ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್‌ಗೆ ಭಾರತದಲ್ಲಿ 2ನೇ ಲಸಿಕೆ ಸಿದ್ಧ:ಮಾನವ ಪ್ರಯೋಗಗಳಿಗೆ ಅನುಮೋದನೆ

|
Google Oneindia Kannada News

ನವದೆಹಲಿ, ಜುಲೈ 3: ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ನಡುವೆ ಭಾರತದಲ್ಲಿ ಕೊರೊನಾವೈರಸ್‌ಗೆ ಲಸಿಕೆ ಕಂಡುಹಿಡಿಯಲು ನಾನಾ ಫಾರ್ಮಾ ಕಂಪನಿಗಳು ಪ್ರಯತ್ನಿಸುತ್ತಿವೆ. ಇದರ ನಡುವೆ ದೇಶದಲ್ಲಿ ಕೊರೊನಾವೈರಸ್‌ಗೆ ಮತ್ತೊಂದು ಲಸಿಕೆ ತಯಾರಿಸಲಾಗಿದ್ದು, ಇದನ್ನು ಮಾನವ ಪರೀಕ್ಷೆಗೆ ಅನುಮೋದಿಸಲಾಗಿದೆ.

Recommended Video

Heavy rain predicted ಇನ್ನೆರಡು ದಿನ ಕರ್ನಾಟಕದ 10 ಜಿಲ್ಲೆಗಳಲ್ಲಿ ಭಾರಿ ಮಳೆ | Karnataka | Oneindia Kannada

ಅಹಮದಾಬಾದ್ ಮೂಲದ ಜೈಡುಸ್ ಕ್ಯಾಡಿಲಾ ಹೆಲ್ತ್‌ಕೇರ್ (Zydus Cadila Healthcare) ಲಿಮಿಟೆಡ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸಂಭಾವ್ಯ ಕೋವಿಡ್-19 ಲಸಿಕೆ ಮಾನವನ ಪ್ರಾಯೋಗಿಕ ಪರೀಕ್ಷೆಗಳಿಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (DCGI) ಅನುಮೋದನೆ ಪಡೆದಿದೆ. ಈ ಕುರಿತು ಕಂಪನಿಯು ಶುಕ್ರವಾರ ಅನುಮೋದನೆಯನ್ನು ಪ್ರಕಟಿಸಿದೆ. ಲಸಿಕೆ ಮಾನವರ ಮೇಲೆ ಪ್ರಯೋಗ ಡಿಸಿಜಿಐ ಅನುಮೋದಿಸಿದೆ.

ದೇಶದಲ್ಲಿ ಒಂದೇ ದಿನ 20 ಸಾವಿರ ಕೊರೊನಾ ಸೋಂಕಿತರು ಪತ್ತೆದೇಶದಲ್ಲಿ ಒಂದೇ ದಿನ 20 ಸಾವಿರ ಕೊರೊನಾ ಸೋಂಕಿತರು ಪತ್ತೆ

ಪ್ರಾಣಿಗಳ ಮೇಲಿನ ಅಧ್ಯಯನಗಳು ಈ ಲಸಿಕೆ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಿದೆ ಎಂದು ತೋರಿಸಿದೆ. ಈ ಹಿಂದೆ, ಭಾರತ ಬಯೋಟೆಕ್ ಕಂಪನಿಯು ತನ್ನ ಪ್ರಯೋಗಗಳಾದ 'ಕೊವಾಕ್ಸಿನ್' ಅನ್ನು ಮಾನವ ಪ್ರಯೋಗಗಳಿಗೆ ನಡೆಸಲು ಅನುಮತಿ ಪಡೆಯಿತು. ಪ್ರಾಣಿಗಳ ಮೇಲಿನ ಲಸಿಕೆಯನ್ನು ಅಧ್ಯಯನ ಮಾಡಿದ ನಂತರ, ಜೈಡುಸ್ ಕ್ಯಾಡಿಲಾ ಹೆಲ್ತ್‌ಕೇರ್ ವರದಿಯನ್ನು ಡಿಸಿಜಿಐಗೆ ಸಲ್ಲಿಸಿದರು. ನಂತರ ಡಿಸಿಜಿಐ ಮಾನವ ಪರೀಕ್ಷೆಯ ಮೊದಲ ಮತ್ತು ಎರಡನೆಯ ಹಂತಗಳನ್ನು ಅನುಮೋದಿಸಿತು.

Covid-19 Vaccine: Zydus Cadila Gets DCGI Approval For Human Clinical Trails

ಈ ತಿಂಗಳಿನಲ್ಲಿ ದೇಶದ ವಿವಿಧ ಭಾಗಗಳಲ್ಲಿ 1000 ಜನರಿಗೆ ಲಸಿಕೆ ಪರೀಕ್ಷಿಸಲಿದ್ದಾರೆ. ಇದರೊಂದಿಗೆ, ಭಾರತವನ್ನು ಒಳಗೊಂಡಂತೆ ಇಡೀ ಜಗತ್ತಿಗೆ ಸರಬರಾಜು ಮಾಡಲು ಲಸಿಕೆಯನ್ನು ಹೆಚ್ಚು ಹೆಚ್ಚು ತಯಾರಿಸಲು ಸಹ ಕೆಲಸ ಮಾಡುತ್ತಿದೆ ಎಂದು ಕಂಪನಿ ಹೇಳಿದೆ. ಅವರ ಔಷಧಿಗಳು ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ಜೈಡುಸ್ ಹೇಳಿದ್ದಾರೆ.

ಆದಾಗ್ಯೂ, ವಾಣಿಜ್ಯ ಬಳಕೆಗಾಗಿ ಯಾವುದೇ ಕೋವಿಡ್ -19 ಲಸಿಕೆಯನ್ನು ಇನ್ನೂ ಅನುಮೋದಿಸಲಾಗಿಲ್ಲ. ಆದರೆ ವಿಶ್ವಾದ್ಯಂತ 100 ಕ್ಕೂ ಹೆಚ್ಚು ಲಸಿಕೆಗಳನ್ನು ಮಾನವರ ಮೇಲೆ ಪರೀಕ್ಷಿಸಲಾಗುತ್ತಿದೆ. ಇವುಗಳಲ್ಲಿ ಹೆಚ್ಚಿನವು ಪ್ರಯೋಗದ ಆರಂಭಿಕ ಹಂತದಲ್ಲಿವೆ.

English summary
Zydus Cadila Healthcare has received approval from the Drugs Controller General of India (DCGI) for human clinical trials, informed government sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X