ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೊವಿಡ್ 19 ರೋಗಿಗಳನ್ನು ಪ್ರಾಣಿಗಿಂತಲೂ ಕೆಟ್ಟದಾಗಿ ನಡೆಸಿಕೊಳ್ಳಲಾಗ್ತಿದೆ'

|
Google Oneindia Kannada News

ನವದೆಹಲಿ, ಜೂನ್ 12: ದೆಹಲಿಯಲ್ಲಿ ಕೊವಿಡ್ 19 ರೋಗಿಗಳನ್ನು 'ಪ್ರಾಣಿಗಳಿಗಿಂತಲೂ ಕೆಟ್ಟದಾಗಿ ನಡೆಸಿಕೊಳ್ಳಳಾಗುತ್ತಿದೆ' ಎಂದು ಸುಪ್ರೀಂಕೋರ್ಟ್ ಹೇಳಿದೆ.

Recommended Video

Corona patient body get exchanged in Hyderabad | Oneindia Kannada

ದೆಹಲಿಯಲ್ಲಿ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲಿರುವ ರೋಗಿಗಳನ್ನು ಪ್ರಾಣಿಗಳಿಗಂತಲೂ ಕಡೆಯಾಗಿ ಕಾಣುತ್ತಿದ್ದಾರೆ. ಚರಂಡಿಯಲ್ಲೂ ಶವಗಳು ಪತ್ತೆಯಾಗಿದ್ದು, ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ.

ದೆಹಲಿಯಲ್ಲಿ 5.5 ಲಕ್ಷ ಕೊರೊನಾ ಕೇಸ್: ಸರ್ಕಾರದಿಂದಲೇ ಸ್ಫೋಟಕ ಮಾಹಿತಿದೆಹಲಿಯಲ್ಲಿ 5.5 ಲಕ್ಷ ಕೊರೊನಾ ಕೇಸ್: ಸರ್ಕಾರದಿಂದಲೇ ಸ್ಫೋಟಕ ಮಾಹಿತಿ

ರೋಗಿಗಳು ಸಾಯುತ್ತಿದ್ದು ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ, ಇದರ ಬಗ್ಗೆ ವರದಿ ನೀಡುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಕೋರ್ಟ್ ತಿಳಿಸಿದೆ.

ಸೋಂಕಿತರ ಪರೀಕ್ಷೆ ಸಂಖ್ಯೆ ಕಡಿಮೆಯಾಗಿದ್ಯಾಗೆ?

ಸೋಂಕಿತರ ಪರೀಕ್ಷೆ ಸಂಖ್ಯೆ ಕಡಿಮೆಯಾಗಿದ್ಯಾಗೆ?

ದೆಹಲಿಯಲ್ಲಿ ದಿನವೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸೋಂಕಿತರ ಪರೀಕ್ಷೆ ಪ್ರಮಾಣ ಮಾತ್ರ ಕಡಿಮೆಯಾಗಿದೆ. ನಿತ್ಯ 7 ಸಾವಿರ ಮಂದಿಯನ್ನು ಪರೀಕ್ಷೆ ಮಾಡಲಾಗುತ್ತಿತ್ತು, ಅದೀಗ 5 ಸಾವಿರಕ್ಕೆ ಇಳಿದಿದೆ. ಚೆನ್ನೈ ಹಾಗೂ ತಮಿಳುನಾಡಿನಲ್ಲಿ ನಿತ್ಯ 16 ಸಾವಿರವಿದ್ದ ಪರೀಕ್ಷೆ ಪ್ರಮಾಣವನ್ನು 17 ಸಾವಿರಕ್ಕೆ ಏರಿಸಲಾಗಿದೆ. ನಿಮಗ್ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಕೋರ್ಟ್ ಪ್ರಶ್ನಿಸಿದೆ.

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದೆಹಲಿಗೆ 3ನೇ ಸ್ಥಾನ

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದೆಹಲಿಗೆ 3ನೇ ಸ್ಥಾನ

ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದೆಹಲಿ ಮೂರನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ತಮಿಳುನಾಡು ಮೊದಲು ಹಾಗೂ ಎರಡನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ 34,687 ಮಂದಿ ಕೊರೊನಾ ಸೋಂಕಿತರಿದ್ದು, 1085 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೇಂದ್ರದ ನಿಮಯವನ್ನು ದೆಹಲಿ ಸರ್ಕಾರ ಪಾಲಿಸುತ್ತಿಲ್ಲ

ಕೇಂದ್ರದ ನಿಮಯವನ್ನು ದೆಹಲಿ ಸರ್ಕಾರ ಪಾಲಿಸುತ್ತಿಲ್ಲ

ದೆಹಲಿ ಸರ್ಕಾರವು ಕೇಂದ್ರ ಸರ್ಕಾರ ನೀಡಿರುವ ನಿಯಮವನ್ನು ಪಾಲಿಸುತ್ತಿಲ್ಲ.ದೆಹಲಿಯ ಸ್ಥಿತಿ ಭಯಾನಕ ಮತ್ತು ಚಿಂತಾಜನಕವಾಗಿದೆ. ದೆಹಲಿಯ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರು ಹಾಗೂ ಸೋಂಕಿನಿಂದ ಮೃತಪಟ್ಟಿರುವ ವ್ಯಕ್ತಿಯ ಶವದ ಬಗ್ಗೆಯೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ವ್ಯಕ್ತಿ ಮೃತಪಟ್ಟಿರುವುದಾಗಿ ಕುಟುಂಬದವರಿಗೂ ಕೂಡ ಮಾಹಿತಿ ನೀಡುತ್ತಿಲ್ಲ. ಅಂತ್ಯಕ್ರಿಯೆಯಲ್ಲೂ ಪಾಲ್ಗೊಳ್ಳಲು ಕುಟುಂಬದವರಿಗೆ ಸಾಧ್ಯವಾಗುತ್ತಿಲ್ಲ ಎಂದು ಕೋರ್ಟ್ ಹೇಳಿದೆ.

ರೋಗಿಗಳು ಕೂರುವ ಜಾಗದಲ್ಲಿ ಶವ

ರೋಗಿಗಳು ಕೂರುವ ಜಾಗದಲ್ಲಿ ಶವ

ಆಸ್ಪತ್ರೆಯ ಲಾಬಿ, ರೋಗಿಗಳು ಕೂರುವ ಸ್ಥಳದಲ್ಲಿ ಶವವನ್ನು ಇರಿಸಲಾಗಿದೆ. ಆಸ್ಪತ್ರೆಯಲ್ಲಿ ಹೆಚ್ಚಿನ ಹಾಸಿಗೆಗಳು ಖಾಲಿ ಇಲ್ಲದ ಕಾರಣ ಜನರು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

English summary
Coronavirus patients are being treated "worse than animals", the Supreme Court said today as it pulled up Delhi amid spurt of virus cases in the national capital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X