ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್ ನಿಯಮ ಉಲ್ಲಂಫಿಸಿದ ಜನ: 4 ರಾಜ್ಯಗಳ ಸ್ಥಿತಿ ಗಂಭೀರ

|
Google Oneindia Kannada News

ನವ ದೆಹಲಿ, ಏಪ್ರಿಲ್ 21: ಲಾಕ್‌ಡೌನ್ ನಿಯಮ ಉಲ್ಲಂಫಿಸಿದ ಕಾರಣ ಭಾರತದ 4 ರಾಜ್ಯಗಳ ಸ್ಥಿತಿ ಗಂಭೀರವಾಗಿದೆ. ಆ ರಾಜ್ಯಗಳಲ್ಲಿ ನಿಯಂತ್ರಣ ತರುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಪುಣೆ, ಮುಂಬೈ, ಕೊಲ್ಕತ್ತಾ, ಇಂದೋರ್, ಜೈಪುರ್, ದಕ್ಷಿಣ ಬಂಗಾಳಗಳಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘನೆ ಆಗಿದ್ದು, ಕೊರೊನಾ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ. ಈ ನಗರಗಳಲ್ಲಿ ವಾಹನ ಸಂಚಾರ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು ಕಂಡು ಬಂದಿದೆ.

ಕೊರೊನಾ ತೊಲಗಿ ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಬರುವುದು ಯಾವಾಗ ಗೊತ್ತಾ.?ಕೊರೊನಾ ತೊಲಗಿ ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಬರುವುದು ಯಾವಾಗ ಗೊತ್ತಾ.?

ಮಹಾರಾಷ್ಟ್ರದಲ್ಲಿ 4,203 ಕೊರೊನಾ ಪ್ರಕರಣಗಳು ದೃಢವಾಗಿವೆ. ಇದರಲ್ಲಿ 223 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

COVID-19 Situation Is Especially Serious In These 4 States

ರಾಜಸ್ಥಾನದಲ್ಲಿ 1478 ಜನರಿಗೆ ಕೊರೊನಾ ಸೋಂಕು ಕಂಡು ಬಂದಿದೆ. 14 ಮಂದಿ ಮರಣ ಹೊಂದಿದ್ದಾರೆ. ಮಧ್ಯ ಪ್ರದೇಶದಲ್ಲಿ 1407 ಜನರಿಗೆ ಸೋಂಕು ಹರಡಿದೆ. 70 ಮಂದಿ ಮೃತರಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 337 ಮಂದಿಗೆ ಸೋಂಕಿತರು ಇದ್ದಾರೆ. 12 ಜನರು ಸಾವಿಗಿಡಗಿದ್ದಾರೆ.

ಮಧ್ಯಪ್ರದೇಶದ ಇಂದೋರ್, ಮಹಾರಾಷ್ಟ್ರದ ಮುಂಬೈ ಮತ್ತು ಪುಣೆ, ರಾಜಸ್ಥಾನದ ಜೈಪುರ, ಕೋಲ್ಕತಾ, ಹೌರಾ, ಪೂರ್ವ ಮದಿನಿಪುರ, ಡಾರ್ಜಿಲಿಂಗ್, ಕಾಲಿಂಪಾಂಗ್ ಮತ್ತು ಪಶ್ಚಿಮ ಬಂಗಾಳದ ಜಲ್ಪೈಗುರಿಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ.

IMCT (Inter-Ministerial Central Teams) ಮಧ್ಯ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಿಗೆ ಕೊರೊನಾ ತಡೆಗೆ ಸೂಚನೆ ನೀಡಿದೆ.

ಸೋಮವಾರದವರೆಗೆ ಭಾರತದಲ್ಲಿ 17265 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದೆ. 543 ಜನರು ಮರಣ ಹೊಂದಿದ್ದಾರೆ.

English summary
COVID-19 situation is 'especially serious' in Mumbai, Pune, Indore, Jaipur, Kolkata and a few other places in West Bengal, and violation of lockdown measures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X