• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಪರಾಧ ಹಿನ್ನೆಲೆಯುಳ್ಳ ರಾಜಕಾರಣಿಗಳಿಗೆ ಆಯೋಗ ಆಘಾತ

|

ನವದೆಹಲಿ, ಜನವರಿ 24: ರಾಜಕಾರಣ ಪ್ರವೇಶಕ್ಕೆ ಮೊದಲ ಅರ್ಹತೆ ಅಪರಾಧ ಎನ್ನುವ ಮಾತು ಚಾಲ್ತಿಯಲ್ಲಿದೆ. ಆದರೆ ರಾಜಕಾರಣದಲ್ಲಿ ಅಪರಾಧ ಹಿನ್ನೆಲೆಯ ವ್ಯಕ್ತಿಗಳಿಗೆ ಪೂರ್ಣ ವಿರಾಮ ಇಡಲು ಚುನಾವಣೆ ಆಯೋಗ ನಿರ್ಧರಿಸಿದೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಗೆ ಅಭಿಪ್ರಾಯ ತಿಳಿಸಿರುವ ಕೇಂದ್ರ ಚುನಾವಣಾ ಆಯೋಗ 'ಅಪರಾಧ ಹಿನ್ನೆಲೆ ಇರುವವರಿಗೆ ಚುನಾವಣೆ ಸ್ಪರ್ಧಿಸದಂತೆ ತಡೆ ನೀಡಬೇಕು' ಎಂದಿದೆ.

ಚುನಾವಣಾ ಬಾಂಡ್ ಯೋಜನೆ ತಡೆ ಕುರಿತಂತೆ ಸುಪ್ರೀಂ ಮಹತ್ವದ ಆದೇಶ

ರಾಜಕಾರಣಿಗಳು ತಮ್ಮ ಅಪರಾಧ ಪ್ರಕರಣವನ್ನು ಟಿವಿ ಮತ್ತು ಪತ್ರಿಕೆಗಳಲ್ಲಿ ಜಾಹೀರಾತಾಗಿ ಪ್ರಕಟಿಸಬೇಕು ಎಂದು 2018 ರಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು. ಆದರೆ ಇದು ಅಪರಾಧ ಹಿನ್ನೆಲೆಯವರು ರಾಜಕಾರಣಕ್ಕೆ ಬರುವುದನ್ನು ತಡೆಯಲು ಸಾಧ್ಯವಾಗಿಲ್ಲ ಎಂದು ಚುನಾವಣಾ ಆಯೋಗ ಸುಪ್ರೀಂಕೋರ್ಟ್‌ ಗೆ ತಿಳಿಸಿದೆ.

'ಒಂದು ತಿಂಗಳ ಒಳಗಾಗಿ ಅಪರಾಧ ಹಿನ್ನೆಲೆಯ ವ್ಯಕ್ತಿಗಳು ರಾಜಕಾರಣಕ್ಕೆ ಬರದಂತೆ ತಡೆಯಲು ಮಾರ್ಗಸೂಚಿಗಳನ್ನು ತಯಾರಿಸಿ ನೀಡಿ' ಎಂದು ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

2018 ರ ಸೆಪ್ಟೆಂಬರ್‌ ನಲ್ಲಿ ಆದೇಶ ನೀಡಿದ್ದ ಸುಪ್ರೀಂಕೋರ್ಟ್, ಚುನಾವಣಾ ಉಮೇದುವಾರರು ತಮ್ಮ ಅಪರಾಧ ಪ್ರಕರಣಗಳ ಜಾಹೀರಾತನ್ನು ಟಿವಿ ಮತ್ತು ಪತ್ರಿಕೆಗಳ ಜಾಹೀರಾತಾಗಿ ಪ್ರಕಟಿಸಬೇಕು ಎಂದಿತ್ತು. ಇದರಿಂದ ಅಪರಾಧ ಹಿನ್ನೆಲೆಯವರು ರಾಜಕೀಯಕ್ಕೆ ಬರುವುದು ಕಡಿಮೆ ಆಗುತ್ತದೆ ಎನ್ನಲಾಗಿತ್ತು, ಆದರೆ ಹಾಗೆ ಆಗಿಲ್ಲ.

English summary
Central election commission told supreme court that criminal candidates should not be allowed to contest election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X