ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವೂದ್ ಎಲ್ಲಿದ್ದಾನೋ ನಮಗೆ ಗೊತ್ತಿಲ್ಲ: ಮೋದಿ ಸರ್ಕಾರ್

By Mahesh
|
Google Oneindia Kannada News

ನವದೆಹಲಿ, ಮೇ.5: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಎಲ್ಲಿದ್ದಾನೋ ನಮಗೆ ಗೊತ್ತಿಲ್ಲ, ಎಲ್ಲಿದ್ದಾನೆ ಎಂದು ತಿಳಿದರೆ ಆತನನ್ನು ಬಂಧಿಸುವ ಪ್ರಕ್ರಿಯೆಗೆ ಚಾಲನೆ ನೀಡುತ್ತೇವೆ ಎಂದು ಮೋದಿ ಸರ್ಕಾರ ತನ್ನ ಅಧಿಕೃತ ಹೇಳಿಕೆಯನ್ನು ಲೋಕಸಭೆಯಲ್ಲಿ ಮಂಗಳವಾರ ನೀಡಿದೆ.

ಇತ್ತೀಚೆಗೆ ಸಿಬಿಐನ ನಿವೃತ್ತ ಡಿಐಜಿ ನೀರಜ್ ಕುಮಾರ್ ಅವರು ದಾವೂದ್ ಇಬ್ರಾಹಿಂ ಈ ಹಿಂದೆ ಶರಣಾಗತನಾಗಲು ಬಯಸಿದ್ದ ಆದರೆ, ಸಿಬಿಐ ಇದಕ್ಕೆ ಒಪ್ಪಲಿಲ್ಲ ಎಂದು ಹೇಳಿಕೆ ನೀಡಿ ಎಲ್ಲರ ಹುಬ್ಬೇರಿಸಿದ್ದರು. ಇದಾದ ಬಳಿಕ ದಾವೂದ್ ಬಂಧನ ಸುದ್ದಿ ಮಾಧ್ಯಮಗಳಿಗೆ ಮಾತ್ರ ದೊಡ್ಡ ಸುದ್ದಿ ಏನಲ್ಲ

ಬಿಜೆಪಿ ಸಂಸದ ನಿತ್ಯಾನಂದ ರಾಯ್ ಅವರು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುರಿತು ಕೇಳಿದ್ದ ಪ್ರಶ್ನೆಗೆ ಗೃಹಖಾತೆ ರಾಜ್ಯ ಸಚಿವ ಹರಿಭಾಯ್ ಚೌಧುರಿ ಈ ಉತ್ತರ ನೀಡಿದ್ದಾರೆ.

Dawood Ibrahim's location is not known to the government, Lok Sabha told

1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪಿ ದಾವೂದ್ ಇಬ್ರಾಹಿಂ ಯಾವ ಸ್ಥಳದಲ್ಲಿ ಇದ್ದಾನೆ ಎಂಬುದು ತಿಳಿದಿಲ್ಲ. ಪಾತಕಿ ದಾವೂದ್ ಇಬ್ರಾಹಿಂ ಎಲ್ಲಿದ್ದಾನೆ ಎಂದು ತಿಳಿದರೆ ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು ಎಂದಿದ್ದಾರೆ.

ಭಾರತಕ್ಕೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಬಗ್ಗೆ ಗೃಹ ಇಲಾಖೆ ಉತ್ತರ ಅನೇಕ ಮಂದಿ ಹುಬ್ಬೇರಿಸಿದೆ. ಪಾಕಿಸ್ತಾನ- ಅಫ್ಘಾನಿಸ್ತಾನದ ಬಾರ್ಡರ್ ನಲ್ಲಿ ದಾವೂದ್ ನೆಲೆಸಿದ್ದಾನೆ ಎಂದೇ ನಂಬಲಾಗಿತ್ತು. ಅದರೆ, ಈಗ ದಾವೂದ್ ಇರುವಿಕೆ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಡಿಸೆಂಬರ್ 27, 2014ರಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಲಕ್ನೋದಲ್ಲಿ ಮಾತನಾಡುತ್ತಾ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ. ಆತನನ್ನು ಹಸ್ತಾಂತರಿಸುವಂತೆ ಪಾಕಿಸ್ತಾನಕ್ಕೆ ಮನವಿ ಮಾಡಲಾಗಿದೆ ಎಂದಿದ್ದರು.

ಮೋದಿ ಸರ್ಕಾರ ಬಂದ ಮೇಲೆ ದಾವೂದ್ ಇಬ್ರಾಹಿಂ ತನ್ನ ನೆಲೆಯಾದ ಕರಾಚಿ ತೊರೆದು ಅಫ್ಘಾನಿಸ್ತಾನದ ಗಡಿಭಾಗದಲ್ಲಿ ನೆಲೆಸಿದ್ದಾನೆ ಎನ್ನಲಾಗಿತ್ತು. ನಂತರ ದುಬೈ ಕಡೆ ತೆರಳಿದ ಸುದ್ದಿ ಬಂದಿತ್ತು. ಆದರೆ, ಖಚಿತ ಮಾಹಿತಿ ಯಾರಿಗೂ ಸಿಕ್ಕಿಲ್ಲ. (ಪಿಟಿಐ)

English summary
Underworld don Dawood Ibrahim's location is not known to the government and once he is located, his extradition process will be initiated, Lok Sabha was informed on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X