ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ ರೋಗಿಗಳಲ್ಲಿ ಎರಡು ವರ್ಷಗಳವರೆಗೆ ರೋಗದ ಲಕ್ಷಣಗಳು ಗೋಚರ: ವರದಿ

|
Google Oneindia Kannada News

ನವದೆಹಲಿ ಮೇ 11: ವಿಜ್ಞಾನಿಗಳು ರೋಗಿಗಳಲ್ಲಿ ಕೋವಿಡ್‌-19ನ ಪರಿಣಾಮಗಳ ಬಗ್ಗೆ ಇನ್ನೂ ಸಂಶೋಧನೆ ನಡೆಸುತ್ತಿರುವ ನಡುವೆಯೇ, ದಿ ಲ್ಯಾನ್ಸೆಟ್‌ ರೆಸ್ಪಿರೇಟರಿ ಮೆಡಿಸಿನ್‌ ಇತ್ತೀಚಿಗೆ ತನ್ನ ಅಧ್ಯಯನ ವರದಿಯನ್ನು ಬಿಡುಗಡೆಗೊಳಿಸಿದೆ.

ಗಂಭೀರವಾದ ಕೋವಿಡ್‌ ಸೋಂಕಿನಿಂದ ಬಳಲುತ್ತಿರುವ ರೋಗಿಗಳಲ್ಲಿ ಎರಡು ವರ್ಷಗಳವರೆಗೆ ರೋಗದ ಲಕ್ಷಣಗಳು ಗೋಚರಿಸಬಹುದು ಎಂದು ಅಧ್ಯಯನ ವರದಿ ತಿಳಿಸಿದೆ.

ಗಂಭೀರವಾದ ಕೋವಿಡ್‌ ಸೋಂಕಿಗೆ ತುತ್ತಾದ ಜನರಲ್ಲಿ ಮುಂದಿನ ಎರಡು ವರ್ಷಗಳವರೆಗೆ ವೈರಸ್‌ನ ಒಂದು ಅಥವಾ ಹೆಚ್ಚಿನ ಗುಣಲಕ್ಷಣಗಳು ಕಾಣಿಸಿಕೊಳುವ ಸಾಧ್ಯತೆಯಿದೆ. ಕೋವಿಡ್‌-19 ಸೋಂಕು ವ್ಯಕ್ತಿಯ ಮೇಲೆ ದೀರ್ಘಕಾಲದ ಪರಿಣಾಮ ಬೀರಲಿದೆ ಎಂಬುದು ಅಧ್ಯಯನದಿಂದ ಸಾಬೀತಾಗಿದೆ.

Covid patients show symptoms two years after infection: Lancet study

ಅಧ್ಯಯನದಲ್ಲಿ ಕಂಡುಬಂದಿರುವುದು ಏನು?

"ಆರಂಭಿಕ ರೋಗದ ತೀವ್ರತೆಯ ಹೊರತಾಗಿಯೂ ಕೋವಿಡ್‌ ಸೋಂಕಿಗೆ ತುತ್ತಾಗಿ ಬದುಕುಳಿದವರು ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ದೀರ್ಘಾವಧಿಯ ಸುಧಾರಣೆ ಹೊಂದಿದ್ದರು. ಈ ಪೈಕಿ ಹೆಚ್ಚಿನವರು ಎರಡು ವರ್ಷಗಳಲ್ಲಿ ತಮ್ಮ ಹಿಂದಿನ ಸ್ಥಿತಿಗೆ ಮರಳಿದ್ದರು. ಆದಾಗ್ಯೂ, ರೋಗಲಕ್ಷಣಗಳ ಪರಿಣಾಮ ಸಾಕಷ್ಟು ತೀವ್ರವಾಗಿತ್ತು,'' ಎಂದು ಅಧ್ಯಯನ ವರದಿಯ ಸಾರಾಂಶ ತಿಳಿಸುತ್ತದೆ.

"ಕೋವಿಡ್‌ ಸೋಂಕಿಗೆ ತುತ್ತಾಗಿ ಬದುಕುಳಿದವರು ಎರಡು ವರ್ಷಗಳಲ್ಲಿ ಸಾಮಾನ್ಯ ಜನರಿಗಿಂತ ಗಮನಾರ್ಹವಾಗಿ ಆರೋಗ್ಯ ಸ್ಥಿತಿ ತಗ್ಗಿತ್ತು. ದೀರ್ಘಾವಧಿ ಕೋವಿಡ್‌ನ ರೋಗಕಾರಕವನ್ನು ಅನ್ವೇಷಿಸಲು ಮತ್ತು ಅದರ ಅಪಾಯವನ್ನು ಕಡಿಮೆ ಮಾಡಲು ಪರಿಣಾಮಕಾರಿ ಕ್ರಮಗಳನ್ನು ಅಭಿವೃದ್ಧಿಪಡಿಸುವ ತುರ್ತು ಇದೆ,'' ಎಂದು ಸಂಶೋಧನೆಯು ಸೂಚಿಸುತ್ತದೆ.

Covid patients show symptoms two years after infection: Lancet study

ದೀರ್ಘಕಾಲಿಕ ಪರಿಣಾಮ

ಕೊರೊನಾ ಸೋಂಕಿಗೆ ತುತ್ತಾದವರ ಹೊರ ಮತ್ತು ಒಳಅಂಗಗಳ ಮೇಲೆ ದೀರ್ಘಕಾಲಿನ ಪರಿಣಾಮಗಳು ಬೀರುತ್ತವೆ. ರೋಗಿಗಳಲ್ಲಿ ದೀರ್ಘಾವಧಿಯ ಪರಿಣಾಮಗಳನ್ನು ತಡೆಗಟ್ಟುವ ಬಗ್ಗೆ ಹೆಚ್ಚಿನ ಸಂಶೋಧನೆಗಳ ಅಗತ್ಯವನ್ನು ಅಧ್ಯಯನದ ವರದಿಯು ಒತ್ತಾಯಿಸುತ್ತದೆ.

ದೀರ್ಘಕಾಲದ ಕೊರೊನಾ ವೈರಸ್‌ನ ರೋಗಕಾರಕಗಳನ್ನು ಮತ್ತಷ್ಟು ಅನ್ವೇಷಿಸುವ ಮತ್ತು ಅಪಾಯವನ್ನು ತಗ್ಗಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ತಂತ್ರಜ್ಞಾನಗಳನ್ನುಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನಗಳು ನಡೆಯುವಂತಾಗಬೇಕು ಎಂದು ಲ್ಯಾನ್ಸೆಟ್‌ ವರದಿ ಒತ್ತಾಯಿಸಿದೆ.

2020ರಲ್ಲಿಕೋವಿಡ್‌-19 ಸಾಂಕ್ರಾಮಿಕ ಜಗತ್ತಿಗೆ ಅಪ್ಪಳಿಸಿತು. ಸದ್ಯ ಇದುವರೆಗೆ ಪ್ರಪಂಚದಾದ್ಯಂತ 52 ಕೋಟಿ ಜನರಿಗೆ ಸೋಂಕು ತಗುಲಿದೆ. ಇದರಿಂದ 62.6 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ ಈಗ ಕೊರೊನಾ ನಾಲ್ಕನೇ ಅಲೆಯ ಸಂಭವನೀಯ ಪ್ರಕರಣಗಳು ಹಲವು ದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದೆ.

English summary
The Lancet Respiratory Medicine study statest people who suffered from serious Covid infection can show symptoms of the virus for two years,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X