ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19 ಲಸಿಕೆಗೆ ಶುಲ್ಕ ವಿಧಿಸಬಾರದು: ನಾರಾಯಣ ಮೂರ್ತಿ

|
Google Oneindia Kannada News

ನವದೆಹಲಿ, ನವೆಂಬರ್ 18: ಪ್ರಪಂಚವನ್ನು ಅತಿ ಹೆಚ್ಚು ಭೀತಿಗೊಳಿಸಿರುವ ಕೋವಿಡ್-19 ವೈರಸ್ ಕುರಿತಾಗಿ ಸಂಭಾವ್ಯ ಲಸಿಕೆ ಸಿಗುವ ದಿನಗಳು ಹತ್ತಿರವಾಗಿದೆ. ಲಸಿಕೆ ಸಿಗುವುದು ಸನಿಹಗೊಂಡಂತೆ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಕೊರೊನಾವೈರಸ್ ಲಸಿಕೆ ಲಭ್ಯವಾದ ನಂತರ ಜನರಿಗೆ ಶುಲ್ಕ ವಿಧಿಸಬಾರದು ಎಂದು ಲಸಿಕೆ ತಯಾರಕ ಕಂಪನಿಗಳಿಗೆ ಮನವಿ ಮಾಡಿದ್ದಾರೆ.

ಎಕನಾಮಿಕ್ಸ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೂರ್ತಿ "ಕೋವಿಡ್ -19 ಲಸಿಕೆ ಸಾರ್ವಜನಿಕ ಹಿತದೃಷ್ಟಿಯಿಂದ ಇರಬೇಕು ಮತ್ತು ಪ್ರತಿಯೊಬ್ಬರಿಗೂ ಉಚಿತವಾಗಿ ಸಿಗಬೇಕು ಎಂದು ನಾನು ನಂಬುತ್ತೇನೆ. ಈ ಲಸಿಕೆಗಳು ಪ್ರಪಂಚದ ಸಂಪೂರ್ಣ ಜನಸಂಖ್ಯೆಗೆ ಮುಕ್ತವಾಗಿರಬೇಕು. ಲಸಿಕೆ ಉತ್ಪಾದಿಸುವ ಎಲ್ಲಾ ಕಂಪನಿಗಳಿಗೆ ಪರಿಹಾರವನ್ನು ನೀಡಬೇಕು ಯುಎನ್ ಅಥವಾ ವೈಯಕ್ತಿಕ ದೇಶಗಳು ತಮ್ಮ ವೆಚ್ಚಕ್ಕಾಗಿ ಕಾಣಬೇಕು ಮತ್ತು ದೊಡ್ಡ ಲಾಭಕ್ಕಾಗಿ ಅಲ್ಲ " ಎಂದು ಹೇಳಿದ್ದಾರೆ.

ಕೊವಿಡ್ 19: ಭಾರತದಲ್ಲಿ 8,912,907 ಸೋಂಕು, 8,335,109 ಚೇತರಿಕೆಕೊವಿಡ್ 19: ಭಾರತದಲ್ಲಿ 8,912,907 ಸೋಂಕು, 8,335,109 ಚೇತರಿಕೆ

ಲಸಿಕೆಗಳನ್ನು ಉಚಿತವಾಗಿ ನೀಡುವಂತೆ ವೆಚ್ಚವನ್ನು ಭರಿಸಬಲ್ಲ ಕಂಪನಿಗಳಿಗೆ ನಾರಾಯಣ ಮೂರ್ತಿ ಮನವಿ ಮಾಡಿದರು. ಯುಎನ್ ಸೆಕ್ಯುರಿಟಿ ಕೌನ್ಸಿಲ್ ಸದಸ್ಯರು ಈ ವೆಚ್ಚದ ಪ್ರಮುಖ ಭಾಗವನ್ನು ಹಂಚಿಕೊಳ್ಳಬೇಕು ಎಂದು ಅವರು ಹೇಳಿದರು.

Covid-19 Vaccine Should Be Free Of Cost: Infosys Co-Founder Narayana Murthy

ಕಳೆದ ತಿಂಗಳು ಬಿಹಾರ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಣಾಳಿಕೆ ಬಿಡುಗಡೆಯಾದ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ತೆರವುಗೊಳಿಸಿದ ನಂತರ ಉಚಿತ ಕೋವಿಡ್-19 ಲಸಿಕೆ ನೀಡುವ ಭರವಸೆ ನೀಡಿದ್ದರು ಎಂಬುದು ಕುತೂಹಲಕಾರಿಯಾಗಿದೆ.

English summary
Narayana Murthy appealed to companies who can afford to bear the cost to give the vaccines for free.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X