• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಟಿ ಪ್ರೇಕ್ಷಾ ಮೆಹ್ತಾ ಆತ್ಮಹತ್ಯೆ: 'ಡೆತ್ ಆಫ್ ಡ್ರೀಮ್ಸ್' ಸ್ಟೇಟಸ್ ಹೇಳೋದೇನು?

|

ನವದೆಹಲಿ, ಮೇ 27: ಹಿಂದಿ ಕಿರುತೆರೆ ನಟಿ ಪ್ರೇಕ್ಷಾ ಮೆಹ್ತಾ (25) ಸೋಮವಾರ ತಡರಾತ್ರಿ ಇಂದೋರ್‌ನ ಭಜರಂಗ್ ನಗರದಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಿರುತೆರೆ ನಟಿ ಪ್ರೇಕ್ಷಾ ಮುಂಬೈನಲ್ಲಿ ವಾಸಿಸುತ್ತಿದ್ದರು. ಲಾಕ್‌ಡೌನ್ ಪ್ರಾರಂಭವಾಗುವ ಮೊದಲು ಅವಳು ತನ್ನ ಮನೆಗೆ ಮರಳಿದ್ದಳು, ಕಿರುತೆರೆಯಲ್ಲಿ ಮೂಡಿ ಬರುವ 'ಕ್ರೈಂ ಪೆಟ್ರೋಲ್'ನ ಹಲವಾರು ಎಪಿಸೋಡ್ ಗಳಲ್ಲಿ ಪ್ರೇಕ್ಷಾ ನಟಿಸಿದ್ದಾರೆ.

ದಾಂಡೇಲಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ವೃದ್ಧೆ ಆತ್ಮಹತ್ಯೆ

ಲಾಕ್​ಡೌನ್​ನಿಂದಾಗಿ ಮನೆಯವರೊಂದಿಗೆ ಇದ್ದ ಪ್ರೇಕ್ಷಾ ಸೋಮವಾರ ರಾತ್ರಿ ತಮ್ಮ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರಂತೆ. ಬೆಳಿಗ್ಗೆ ಅವರ ತಂದೆ ರೂಮಿಗೆ ಹೋದಾಗ ಮಗಳು ನೇಣಿಗೆ ಶರಣಾಗಿದ್ದು ತಿಳಿದಿದೆ ಎನ್ನಲಾಗುತ್ತಿದೆ.

ದಾರವಾಹಿಗಳು ನಿಂತು ಹೋಗಿದ್ದವು

ದಾರವಾಹಿಗಳು ನಿಂತು ಹೋಗಿದ್ದವು

ಲಾಕ್​ಡೌನ್​ನಿಂದಾಗಿ ಧಾರಾವಾಹಿಯ ಕೆಲಸಗಳು ನಿಂತು ಹೋಗಿದ್ದು, ಪ್ರೇಕ್ಷಾ ತೀರಾ ಬೇಸರದಲ್ಲಿದ್ದರಂತೆ. ಇದರಿಂದಾಗಿ ಸೋಮವಾರ ರಾತ್ರಿ ನೇಣಿಗೆ ಶರಣಾಗಿದ್ದಾರೆ ಎನ್ನುತ್ತಿದ್ದಾರೆ ಮನೆಯವರು. ಆದರೆ ಪೊಲೀಸರ ಪ್ರಕಾರ ಆತ್ಮಹತ್ಯೆಗೆ ಕಾರಣ ಏನೆಂದು ಇನ್ನೂ ತಿಳಿದು ಬಂದಿಲ್ಲ.

ಇನ್‌ಸ್ಟಾಗ್ರಾಂನಲ್ಲಿ ಡೆತ್ ಆಫ್ ಡ್ರೀಮ್ಸ್ ಸ್ಟೇಟಸ್

ಇನ್‌ಸ್ಟಾಗ್ರಾಂನಲ್ಲಿ ಡೆತ್ ಆಫ್ ಡ್ರೀಮ್ಸ್ ಸ್ಟೇಟಸ್

ಆತ್ಮಹತ್ಯೆಗೂ ಮೊದಲು ಪ್ರೇಕ್ಷಾ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸ್ಟೇಟಸ್ ಅಪ್ಡೇಟ್ ಮಾಡಿದ್ದಾಳೆ. ತನ್ನ ಸ್ಟೇಟಸ್ ನಲ್ಲಿ ನಟಿ ಅವತಾರ್ ಶಿಂಗ್ ಪಾಷಾ ಅವರ ಕವಿತೆ 'ಸಬ್ ಸೆ ಬುರಾ ಹೋತಾ ಹೈ ಸಪ್ನೋ ಕಾ ಮರ್ ಜಾನಾ'ದ ಸಾಲುಗಳನ್ನು ಬರೆದುಕೊಂಡಿದ್ದಾಳೆ.

