ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಶೇ.88ರಷ್ಟು ಮಂದಿ ಕೊವಿಡ್ 19ನಿಂದ ಚೇತರಿಕೆ

|
Google Oneindia Kannada News

ನವದೆಹಲಿ, ಜುಲೈ 27: ದೆಹಲಿಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಚೇತರಿಕೆ ಪ್ರಮಾಣವು ಶೇ.88 ರಷ್ಟಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

Recommended Video

India - Bangladesh ಸಂಬಂಧಕ್ಕೆ ಹುಳಿ ಹಿಂಡಿದ China | Oneindia Kannada

ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಚೇತರಿಕೆ ಪ್ರಮಾಣ ಶೇ.88 ರಷ್ಟಿದೆ. ಇದೀಗ ಶೇ.9 ರಷ್ಟು ಮಂದಿಗೆ ಮಾತ್ರ ಅನಾರೋಗ್ಯವಿದೆ. ಶೇ.2-3ರಷ್ಟು ಮಂದಿ ಮಾತ್ರ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆಯಲ್ಲೂ ಇಳಿಮುಖವಾಗುತ್ತಿದೆ.

ನವದೆಹಲಿಯಲ್ಲಿ 1,00,000 ಗಡಿ ದಾಟಿದ ಕೊರೊನಾವೈರಸ್ ಪ್ರಕರಣ!ನವದೆಹಲಿಯಲ್ಲಿ 1,00,000 ಗಡಿ ದಾಟಿದ ಕೊರೊನಾವೈರಸ್ ಪ್ರಕರಣ!

ಕೊರೊನಾ ಸೋಂಕಿನ ನಿಯಂತ್ರಣದಲ್ಲಿ ದೆಹಲಿ ಒಂದು ಮಾದರಿಯಾಗಿದೆ. ಇಡೀ ಭಾರತ ಹಾಗೂ ವಿದೇಶದಲ್ಲೂ ಜನರು ದೆಹಲಿಯ ಕುರಿತು ಮಾತನಾಡಿಕೊಳ್ಳುತ್ತಿದ್ದಾರೆ. ಜೂನ್‌ನಲ್ಲಿ ಸಾವಿನ ರೇಖೆ ಶೇ.44ರಷ್ಟಿತ್ತು, ಇದೀಗ ಅದು ತೀರಾ ಕಡಿಮೆಯಾಗಿದ್ದು, ಕೆಲವೇ ದಿನಗಳಲ್ಲಿ ಶೂನ್ಯಕ್ಕೆ ಬಂದು ನಿಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

COVID 19, 88 Percent Recovery Rate in Delhi

ಕೊರೊನಾ ಲಸಿಕೆ ಸಂಶೋಧನೆ ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ವರ್ಷಾಂತ್ಯಕ್ಕೆ ರೋಗಿಗಳ ಬಳಕೆಗೆ ಮುಕ್ತವಾಗುವ ಎಲ್ಲ ಸಾಧ್ಯತೆಗಳು ಇವೆ. ಜತೆಗೆ, ಭಾರಿ ಭರವಸೆಯನ್ನು ಮೂಡಿಸಿವೆ. ಭಾರಿ ಭರವಸೆ ಮೂಡಿಸಿರುವ ಆಕ್ಸ್​ಫರ್ಡ್​ ವಿವಿ ಲಸಿಕೆಯು ಒಂದು ಮತ್ತು ಎರಡನೇ ಹಂತದ ಪರೀಕ್ಷೆಯಲ್ಲಿ ಪಾಸಾಗಿದೆ. ಇದೇ ಲಸಿಕೆಯನ್ನು ತುರ್ತು ಬಳಕೆಗಾಗಿ 20- 30 ಲಕ್ಷ ಡೋಸ್​ ಸಿದ್ಧಪಡಿಸಿಕೊಳ್ಳಲಾಗಿದೆ.

English summary
Delhi Chief Minister Arvind Kejriwal on Monday announced that the COVID-19 situation in the national capital has improved.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X