ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ 2 ಲಕ್ಷ ಕೊರೊನಾ ಕೇಸ್, 15 ದಿನದಲ್ಲಿ 1 ಲಕ್ಷ ಸೋಂಕು

|
Google Oneindia Kannada News

ದೆಹಲಿ, ಜೂನ್ 3: ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 2 ಲಕ್ಷ ದಾಟಿದೆ. ಮಂಗಳವಾರ 8909 ಹೊಸ ಕೇಸ್ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 207,615ಕ್ಕೆ ಜಿಗಿದಿದೆ.

ಭಾರತದಲ್ಲಿ ಒಂದು ಲಕ್ಷದಿಂದ ಎರಡು ಲಕ್ಷ ಸೋಂಕು ದಾಟಲು ಎರಡು ವಾರ ಸಮಯ ತೆಗೆದುಕೊಂಡಿದೆ. ಅಂದ್ರೆ, 15 ದಿನಗಳಲ್ಲಿ ಒಂದು ಲಕ್ಷ ಸೋಂಕು ದೇಶದಲ್ಲಿ ವರದಿಯಾಗಿದೆ. ಜನವರಿ 30 ರಂದು ಭಾರತದಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿತ್ತು. ಚೀನಾದ ವುಹಾನ್‌ನಿಂದ ಕೇರಳಕ್ಕೆ ಬಂದಿದ್ದ ಮೂವರು ವಿದ್ಯಾರ್ಥಿಗಳಿಗೆ ಕೊವಿಡ್ ಸೋಂಕು ತಗುಲಿತ್ತು.

ಭಾರತದಲ್ಲಿ ದಿನಕ್ಕೆ 15 ಸಾವಿರ ಸೋಂಕು ಬರುತ್ತೆ: ಚೀನಾ ಸಂಶೋಧನಾ ತಂಡ ಎಚ್ಚರಿಕೆಭಾರತದಲ್ಲಿ ದಿನಕ್ಕೆ 15 ಸಾವಿರ ಸೋಂಕು ಬರುತ್ತೆ: ಚೀನಾ ಸಂಶೋಧನಾ ತಂಡ ಎಚ್ಚರಿಕೆ

ಅಲ್ಲಿಂದ ನಿಧಾನಗತಿಯಲ್ಲಿ ಏರಿಕೆ ಕಂಡ ಕೊರೊನಾ ಸೋಂಕು, ಮಾರ್ಚ್ ತಿಂಗಳಲ್ಲಿ ಹೆಚ್ಚಾಯಿತು. ಮಾರ್ಚ್ 10ರವರೆಗೂ ದೇಶದಲ್ಲಿ ಕೇವಲ 50 ಕೊವಿಡ್ ಸೋಂಕು ಮಾತ್ರ ವರದಿಯಾಗಿತ್ತು. ಅಲ್ಲಿಂದ ಮೇ 18ಕ್ಕೆ ಬರುವಷ್ಟರಲ್ಲಿ ಒಂದು ಲಕ್ಷ ಸೋಂಕು ಪತ್ತೆಯಾಗಿದೆ. ಮೊದಲ ಕೇಸ್ ಪತ್ತೆಯಾದ ದಿನದಿಂದ ಒಂದು ಲಕ್ಷ ವರದಿಯಾಗಲು 110 ದಿನ ಬೇಕಾಯಿತು.

COVID19 Cases In India Jumped 1 Lakh to 2 Lakh In 15 Days

ಆದರೆ, 15 ದಿನದಲ್ಲಿ ಒಂದು ಲಕ್ಷದಿಂದ ಎರಡು ಲಕ್ಷ ಸೋಂಕು ಏರಿಕೆಯಾಗಿದೆ. ಸೋಂಕು ಅಧಿಕವಾಗುತ್ತಿದ್ದರೂ ಅದನ್ನು ನಿಯಂತ್ರಿಸುವಲ್ಲಿ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ.

ಜಗತ್ತಿನಾದ್ಯಂತ ಒಟ್ಟು 64 ಲಕ್ಷ (6,480,521) ಜನರಲ್ಲಿ ಕೊರೊನಾ ದೃಢವಾಗಿದೆ. ಅದರಲ್ಲಿ 383,042 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 3,086,574 ಜನರು ಈ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ. ಭಾರತದಲ್ಲಿ ಪ್ರತಿದಿನ ಸರಾಸರಿ 1.2 ಲಕ್ಷ ಕೊರೊನಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದೇಶದಲ್ಲಿ ಇದುವರೆಗೂ 40 ಲಕ್ಷ ಪರೀಕ್ಷೆಗಳನ್ನು ಮಾಡಲಾಗಿದೆ.

ಅತಿ ಹೆಚ್ಚು ಸೋಂಕು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಯುಎಸ್, ಬ್ರೆಜಿಲ್, ರಷ್ಯಾ, ಯುಕೆ, ಸ್ಪೇನ್ ಮತ್ತು ಇಟಲಿ ನಂತರ ಭಾರತ ಏಳನೇ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಈವರೆಗೆ 18 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಬ್ರೆಜಿಲ್‌ನಲ್ಲಿ 5 ಲಕ್ಷ ರಷ್ಯಾದಲ್ಲಿ 4 ಲಕ್ಷ, ಯುಕೆಯಲ್ಲಿ 2.8 ಲಕ್ಷ, ಸ್ಪೇನ್‌ನಲ್ಲಿ 2.4 ಲಕ್ಷ, ಇಟಲಿಯಲ್ಲಿ 2.3 ಲಕ್ಷ ಪ್ರಕರಣ ವರದಿಯಾಗಿದೆ.

English summary
Coronavirus Cases in india jumped 1 Lakh to 2 Lakh In just 15 days. now, total tally rise to 207,615.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X