• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮನೆಯಲ್ಲೇ ಕೊರೊನಾ ಪರೀಕ್ಷೆಯ ಕಿಟ್ ಬಿಡುಗಡೆಗೆ ಸಿದ್ಧ, ಬೆಲೆ ಎಷ್ಟು ಗೊತ್ತಾ?

|
Google Oneindia Kannada News

ನವದೆಹಲಿ, ಮೇ 20: ಕೊರೊನಾ ವೈರಸ್ ಪರೀಕ್ಷೆಯನ್ನು ಮನೆಯಲ್ಲಿಯೇ ಮಾಡುವ ದಿನಗಳು ಈಗ ಸಮೀಪಿಸುತ್ತಿದೆ. ಕೊರೊನಾ ಪರೀಕ್ಷೆಯನ್ನು ಸ್ವಯಂ ಮಾಡಿಕೊಳ್ಳಬಹುದಾದ ಕೊವಿಸೆಲ್ಫ್ ಸ್ವಯಂ ಪರೀಕ್ಷಾ ಕಿಟ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಮುಂದಿನ ವಾರದಿಂದ ಈ ಕಿಟ್‌ ಮಾರುಕಟ್ಟೆಯಲ್ಲಿ ದೊರೆಯಲಿದೆ ಎಂದು ಪುಣೆಯ 'ಮೈ ಲ್ಯಾಬ್ ಡಿಸ್ಕವರಿ ಸೊಲ್ಯೂಶನ್ಸ್ ನಿರ್ದೇಶಕ ಸಜ್ಜೆತ್ ಜೈನ್ ಎಎನ್‌ಐ ಸುದ್ಧಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ(ICMR) ಅನುಮೋದನೆಯನ್ನು ಪಡೆದ ಕೊರೊನಾ ವೈರಸ್‌ ಪರೀಕ್ಷೆಯ ಮೊದಲ ಹೋಮ್ ಕಿಟ್ ಇದಾಗಿದೆ. ಭಾರತದ ಶೇಕಡಾ 90ರಷ್ಟು ಭಾಗವನ್ನು ತಲುಪುವ ಗುರಿಯನ್ನು ಈ ಕಿಟ್‌ನ ತಯಾರಕರು ಹೊಂದಿದ್ದಾರೆ. ಇದು ಆನ್‌ಲೈನ್‌ನಲ್ಲಿ ಕೂಡ ಪಡೆಯಲು ಲಭ್ಯವಿರಲಿದೆ ಎಂದು ನಿರ್ದೇಶಕ ಸಜ್ಜೆತ್ ಜೈನ್ ಮಾಹಿತಿ ನೀಡಿದ್ದಾರೆ.

ನೀವು ಮನೆಯಲ್ಲಿಯೇ ಕೊರೊನಾ ಪರೀಕ್ಷೆ ಮಾಡಬಹುದು, ಹೇಗೆ? ಇಲ್ಲಿದೆ ಮಾಹಿತಿನೀವು ಮನೆಯಲ್ಲಿಯೇ ಕೊರೊನಾ ಪರೀಕ್ಷೆ ಮಾಡಬಹುದು, ಹೇಗೆ? ಇಲ್ಲಿದೆ ಮಾಹಿತಿ

ಸ್ವಯಂ ಪರೀಕ್ಷಾ ಕಿಟ್‌ನ ಬೆಲೆ ಎಷ್ಟು?

ಸ್ವಯಂ ಪರೀಕ್ಷಾ ಕಿಟ್‌ನ ಬೆಲೆ ಎಷ್ಟು?

ಇನ್ನು ಈ ಕೊವಿ ಸೆಲ್ಫ್‌ ಸ್ವಯಂ ಪರೀಕ್ಷಾ ಕಿಟ್‌ನ ಬೆಲೆಯ ಬಗ್ಗೆಯೂ ತಯಾರಕರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಎಲ್ಲಾ ತೆರಿಗೆಗಳು ಸೇರಿ ಈ 250 ರೂಪಾಯಿಯನ್ನು ಈ ಪರೀಕ್ಷಾ ಕಿಟ್‌ಗೆ ನಿಗದಿ ಪಡಿಸಲಾಗಿದೆ. ಈ ಕಿಟ್‌ನ ಜೊತೆಗೆ ಯಾವುದೇ ನುರಿತ ವೈದ್ಯಕೀಯ ಸಿಬ್ಬಂದಿಗಳು ಇಲ್ಲದೆ ಪರೀಕ್ಷಿಸಿಕೊಳ್ಳುವ ಬಗ್ಗೆ ಮಾಹಿತಿಯನ್ನು ಕೂಡ ನೀಡಲಾಗುತ್ತದೆ. ಇದು ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆಯಾಗಿರುವುದರಿಂದ ಮೂಗಿನ ದ್ರವದ ಮಾದರಿ ಅವಶ್ಯಕತೆ ಮಾತ್ರ ಇರುತ್ತದೆ.

