ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾತಿ, ಮತ, ಧರ್ಮ, ಬಣ್ಣ, ಭಾಷೆ ನೋಡಿ ಕೊರೊನಾ ಬರಲ್ಲ: ಮೋದಿ

|
Google Oneindia Kannada News

ದೆಹಲಿ, ಏಪ್ರಿಲ್ 19: ಕೊರೊನಾ ವೈರಸ್‌ ಉದ್ದೇಶಪೂರ್ವಕವಾಗಿ ಹರಡಿಸಲಾಗುತ್ತಿದೆ ಎಂಬ ಆರೋಪ ಭಾರತದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿದೆ. ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಸಭೆ ಬಳಿಕ, ಅದಕ್ಕೆ ಕೋಮುವಾದ ಬಣ್ಣ ಅಂಟಿಕೊಂಡಿತು.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ದೇಶದ ಪ್ರಧಾನಿ ನರೇಂದ್ರ ಮೋದಿ ಕೊವಿಡ್‌ಗೆ ಯಾವುದೇ ಧರ್ಮವಿಲ್ಲ ಎಂದು ಹೇಳುವ ಮೂಲಕ ಏಕತೆಯ ಮಂತ್ರ ಜಪಿಸಿದ್ದಾರೆ.

''ಕೊರೊನಾ ಬರುವುದಕ್ಕೆ ಮುಂಚೆ 'ಜಾತಿ, ಧರ್ಮ, ಭಾಷೆ, ಮತ, ಬಣ್ಣ ಅಥವಾ ಗಡಿ ನೋಡುವುದಿಲ್ಲ. ಆದ್ದರಿಂದ ನಮ್ಮ ಪ್ರತಿಕ್ರಿಯೆ ಏಕತೆ ಮತ್ತು ಪರಸ್ಪರ ಸೋದರತ್ವದಿಂದ ಕೂಡಿರಬೇಕು. ನಾವೆಲ್ಲ ಒಟ್ಟಿಗೆ ಇದ್ದೇವೆ'' ಎಂದು ಹೇಳಿದ್ದಾರೆ.

ಮೋದಿ ಲಾಕ್‌ಡೌನ್-2 ಭಾಷಣ: ದಾಖಲೆ ಮಟ್ಟದಲ್ಲಿ ಜನರ ವೀಕ್ಷಣೆಮೋದಿ ಲಾಕ್‌ಡೌನ್-2 ಭಾಷಣ: ದಾಖಲೆ ಮಟ್ಟದಲ್ಲಿ ಜನರ ವೀಕ್ಷಣೆ

covid19-does-not-see-religion-caste-creed-before-striking-pm-modi

''ಭೌತಿಕ ಮತ್ತು ವಾಸ್ತವದ ಮಿಶ್ರಣ ಆಗಿರುವ ಭಾರತ ಕೊರೊನಾ ನಂತರದ ಜಗತ್ತಿನಲ್ಲಿ, ಆಧುನಿಕ ಬಹುರಾಷ್ಟ್ರೀಯ ಪೂರೈಕೆ ಸರಪಳಿಗಳ ಕೇಂದ್ರವಾಗಿ ಹೊರಹೊಮ್ಮಬಹುದು'' ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15712ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 1334 ಜನರಿಗೆ ಸೋಂಕು ದೃಢವಾಗಿದ್ದು, 27 ಜನರು ಸಾವನ್ನಪ್ಪಿದ್ದಾರೆ. ಇದುವರೆಗೂ ದೇಶದಲ್ಲಿ ಒಟ್ಟು 507 ಜನರು ಕೊವಿಡ್‌ನಿಂದ ಮೃತಪಟ್ಟಿದ್ದಾರೆ. 2331 ಜನರು ದೇಶದಲ್ಲಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

English summary
COVID19 does not see race, religion, colour, caste, creed, language or borders before striking. We are in this together: Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X