ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ತರಾಟೆಯ ನಂತರ ಕ್ಷಮೆ ಯಾಚಿಸಿದ ಸಿಪಿ ಜೋಷಿ

|
Google Oneindia Kannada News

ನವದೆಹಲಿ, ನವೆಂಬರ್ 23 : 'ಕೇವಲ ಬ್ರಾಹ್ಮಣರಿಗಷ್ಟೇ ಹಿಂದುತ್ವ ತಿಳಿದಿರುವುದು. ಆದರೆ ಬ್ರಾಹ್ಮಣೇತರ ಸಮುದಾಯಕ್ಕೆ ಸೇರಿದ ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಚಿವೆ ಉಮಾ ಭಾರತಿಯವರೆಲ್ಲ ಹಿಂದುತ್ವದ ಬಗ್ಗೆ ಹೇಗೆ ಮಾತನಾಡುತ್ತಾರೆ?" ಎಂದು ಪ್ರಶ್ನಿಸಿ ವಿವಾದ ಸೃಷ್ಟಿಸಿದ್ದ ಕಾಂಗ್ರೆಸ್ ಮುಖಂಡ ಸಿ ಪಿ ಜೋಷಿ ಇದೀಗ ಕ್ಷಮೆ ಯಾಚಿಸಿದ್ದಾರೆ.

"ನನ್ನ ಮಾತಿನಿಂದ ಯಾರದಾದರೂ ಭಾವನೆಗಳಿಗೆ ನೋವುಂಟಾಗಿದ್ದರೆ ಕ್ಷಮೆ ಯಾಚಿಸುತ್ತೇನೆ" ಎಂದು ಜೋಷಿ ಹೇಳಿದ್ದಾರೆ.

ಬ್ರಾಹ್ಮಣರಿಗಷ್ಟೇ ಹಿಂದುತ್ವ ಗೊತ್ತು ಎಂದ ಕಾಂಗ್ರೆಸ್ ಮುಖಂಡ!ಬ್ರಾಹ್ಮಣರಿಗಷ್ಟೇ ಹಿಂದುತ್ವ ಗೊತ್ತು ಎಂದ ಕಾಂಗ್ರೆಸ್ ಮುಖಂಡ!

'ಹಿಂದುತ್ವ ಬ್ರಾಹ್ಮಣರಿಗಷ್ಟೇ ಗೊತ್ತು' ಎಂದಿದ್ದ ಜೋಷಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, "ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳಿಗೆ ಜೋಷಿ ಅವರ ಹೇಳಿಕೆ ವ್ಯತಿರಿಕ್ತವಾಗಿದೆ. ಅವರಿಗೆ ತಮ್ಮ ತಪ್ಪಿನ ಅರಿವಾಗುತ್ತದೆ. ಸಮಾಜದ ಕೆಲವು ಸಮುದಾಯಗಳಿಗೆ ನೋವುಂಟು ಮಾಡುವ ಅವರ ಹೇಳಿಕೆಗೆ ಅವರು ಕ್ಷಮೆ ಕೇಳಬೇಕು" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

CP Joshi apologises for Brahmin remark

ಬ್ರಾಹ್ಮಣರ ಕೆಣಕಿದ ಟ್ವಿಟ್ಟರ್ ಸಿಇಒಗೆ ಓದುಗರಿಂದ 'ಮಹಾಮಂಗಳಾರತಿ!'ಬ್ರಾಹ್ಮಣರ ಕೆಣಕಿದ ಟ್ವಿಟ್ಟರ್ ಸಿಇಒಗೆ ಓದುಗರಿಂದ 'ಮಹಾಮಂಗಳಾರತಿ!'

ಕಾಂಗ್ರೆಸ್ ಪ್ರಧಾನಿಗೆ ಮಾತ್ರವೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದಕ್ಕೆ ಸಾಧ್ಯವಿರುವುದು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೇ ಬಾಬ್ರಿ ಮಸೀದಿಯ ಆವರಣದಲ್ಲಿ ಬಾಗಿಲನ್ನು ತೆರೆದು, ಪೂಜೆಗೆ ಅನುವು ಮಾಡಿಕೊಟ್ಟಿದ್ದು. ಕಾಂಗ್ರೆಸ್ ಪ್ರಧಾನಿ ಮಾತ್ರವೇ ರಾಮಮಂದಿರ ಕಟ್ಟುವುದಕ್ಕೆ ಸಾಧ್ಯ' ಎಂದು ಸಹ ಜೋಷಿ ಹೇಳಕೆ ನೀದಿದ್ದರು.

English summary
Congress leader CP Joshi who said only Brahmins know Hinduism apologises for his controversial statement
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X