• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ಯಾನ್ ಕಾರ್ಡ್-ಆಧಾರ್ ಲಿಂಕ್ ಮಾಡಲು ಡಿ.31ರ ಗಡುವು

|

ನವದೆಹಲಿ, ಡಿಸೆಂಬರ್ 11: ಕಡ್ಡಾಯವಾಗಿ ಪ್ಯಾನ್ ಕಾರ್ಡ್ ನ್ನು ಆಧಾರ್ ನೊಂದಿಗೆ ಸಂಪರ್ಕ ಕಲ್ಪಿಸಲು 2019 ರ ಡಿಸೆಂಬರ್ 31 ಕೊನೆಯ ದಿನವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಈ ಹಿಂದೆ ಹಣಕಾಸು ಸಚಿವಾಲಯ ಸೆಪ್ಟೆಂಬರ್ 30 ರ ಗಡುವು ನೀಡಲಾಗಿತ್ತು. ತಪ್ಪಿದರೆ ಏನಾಗುತ್ತದೆ? ಲಿಂಕ್ ಮಾಡುವ ವಿಧಾನ ಹೇಗೆ? ಇಲ್ಲಿದೆ ವಿವರ.

ಕನ್ನಡದಲ್ಲೇ ಆಧಾರ್ ಕಾರ್ಡ್ ಮಾಹಿತಿ ಪಡೆಯಬಹುದು!

ಪ್ಯಾನ್-ಆಧಾರ್ ಲಿಂಕ್ ಮಾಡುವುದು ಹೇಗೆ?

1) ಆದಾಯ ತೆರಿಗೆ ಇ-ಫೈಲಿಂಗ್ ವೆಬ್ ಸೈಟ್ ನಲ್ಲಿ ಈಗಾಗಲೇ ನೀವು ಬಳಕೆದಾರರಾಗಿ ನೋಂದಣಿ ಆಗಿದ್ದರೆ, ಐಟಿಆರ್ ಸಲ್ಲಿಸಿದ್ದರೆ ಈಗಾಗಲೇ ಲಿಂಕ್ ಆಗಿರಬಹುದು, ತೆರಿಗೆ ಇಲಾಖೆಯ ಬಳಿ ಎರಡು ಮಾಹಿತಿ ಇದ್ದರೆ ಲಿಂಕ್ ಆಗಿರಬಹುದು. www.incometaxindiaefiling.gov.in ವೆಬ್ ಸೈಟ್ ಗೆ ಲಾಗಿನ್ ಆಗಿ ಪರಿಶೀಲಿಸಿ.

2) ಇ-ಫೈಲಿಂಗ್ ವೆಬ್ಸೈಟ್ ನಲ್ಲಿ ರಿಜಿಸ್ಟರ್ ಆಗಿರದಿದ್ದರೆ, ಅದೇ ವೆಬ್ಸೈಟ್ ನಲ್ಲಿ 'ಲಿಂಕ್ ಆಧಾರ್' ಮೇಲೆ ಕ್ಲಿಕ್ಕಿಸಿ. ನಿಗದಿತ ಅಮೂನೆಯ ಅರ್ಜಿಯಲ್ಲಿ ವಿವರಗಳಳನ್ನು ಭರ್ತಿಗೊಳಿಸಿ ಲಿಂಕ್ ಮಾಡಬಹುದು.

3) ಆಧಾರ್ ಕಾರ್ಡ್ ನಲ್ಲಿ ಜನ್ಮದಿನ ವರ್ಷ ಮಾತ್ರ ಇದ್ದರೆ, ಐ ಹ್ಯಾವ್ ಒನ್ಲಿ ಯಿಯರ್ ಆಫ್ ಬರ್ತ್ ಇನ್ ಆಧಾರ್ ಕಾರ್ಡ್' ಎಂಬ ಆಯ್ಕೆಯನ್ನು ಒತ್ತಿ.

4) ಕೊನೆಗೆ ಕ್ಯಾಪ್ಚಾಕೋಡ್ ಎಂಟರ್ ಮಾಡಿ. ಸಬ್ ಮಿಟ್ ಒತ್ತಿ. ಅಲ್ಲಿಗೆ ಪ್ರಕ್ರಿಯೆ ಮುಕ್ತಾಯವಾಗುತ್ತದೆ.

ಇತರ ವಿಧಾನಗಳು

ಸಿಬಿಡಿಟಿಯು ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಮಿಸ್ ಮ್ಯಾಚ್ ಅಗುವುದಿದ್ದರೆ ಇತರ ವಿಧಾನವನ್ನೂ ಸೂಚಿಸಿದೆ. ನೀವು ಪ್ಯಾನ್ ಸರ್ವೀಸ್ ಪ್ರೊವೈಡರ್ ಬಳಿ ತೆರಳಿ ಸಂಬಂಧಿಸಿದ ಪ್ಯಾನ್ ಮತ್ತು ಆಧಾರ್ ದಾಖಲಾತಿಯ ಪ್ರತಿಗಳನ್ನು ಸಲ್ಲಿಸಿ ಲಿಂಕ್ ಮಾಡಬಹುದು. ಪ್ಯಾನ್ ವಿವರ ಬದಲಾವಣೆಗೆ 110 ರೂ, ಶುಲ್ಕವಿರುತ್ತದೆ. ಆಧಾರ್ ವಿವರ ಪರಿಷ್ಕರಣೆಗೆ 25 ರೂ, ಶುಲ್ಕವಿರುತ್ತದೆ.

ಫೇಸ್ಬುಕ್ ಖಾತೆ ಜೊತೆ ಆಧಾರ್ ಜೋಡಣೆ ನಿಜವೇ? ಸರ್ಕಾರ ಹೇಳಿದ್ದೇನು?

ಲಿಂಕ್ ಯಾಕೆ ಆಗತ್ಯ

1) 2020 ರ ಏಪ್ರಿಲ್ 1 ರಿಂದ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಪ್ಯಾನ್ ಮತ್ತು ಆಧಾರ್ ಲಿಂಕಿಂಗ್ ಕಡ್ಡಾಯವಾಗಿದೆ.

2) ಡಿಸೆಂಬರ್ 31 ರೊಳಗೆ ಲಿಂಕ್ ಮಾಡದಿದ್ದರೆ, ಪ್ರಸಕ್ತ ಕಾನೂನು ನಿಯಾಮವಳಿ ಪ್ರಕಾರ ಪ್ಯಾನ್ ನಿಷ್ಕ್ರಿಯವಾಗುತ್ತದೆ.

English summary
December 31, 2019 Is The Last Day For Mandatory PAN Card connectivity With Adhaar Card The Finance Ministry Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X