ಕನಸುಗಳು ನುಚ್ಚು ನೂರಾದರೆ ತುಂಬಾ ನೋವಾಗುತ್ತದೆ ಎಂದು ಸ್ಟೇಟಸ್​ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಲಾಕ್​ಡೌನ್​ ಎಫೆಕ್ಟ್​ ಜೊತೆಗೆ ಬೇರೆ ಕಾರಣಗಳೂ ಆತ್ಮಹತ್ಯೆಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.

ಪ್ರೇಕ್ಷಾ ಕಿರುತೆರೆಗೆ ಬಂದಿದ್ದು ಹೇಗೆ?

ಪ್ರೇಕ್ಷಾ ಕಿರುತೆರೆಗೆ ಬಂದಿದ್ದು ಹೇಗೆ?

ಅಭಿಜೀತ್ ವಾಡ್ಕರ್, ಸಂತೋಷ್ ರೆಗೆ ಮತ್ತು ನಾಗೇಂದ್ರ ಸಿಂಗ್ ರಾಥೋಡ್ ಅವರ 'ಡ್ರಾಮಾ ಫ್ಯಾಕ್ಟರಿ' ನಾಟಕ ಗುಂಪಿನೊಂದಿಗೆ ಪ್ರೇಕ್ಷಾ ತನ್ನ ರಂಗಭೂಮಿಯ ಕರಿಯರ್ ಆರಂಭಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.

ಮಾಂಟೋ ಬರೆದ 'ಖೋಲ್ ದೋ' ನಾಟಕದಲ್ಲಿ ಅವರು ತಮ್ಮ ಮೊದಲ ಸ್ಟೇಜ್ ಪರ್ಫಾರ್ಮೆನ್ಸ್ ನೀಡಿದ್ದರು. ಅವರು 'ಖೂಬ್ಸೂರತ್ ಬಹು', 'ಬೂಂದೇ' 'ರಾಕ್ಷಸ್', 'ಪ್ರತಿಬಿಂಬ', ಪಾರ್ಟ್ನರ್' 'ಹಾಂ', 'ಥ್ರಿಲ್' ಹಾಗೂ 'ಅಧೂರಿ ಮಹಿಳಾ' ಗಳಂತಹ ಮುಂತಾದ ನಾಟಕಗಳಲ್ಲಿ ಕೆಲಸ ಮಾಡಿದ್ದರು.

ರಾಷ್ಟ್ರೀಯ ನಾಟ್ಯ ಮಹೋತ್ಸವದಲ್ಲಿ ಮೊದಲ ಬಹುಮಾನ

ರಾಷ್ಟ್ರೀಯ ನಾಟ್ಯ ಮಹೋತ್ಸವದಲ್ಲಿ ಮೊದಲ ಬಹುಮಾನ

ಅಭಿನಯಕ್ಕಾಗಿ ಅವರಿಗೆ ಮೂರು ರಾಷ್ಟ್ರೀಯ ನಾಟ್ಯ ಮಹೋತ್ಸವದಲ್ಲಿ ಮೊದಲ ಬಹುಮಾನ ಕೂಡ ಲಭಿಸಿದ್ದವು. ಏಕಾಂಗಿ ನಾಟಕ 'ಸಡಕ್ ಕೆ ಕಿನಾರೆ' ನಾಟಕದಲ್ಲಿನ ನಟನೆಗೆ ಅವರಿಗೆ ಅವಾರ್ಡ್ ಕೂಡ ಲಭಿಸಿದೆ.

ಅಭಿನಯಿಸುವ ಅವರ ಮಹತ್ವಾಕಾಂಕ್ಷೆಯೇ ಇಂದು ಪ್ರೇಕ್ಷಾ ಅವರ ಪ್ರಾಣ ತೆಗೆದಿದೆ. ಪ್ರೇಕ್ಷಾ ಆತ್ಮಹತ್ಯೆಯ ಕುರಿತು ಹೇಳಿಕೆ ನೀಡಿರುವ ಅವಳ ಕುಟುಂಬ ಸದಸ್ಯರು ಲಾಕ್ ಡೌನ್ ಹಿನ್ನೆಲೆ ಕೆಲಸ ಸ್ಥಗಿತಗೊಂಡ ಕಾರಣ ಪ್ರೇಕ್ಷಾ ಸಾಕಷ್ಟು ಒತ್ತಡದಲ್ಲಿದ್ದರು ಎಂದು ಹೇಳಿದ್ದಾರೆ.

English summary
Popular TV actor Preksha Mehta, best known for featuring in shows such as Crime Patrol, Meri Durga and Laal Ishq, has reportedly committed suicide at her residence here. She was 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more