ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

24 ಗಂಟೆಗಳಲ್ಲಿ ಹೆಚ್ಚಲಿದೆ ಫ್ಯಾನಿ ಅಬ್ಬರ, ಒಡಿಶಾದಲ್ಲಿ ಹೈ ಅಲರ್ಟ್

|
Google Oneindia Kannada News

ನವದೆಹಲಿ, ಏಪ್ರಿಲ್ 30: ಮುಂದಿನ 24 ಗಂಟೆಗಳಲ್ಲಿ ಫ್ಯಾನಿ ಚಂಡಮಾರುತದ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದ್ದು, ಒಡಿಶಾದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಫಾನಿ ಚಂಡಮಾರುತದ ಪ್ರಭಾವದಿಂದ ಗುಂಡ್ಲುಪೇಟೆ ಸುತ್ತ ಭಾರೀ ಮಳೆ ಫಾನಿ ಚಂಡಮಾರುತದ ಪ್ರಭಾವದಿಂದ ಗುಂಡ್ಲುಪೇಟೆ ಸುತ್ತ ಭಾರೀ ಮಳೆ

ಈಗಾಗಲೇ ತಮಿಳುನಾಡು, ಆಂಧ್ರಪ್ರದೇಶ, ಪಶ್ಚಿಮ ಬಂಗಾಳಗಳಲ್ಲಿ ಫ್ಯಾನಿ ಅಬ್ಬರ ಕೊಂಚ ತಗ್ಗಿದ್ದು, ಕರ್ನಾಟಕದಲ್ಲಿ ಅದರ ಪರಿಣಾಮವಾಗಿ ಕೆಲವೆಡೆ ಮಳೆಯಾಗಿದೆ.

ಮುಂದಿನ ಆರು ಗಂಟೆಗಳಲ್ಲಿ ಅಬ್ಬರಿಸಲಿದೆ ಸೈಕ್ಲೋನ್ 'ಫ್ಯಾನಿ'ಮುಂದಿನ ಆರು ಗಂಟೆಗಳಲ್ಲಿ ಅಬ್ಬರಿಸಲಿದೆ ಸೈಕ್ಲೋನ್ 'ಫ್ಯಾನಿ'

ಆದರೆ ಪಥ ಬದಲಿಸಿರುವ ಫ್ಯಾನಿ ಒಡಿಶಾದಲ್ಲಿ ಭಾರೀ ಮಳೆಯನ್ನುಂಟು ಮಾಡುವ ಸಾಧ್ಯತೆ ಇದೆ. ಈಗಾಗಲೇ ಮುನ್ನೆಚ್ಚರಿಕೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಕರಾವಳಿ ಪ್ರದೇಶಗಳಲ್ಲಿ ಬೀಡುಬಿಟ್ಟಿದೆ.

Cyclone Fani: IMD warns it will intensify into very severe cyclonic storm

ಮೀನುಗಾರರಿಗೆ ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಮೇ 1, 2 ಮತ್ತು 3 ರಂದು ಒಡಿಶಾದ ಕರಾವಳಿ ಭಾಗಕ್ಕೆ ಈ ಚಂಡಮಾರುತ ಧಾವಿಸಲಿದ್ದು, ಅಲ್ಲಿ ಮೇ 3 ರಂದು ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಗಂಟೆಗೆ ಸುಮಾರು 175 ಕಿಮೀ ವೇಗದಲ್ಲಿ ಗಾಳಿ ಚಲಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

English summary
As Cyclone Fani hits Coastal states like Tamil Nadu, Andhra Pradesh and Odisha, West Bengal Indian Meteorological Department warned on Monday that it Fani is very likely to intensify into a very severe cyclonic storm in next 24 hours
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X