15 ನಿಮಿಷದಲ್ಲಿ ಪರೀಕ್ಷೆ

15 ನಿಮಿಷದಲ್ಲಿ ಪರೀಕ್ಷೆ

ಸ್ವಯಂ ಪರೀಕ್ಷೆ ಮಾಡಿಕೊಳ್ಳುವುದರಿಂದ ಇದಕ್ಕಾಗಿ ಎರಡು ನಿಮಿಷಗಳಷ್ಟು ಸಮಯ ಬೇಕಾಗುತ್ತದೆ. ಅದಾದ ನಂತರ ಪರೀಕ್ಷೆಯ ಪಲಿತಾಂಶವನ್ನು ಪಡೆಯಲು 15 ನಿಮಿಷಗಳು ಬೇಕಾಗುತ್ತದೆ. ಪಾಸಿಟಿವ್ ವರದಿಯಾಗಿದ್ದರೆ ಅದಕ್ಕಿಂತಲೂ ಶೀಘ್ರವೇ ದೊರೆಯುತ್ತದೆ. ಆದರೆ 20 ನಿಮಿಷಗಳ ನಂತರ ಬರುವ ವರದಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಉತ್ಪಾದಕರು ತಿಳಿಸಿದ್ದಾರೆ.

ಶೀಘ್ರ ಪತ್ತೆಗೆ ಸಹಕಾರಿ

ಶೀಘ್ರ ಪತ್ತೆಗೆ ಸಹಕಾರಿ

ಈಗಾಗಲೇ ಐಸಿಎಂಆರ್ ಸೂಚಿಸಿರುವ ಪ್ರಕಾರ ಕೊರೊನಾ ಪರೀಕ್ಷೆಯ ವರದಿ ಬರುವುದಕ್ಕೂ ಮುನ್ನವೇ ಲಕ್ಷಣಗಳು ಇದ್ದಲ್ಲಿ ಅಂತವರನ್ನು ಶಂಕಿತರು ಎಂದು ಪರಿಗಣಿಸಿ ಚಿಕಿತ್ಸೆ ನೀಡಬೇಕು ಎಂದಿದೆ. ಹೀಗಾಗಿ ಈ ಸೆಲ್ಪ್ ಟೆಸ್ಟಿಂಗ್ ಕಿಟ್‌ಗಳು ಕೊರೊನಾ ವೈರಸ್‌ಗಳ ಶೀಘ್ರ ಪತ್ತೆಗೆ ಮತ್ತಷ್ಟು ಸಹಕಾರಿಯಾಗುವ ನಿರೀಕ್ಷೆಯಿದೆ.

ಐಸಿಎಂಆರ್ ಸೂಚನೆ

ಐಸಿಎಂಆರ್ ಸೂಚನೆ

ಇನ್ನು ವಿವೇಚನಾರಹಿತವಾಗಿ ಈ ಪರೀಕ್ಷೆಯನ್ನು ಮಾಡಿಕೊಳ್ಳಬಾರದು ಎಂದು ಐಸಿಎಂಆರ್ ತಿಳಿಸಿದೆ. ಕೊರೊನಾ ವೈರಸ್‌ನ ಲಕ್ಷಣಗಳು ಇದ್ದವರು, ಕೊರೊನಾ ಸೋಂಕಿತರೊಂದಿಗೆ ಸಂಪರ್ಕವನ್ನು ಹೊಂದಿದವರು ಮಾತ್ರವೇ ಪರೀಕ್ಷೆಗೆ ಒಳಗಾಗುವಂತೆ ಸೂಚನೆಯನ್ನು ನೀಡಿದೆ. ಸದ್ಯ ವಾರಕ್ಕೆ 40 ಲಕ್ಷ ಟೆಸ್ಟಿಂಗ್ ಕಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು 'ಮೈ ಲ್ಯಾಬ್' ಹೊಂದಿದ್ದು ಮುಂದೆ ವಾರದಲ್ಲಿ 1 ಕೋಟಿ ಉತ್ಪಾದಿಸುವ ಗುರಿಯನ್ನು ಹೊಂದಿದೆ.

English summary
Covid self-testing kit to be available in market by end of next week, says Pune-based manufacturer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X