ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಲಿಟರಿ ರಹಸ್ಯ ಬಿಚ್ಚಿಟ್ಟ ಮೋದಿ ವಿರುದ್ಧ ಕ್ರಮ ಕೈಗೊಳ್ಳಿ : ಸಿಪಿಐಎಂ

|
Google Oneindia Kannada News

ನವದೆಹಲಿ, ಮೇ 13: ಆರನೇ ಹಂತದ ಮತದಾನದ ಮುನ್ನಾದಿನ "ನ್ಯೂಸ್‍ ನೇಶನ್‍ ಚಾನಲ್" ಪ್ರಸಾರ ಮಾಡಿರುವ ಒಂದು ಸಂದರ್ಶನದಲ್ಲಿ ಮೋದಿಯವರು ಒಂದು ಅತಿರೇಕದ ದಾವೆ ಇಟ್ಟಿದ್ದಾರೆ. ಭಾರತೀಯ ವಾಯುಪಡೆಯ ಗಡಿಯಾಚೆಗಿನ ಮಿಶನ್‍ ಗೆ ತಾನು ಹವಾಮಾನ ಕೆಟ್ಟದಾಗಿದ್ದರೂ ಮತ್ತು ವೃತ್ತಿಪರ ಪರಿಣಿತರ ಸಲಹೆಯ ವಿರುದ್ಧ ಮಂಜೂರಾತಿಯನ್ನು, ಮೋಡಗಳು ಭಾರತೀಯ ಫೈಟರ್‍ ಜೆಟ್‍ಗಳನ್ನು ಪಾಕಿಸ್ತಾನಿ ರಾಡಾರ್‍ ಗಳಿಂದ ಮರೆಮಾಚುತ್ತವೆ ಎಂಬ ಕಾರಣಕ್ಕೆ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಮಿಶನ್‍ನ ಯೋಜನೆ ರಚಿಸಿದ್ದ ರಕ್ಷಣಾ ಪರಿಣಿತರ ಸಂದೇಹಗಳನ್ನು ನಿವಾರಿಸಲು ತನ್ನ "ಕಚ್ಚಾ ಜಾಣ್ಮೆ" ಯನ್ನು ಉಪಯೋಗಿಸಿದೆ ಎಂದು ಈ ಸಂದರ್ಶನದಲ್ಲಿ ಅವರು ತನ್ನ ಬೆನ್ನು ತಟ್ಟಿಕೊಳ್ಳುತ್ತ "ನನ್ನನ್ನು ದೂಷಿಸುವ ದೇಶದ ಪಂಡಿತರಿಗೆ ಇದು ಹೊಳೆಯಲೇ ಇಲ್ಲ ಎಂದು ನನಗೆ ಆಶ್ಚರ್ಯವಾಗುತ್ತಿದೆ" ಎಂದೂ ಅವರು ಹೇಳಿದರು. ಇದು ದೇಶಾದ್ಯಂತ ಟೀಕೆಗಳಿಗೆ, ನಗೆಚಾಟಿಕೆಗಳಿಗೆ ಗುರಿಯಾಗಿದೆ.

ರೆಡಾರ್ ಗಳಿಂದ ಯುದ್ಧವಿಮಾನ ತಪ್ಪಿಸಿಕೊಳ್ಳಬೇಕೆ ಮೋದಿ ಕೇಳಿ ರೆಡಾರ್ ಗಳಿಂದ ಯುದ್ಧವಿಮಾನ ತಪ್ಪಿಸಿಕೊಳ್ಳಬೇಕೆ ಮೋದಿ ಕೇಳಿ

ಈ ಕುರಿತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಗಳು ಮುಖ್ಯ ಚುನಾವಣಾ ಆಯುಕ್ತರಿಗೆ ಮೇ 12 ರಂದು ಮತ್ತೊಂದು ಪತ್ರ ಬರೆದಿದ್ದಾರೆ. ಮತದಾನದ ಹಿಂದಿನ ದಿನದ ಪ್ರಚಾರ ನಿಲ್ಲಿಸಬೇಕಾದ 'ಮೌನ ಅವಧಿ'ಯಲ್ಲಿ "ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಒಂದು ಸೂಕ್ಷ್ಮವಾದ ಮಿಲಿಟರಿ ಮಿಶನ್‍ ನ ಕಾರ್ಯವಿವರಗಳನ್ನು ಹೊರಹಾಕಿರುವುದು ನಮ್ಮ ಪ್ರಜಾಪ್ರಭುತ್ವಕ್ಕೆ ಒಂದು ಗಂಭೀರ ಮಹತ್ವದ ವಿಷಯ.

