ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಬರ್ ಕ್ರೈಂ ಭಾರತದ ಭದ್ರತೆಗೆ ದೊಡ್ಡ ಸವಾಲು: ರಾಜನಾಥ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 07: 'ಭಾರತದ ಭದ್ರತೆಗೆ ಸೈಬರ್ ಕ್ರೈ ಒಂದು ಬಹುದೊಡ್ಡ ಸವಾಲಾಗಿದೆ' ಎಂದು ಗೃಹಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟರು.

ನವದೆಹಲಿಯಲ್ಲಿ ಗುರುವಾರ ಆರಂಭವಾದ ಎರಡು ದಿನಗಳ ಡಿಫೆನ್ಸ್ ಅಂಡ್ ಹೋಮ್ ಮೇಡ್ ಸೆಕ್ಯುರಿಟಿ ಎಕ್ಸ್ ಪೋ ಉದ್ಘಾಟಿಸಿದ ಅವರು ಮಾತನಾಡುತ್ತಿದ್ದರು.

ಸೈಬರ್ ದಾಳಿ: ಪುಣೆಯ ಕಾಸ್ಮೊಸ್ ಬ್ಯಾಂಕಿನ ಸರ್ವರ್ ಗೆ ಕನ್ನಸೈಬರ್ ದಾಳಿ: ಪುಣೆಯ ಕಾಸ್ಮೊಸ್ ಬ್ಯಾಂಕಿನ ಸರ್ವರ್ ಗೆ ಕನ್ನ

'ನಮ್ಮ ಭದ್ರತಾ ದಳ ಹೊಸ ಹೊಸ ಸಾಫ್ಟ್ ವೇರ್ ಗಳ ಮೂಲಕ ಮತ್ತು ಮುಖಪತ್ತೆ ಮಾಡಬಲ್ಲ ಹೊಸ ತಂತ್ರಜ್ಞಾನದ ಮೂಲಕ ಅಪರಾಧಿಗಳನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಸೈಬರ್ ಕ್ರೈಂ ಮಾಡುವವರು ಬಹಳ ನಿಷ್ಣಾತರು. ಅವರು ನಮ್ಮ ಗೌಪ್ಯ ದಾಖಲೆಗಳನ್ನು ಕದಿಯುವ ಪ್ರಯತ್ನ ಮಾಡುತ್ತಿದ್ದಾರೆ' ಎಂದು ಅವರು ಕಳವಳ ವ್ಯಕ್ತಪಡಿಸಿದರು.

Cyber crimes posing big challenge to security establishment: Rajnath Singh

ಇದು ಹೊಸ ರೀತಿ ಬ್ಲ್ಯಾಕ್ ಮೇಲ್, ಭಾರತದ ಮೊದಲ ಪ್ರಕರಣ ಬೆಂಗ್ಳೂರಲ್ಲಿಇದು ಹೊಸ ರೀತಿ ಬ್ಲ್ಯಾಕ್ ಮೇಲ್, ಭಾರತದ ಮೊದಲ ಪ್ರಕರಣ ಬೆಂಗ್ಳೂರಲ್ಲಿ

ಕೆಲವೊಮ್ಮೆ ಸಿಸಿಟಿವಿ ಕ್ಯಾಮೆರಾಗಳಿದ್ದರೂ ಅಪರಾಧಿಗಳನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಆದ್ದರಿಂದ ಫೇಸ್ ರಿಕಗ್ನಿಷನ್ ತಂತ್ರಜ್ಞಾನದ ಮೂಲಕ ಅಪರಾಧಿಯ ಚಲನವಲನಗಳ ಮೇಲೆ ಕಣ್ಣಿಡುವುದಕ್ಕೆ ಸಾಧ್ಯ. ಅಂಥ ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರ ಮತ್ತು ಅವುಗಳ ಸದ್ಬಳಕೆ ನಡೆಯುತ್ತಿರುವುದು ಸಂತಸದ ಸುದ್ದಿ' ಎಂದು ಅವರು ಹೇಳಿದರು.

English summary
Cybercrimes were posing a big challenge to the security establishment, opined Home Minister Rajnath Singh on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X