ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

JNU ಪ್ರತಿಭಟನೆಗೆ ಬೆಂಬಲ: ಕಾರಣ ಬಿಚ್ಚಿಟ್ಟ ದೀಪಿಕಾ ಪಡುಕೋಣೆ

|
Google Oneindia Kannada News

Recommended Video

ದೀಪಿಕಾ ಚಿತ್ರಗಳನ್ನು ಬ್ಯಾನ್ ಮಾಡುವಂತೆ ಟ್ವಿಟ್ಟರ್ ನಲ್ಲಿ ಕರೆ | DEEPIKA PADUKONE | JNU | CHAPPAK

ನವದೆಹಲಿ, ಜನವರಿ 08: ನಟಿ ದೀಪಿಕಾ ಪಡುಕೋಣೆ ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದು ದೇಶದಾದ್ಯಂತ ಚರ್ಚೆಯ ವಿಷಯವಾಗಿದೆ.

ಬಾಲಿವುಡ್ ನ ಖಾನ್ ತ್ರಯರು, ದಿಗ್ಗಜರೇ ಜೆಎನ್‌ಯು ಆಗಲಿ, ದೇಶದ ಪಸಕ್ತ ರಾಜಕೀಯ ಸ್ಥಿತಿಯ ಬಗ್ಗೆ ತುಟಿ ಬಿಚ್ಚಲು ಭಯ ಪಡುತ್ತಿರುವ ಈ ವೇಳೆಯಲ್ಲಿ ದೀಪಿಕಾ ಪಡುಕೋಣೆ ಹೀಗೆ ಹಠಾತ್ತನೇ ಜೆಎನ್‌ಯು ವಿದ್ಯಾರ್ಥಿಗಳ ಪರ ನಿಂತಿದ್ದು ಏಕೆ ಎಂಬ ಕುತೂಹಲ ಹಲವರಲ್ಲಿದೆ.

ದೀಪಿಕಾ ಪಡುಕೋಣೆಗೆ ದೀಪಿಕಾ ಪಡುಕೋಣೆಗೆ "ಆಲ್ ದಿ ಬೆಸ್ಟ್' ಹೇಳಿದ ಪ್ರತಾಪ್ ಸಿಂಹ

ತಾವೇಕೆ ಜೆಎನ್‌ಯು ವಿದ್ಯಾರ್ಥಿಗಳನ್ನು ಬೆಂಬಲಿಸಿ ಅವರ ಪ್ರತಿಭಟನೆಗೆ ಹೋದೆ ಎಂಬ ಬಗ್ಗೆ ಸ್ವತಃ ದೀಪಿಕಾ ಪಡುಕೋಣೆ ಕಾರಣ ಬಿಚ್ಚಿಟ್ಟಿದ್ದಾರೆ.

Deepika Padukone Opens Up About JNU Protest

ಖಾಸಗಿ ವಾಹಿನಿಯೊಂದರೊಂದಿಗೆ ಮಾತನಾಡಿದ ದೀಪಿಕಾ ಪಡುಕೋಣೆ, 'ನಾನು ಏನು ಹೇಳಬೇಕೆಂದುಕೊಂಡಿದ್ದೇನೆಯೋ ಅದನ್ನು ಎರಡು ವರ್ಷದ ಹಿಂದೆಯೇ ಹೇಳಿದ್ದೇನೆ, ಪದ್ಮಾವತ್ ಬಿಡುಗಡೆ ಸಂದರ್ಭದಲ್ಲಿಯೇ ನಾನು ಮಾತನಾಡಿದ್ದೇನೆ' ಎಂದಿದ್ದಾರೆ.

'ಇಂದು ಏನನ್ನು ನಾನು ನೋಡುತ್ತಿದ್ದೇನೆಯೋ (ಹಿಂಸಾಚಾರ) ಅದು ನನ್ನನ್ನು ನೋವಿಗೆ ಈಡು ಮಾಡಿದೆ. ಈ ಹಿಂಸಾಚಾರ ಸಾಮಾನ್ಯ ಆಗದೇ ಇರಲಿ ಎಂದು ನಾನು ಪ್ರತಿಭಟಿಸಿದೆ' ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಪದ್ಮಾವತ್ ಬಿಡುಗಡೆ ಸಂದರ್ಭದಲ್ಲಿಯೂ ಸಹ ದೀಪಿಕಾ ಪಡುಕೋಣೆ ವಿರುದ್ಧ ಬಲಪಂಥೀಯ ಪಡೆಗಳು ದಾಳಿ ನಡೆಸಿದ್ದವು. ಪದ್ಮಾವತ್ ಸೆಟ್‌ಗೆ ನುಗ್ಗಿ ದಾಂದಲೆ ಎಬ್ಬಿಸಲಾಗಿತ್ತು. ದೀಪಿಕಾ ಪಡುಕೋಣೆ ಮೂಗು ಕೊಯ್ದರೆ, ಕತ್ತು ಕತ್ತರಿಸಿದರೆ ಬಹುಮಾನ ನೀಡುವುದಾಗಿ ಸಾರ್ವಜನಿಕವಾಗಿ ಹೇಳಲಾಗಿತ್ತು.

ದೀಪಿಕಾ ಪಡುಕೋಣೆ ಸಿನಿಮಾಗಳಿಗೆ ಬಿಜೆಪಿ ಬಹಿಷ್ಕಾರ, ಯಾಕೆ ಗೊತ್ತಾ?ದೀಪಿಕಾ ಪಡುಕೋಣೆ ಸಿನಿಮಾಗಳಿಗೆ ಬಿಜೆಪಿ ಬಹಿಷ್ಕಾರ, ಯಾಕೆ ಗೊತ್ತಾ?

ಆಗ ನಡೆದ ಹಿಂಸಾಚಾರ ಮತ್ತು ಹಿಂಸಾತ್ಮಕ ಪ್ರತಿಭಟನೆ ಬಗ್ಗೆ ಬೇಸರಗೊಂಡಿದ್ದ ದೀಪಿಕಾ ಪಡುಕೋಣೆ ಕೆಲವು ಹೇಳಿಕೆಗಳನ್ನು ನೀಡಿದ್ದರು. ಈಗ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಸಂದರ್ಭದಲ್ಲಿ ಬೀದಿಗೆ ಇಳಿದು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ.

ದೀಪಿಕಾ ಪಡುಕೋಣೆ ಜೆಎನ್‌ಯು ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದೇ ತಡ, ದೀಪಿಕಾ ಪಡುಕೋಣೆಯ ಚಿತ್ರಗಳನ್ನು ಬ್ಯಾನ್ ಮಾಡುವಂತೆ ಟ್ವಿಟ್ಟರ್‌ನಲ್ಲಿ ಕರೆ ನೀಡಲಾಗುತ್ತಿದೆ. ಆದರೆ ದೀಪಿಕಾ ಅವರ ಪರವಾಗಿಯೂ ಸಾಕಷ್ಟು ಸಂಖ್ಯೆಯನ್ನು ನೆಟ್ಟಿಗರು ಮಾತನಾಡುತ್ತಿದ್ದಾರೆ.

English summary
Actress Deepika Padukone opens up about why she join JNU protest in Delhi. She said violence should not be new normal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X