CPI-M writes to EC, demands action against PM for Balakot claim

ಪ್ರಧಾನ ಮಂತ್ರಿಗಳು ಎಲ್ಲ ನಿಯಮಗಳನ್ನು, ಸಂಹಿತೆಗಳನ್ನು ಮತ್ತು ಮಾರ್ಗಸೂತ್ರಗಳನ್ನು ಮುಲಾಜಿಲ್ಲದೆ ಉಲ್ಲಂಘಿಸುತ್ತ ಚುನಾವಣಾ ಆಯೋಗವನ್ನು ಅಣಕಿಸುತ್ತಿರುವಂತೆ ಕಾಣುತ್ತದೆ. ಇದು ನಮ್ಮ ಪ್ರಜಾಪ್ರಭುತ್ವದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ ಎನ್ನುತ್ತ ಯೆಚುರಿಯವರು, ನಮ್ಮ ಈ ಪ್ರಜಾಪ್ರಭುತ್ವದ ಪಾಲಕನಾಗಿರುವ ಚುನಾವಣಾ ಆಯೋಗದ ಪ್ರತಿಷ್ಠೆ, ಗೌರವ ಮತ್ತು ವಿಶ್ವಾಸಾರ್ಹತೆಯನ್ನು ಮುಖ್ಯ ಚುನಾವಣಾ ಆಯುಕ್ತರು ಎತ್ತಿ ಹಿಡಿಯುತ್ತಾರೆ, ಮೋದಿಯವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ಆಶಿಸಿದ್ದಾರೆ.

ಮಳೆ, ಮೋಡ, ರೆಡಾರ್ ಹಾಗೂ ಮೋದಿ ಹೇಳಿಕೆ, ರಮ್ಯಾ ಗೇಲಿಮಳೆ, ಮೋಡ, ರೆಡಾರ್ ಹಾಗೂ ಮೋದಿ ಹೇಳಿಕೆ, ರಮ್ಯಾ ಗೇಲಿ

ಈ ಪತ್ರದಲ್ಲಿ, ಪ್ರಧಾನ ಮಂತ್ರಿಗಳು ಮರುದಿನವೇ ಕುಶಿನಗರದಲ್ಲಿ ಮಾಡಿರುವ ಚುನಾವಣಾ ಭಾಷಣದಲ್ಲಿ, ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಕೊಂದಿರುವುದು ತಾನು, ನಮ್ಮ ಸಶಸ್ತ್ರ ಪಡೆಗಳಲ್ಲ ಎಂಬ ಅರ್ಥ ಬರುವಂತಹ ಮಾತುಗಳ ಭರದಲ್ಲಿ ಮತ್ತೊಮ್ಮೆ ಚುನಾವಣಾ ಆಯೋಗವನ್ನು ಅಣಕ ಮಾಡಿದ್ದಾರೆ ಎಂದೂ ಮುಖ್ಯ ಚುನಾವಣಾ ಆಯುಕ್ತರ ಗಮನಕ್ಕೆ ತರುತ್ತ "ಚುನಾವಣಾ ಆಯೋಗ, ಮೋದಿ ಮತ್ತು ಅಮಿತ್‍ ಷಾ ಚುನಾವಣಾ ಪ್ರಕ್ರಿಯೆಗೆ ಮೀರಿದವರು, ಮಾದರಿ ಆಚಾರ ಸಂಹಿತೆ ಅವರಿಗೆ ಅನ್ವಯವಾಗುವುದಿಲ್ಲ ಎಂದು ಯೋಚಿಸಿರುವಂತೆ ಕಾಣುತ್ತದೆ. ಇದನ್ನು ಹಲವಾರು ವ್ಯಂಗ್ಯಚಿತ್ರಕಾರರು, ಪತ್ರಿಕಾ ಸಂಪಾದಕೀಯಗಳು ಮತ್ತು ಟಿಪ್ಪಣಿಗಾರರು ಗಮನಿಸಿದ್ದಾರೆ. ಅವರೆಲ್ಲರ ಭಾವನೆ ತಪ್ಪು ಎಂದು ಚುನಾವಣಾ ಆಯೋಗ ಸಾಬೀತು ಮಾಡುತ್ತದೆ, ಮತ್ತು ಕ್ಷಿಪ್ರ ಹಾಗೂ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ನಾನು ಆಶಿಸುತ್ತೇನೆ" ಎಂದು ತಮ್ಮ ಪತ್ರದ ಕೊನೆಯಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.

English summary
The CPI-M wrote to the Election Commission (EC) demanding action against Prime Minister Narendra Modi for making claims about his role in the Balakot air strike in a television interview and said that they violated the model code of conduct
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X