ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ ಅಂತ್ಯದ ವೇಳೆಗೆ 10-12 ಕೋಟಿ ಕೋವಾಕ್ಸಿನ್ ಲಸಿಕೆ ಉತ್ಪಾದನೆ - ಡಾ ಅರೋರಾ

|
Google Oneindia Kannada News

ನವದೆಹಲಿ, ಮೇ 31: ಭಾರತದಲ್ಲಿ ಕೋವಿಡ್‌ ಲಸಿಕೆಯ ಕೊರತೆಯನ್ನು ಎದುರಿಸುತ್ತಿರುವ ನಡುವೆ, ರೋಗನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ)ಯ ಕೋವಿಡ್ -19 ಕಾರ್ಯ ಸಮೂಹದ ಅಧ್ಯಕ್ಷ ಡಾ.ಎನ್.ಕೆ.ಅರೋರಾ, "ನಿನ್ನೆ, ಎಸ್‌ಐಐ ಒಂದು ಪತ್ರದಲ್ಲಿ ಜೂನ್‌ನಿಂದ ಅವರು 10-12 ಕೋಟಿ ಡೋಸ್‌ಗಳನ್ನು ಉತ್ಪಾದಿಸುವ ಮೂಲಕ ಸುಮಾರು ಶೇ.50 ರಷ್ಟು ಲಸಿಕೆ ಉತ್ಪಾದನೆ ಪ್ರಮಾಣ ಹೆಚ್ಚಿಸುವುದಾಗಿ ಹೇಳಿದೆ. ಅದೇ ರೀತಿ, ಕೊವಾಕ್ಸಿನ್ ಅದರ ಉತ್ಪಾದನೆಯನ್ನು ಹೆಚ್ಚಿಸಲು ಹೊರಟಿದೆ. ಜುಲೈ ಅಂತ್ಯದ ವೇಳೆಗೆ 10-12 ಕೋಟಿ ಲಸಿಕೆ ಉತ್ಪಾದಿಸಲಿದೆ ಎಂದು ಹೇಳಿದ್ದಾರೆ.

ಇನ್ನು ಈ ಸಂದರ್ಭದಲ್ಲೇ ಎರಡು ಕೋವಿಡ್ ಲಸಿಕೆಗಳ ಡೋಸೇಜ್‌ ಅನ್ನು ಬೆರೆಸಿ ಇದು ವೈರಸ್‌ ವಿರುದ್ದದ ಪ್ರತಿಕಾಯ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬುದನ್ನು ನೋಡಲಾಗುವುದು ಎಂದು ತಿಳಿಸಿದ್ದಾರೆ.

ನಡುವೆ ಅಂತರವಿರಲಿ: ಕೊವಿಶೀಲ್ಡ್ ಲಸಿಕೆ 2 ಡೋಸ್ ಹಾಗೂ 84 ದಿನಗಳ ವ್ಯತ್ಯಾಸನಡುವೆ ಅಂತರವಿರಲಿ: ಕೊವಿಶೀಲ್ಡ್ ಲಸಿಕೆ 2 ಡೋಸ್ ಹಾಗೂ 84 ದಿನಗಳ ವ್ಯತ್ಯಾಸ

ಆಗಸ್ಟ್ ವೇಳೆಗೆ ನಾವು ತಿಂಗಳಿಗೆ 20-25 ಕೋಟಿ ಲಸಿಕೆ ಪ್ರಮಾಣವನ್ನು ಹೊಂದಿರುತ್ತೇವೆ. ಇತರ ಉತ್ಪಾದನಾ ಘಟಕಗಳಿಂದ ಅಥವಾ ಅಂತಾರಾಷ್ಟ್ರೀಯ ಲಸಿಕೆ ಡೋಸೇಜ್‌ ದೊರೆತರೆ ನಮ್ಮ ಬಳಿ ಇನ್ನೂ 5-6 ಕೋಟಿ ಡೋಸ್ ಲಸಿಕೆ ಇರಲಿದೆ. ಪ್ರತಿದಿನ 1 ಕೋಟಿ ಜನರಿಗೆ ಲಸಿಕೆ ನೀಡುವುದು ಇದರ ಉದ್ದೇಶವಾಗಿದೆ ಎಂದು ವಿವರಿಸಿದ್ದಾರೆ.

Covaxin will produce between 10-12 crores by July end : Dr N K Arora

ಎರಡು ವಿಭಿನ್ನ ಕೋವಿಡ್‌ ಡೋಸ್‌ಗಳನ್ನು ತೆಗೆದುಕೊಳ್ಳುವುದು "ಸೈದ್ಧಾಂತಿಕವಾಗಿ ಸಾಧ್ಯ" ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿ.ಕೆ ಪೌಲ್‌ ಈ ಹಿಂದೆ ಹೇಳಿದ್ದಾರೆ, ಆದರೆ ಈ ವಿಷಯದಲ್ಲಿ ಹೆಚ್ಚು ಆಳವಾದ ಸಂಶೋಧನೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಶೋದನೆ ನಡೆಸಲಾಗುವುದು ಎಂದು ತಿಳಿಸಿದರು.

"ಒಬ್ಬ ವ್ಯಕ್ತಿಯು ಮೊದಲ ಡೋಸ್‌ ಪಡೆದ ಲಸಿಕೆಗಿಂತ ಭಿನ್ನವಾದ ಲಸಿಕೆಯನ್ನು ಪಡೆಯಬಹುದೇ ಎಂದು ಜನರು ನನ್ನನ್ನು ಕೇಳಿದ್ದೀರಿ. ವೈಜ್ಞಾನಿಕವಾಗಿ ಮತ್ತು ಸೈದ್ಧಾಂತಿಕವಾಗಿ ಸಾಧ್ಯವಿದೆ. ಆದರೆ ಇದನ್ನು ಶಿಫಾರಸು ಮಾಡುವುದು ಕಷ್ಟ. ಯಾಕೆಂದರೆ ದೃಢವಾದ ವೈಜ್ಞಾನಿಕ ಪುರಾವೆಗಳು ಇಲ್ಲ ಎಂದು ಈ ಹಿಂದೆ ಪೌಲ್‌ ಹೇಳಿದ್ದರು.

ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಉದಾಹರಣೆಗೆ ಮೊದಲ ಲಸಿಕೆ ದಾಸ್ತಾನು ಇಲ್ಲದಿದ್ದರೆ, ಜನರಿಗೆ ಎರಡನೇ ಡೋಸೇಜ್‌ಗೆ ಬೇರೆ ಲಸಿಕೆ ನೀಡಲು ಅವಕಾಶ ನೀಡಲಾಗುವುದು ಎಂದು ಬ್ರಿಟನ್ ಜನವರಿಯಲ್ಲಿ ಹೇಳಿರುವುದನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬಹುದು.

ಭಾರತದಲ್ಲಿ 20,86,65,123 ಡೋಸ್‌ ಕೋವಿಡ್‌ ಲಸಿಕೆ ನೀಡಲಾಗಿದೆ. 4,30,67,110 ಮಂದಿ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
From June onwards, SII will be manufacturing 10-12 crore doses. Covaxin will also produce between 10-12 crores by July end says Dr N K Arora.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X