳಿ ಸಂತ್ರಸ್ತರಿಗೆ ದೇಶದ ಇತರ ನಾಗರೀಕರಂತೆಯೇ ಬದುಕುವ ಅವಕಾಶವನ್ನು ಕಲ್ಪಿಸಿದೆ' ಎಂದು ದೀಪಿಕಾ ಮಾತನಾಡಿರುವ ದೃಶ್ಯಕ್ಕೆ ಕತ್ತರಿ ಹಾಕಲಾಗಿದೆ.

JNU ಪ್ರತಿಭಟನೆಗೆ ಬೆಂಬಲ: ಕಾರಣ ಬಿಚ್ಚಿಟ್ಟ ದೀಪಿಕಾ ಪಡುಕೋಣೆJNU ಪ್ರತಿಭಟನೆಗೆ ಬೆಂಬಲ: ಕಾರಣ ಬಿಚ್ಚಿಟ್ಟ ದೀಪಿಕಾ ಪಡುಕೋಣೆ

ದೀಪಿಕಾ ಅವರು ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದ್ದಕ್ಕೆ ಕೇಂದ್ರ ಸರ್ಕಾರ ಈ ರೀತಿ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಬಿಜೆಪಿ ಸರ್ಕಾರವು ತನ್ನ ವಿರೋಧಿಗಳನ್ನು ಹಣಿಯುವ ಯತ್ನ ಮಾಡುತ್ತಿದೆ ಎಂದು ಕೆಲವು ನೆಟ್ಟಿಗರು ಹೇಳಿದ್ದಾರೆ.

English summary
Actress Deepika Padukone's video dropped from skill India promotional video after she visited JNU.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X