ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವದೆಹಲಿ: ಕೋವಾಕ್ಸಿನ್ ಕೊರತೆ ಏರಿಕೆ- ಲಸಿಕಾ ಕೇಂದ್ರಗಳು ಬಂದ್‌

|
Google Oneindia Kannada News

ನವದೆಹಲಿ, ಜೂ. 09: "ಸರ್ಕಾರ ನಡೆಸುವ ಕೋವಾಕ್ಸಿನ್ ಲಸಿಕೆ ಕೊರತೆ ಕಾಣಿಸಿಕೊಂಡ ಮೂರು ವಾರಗಳವರೆಗೆ ನಂತರ, 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವ ಕೇಂದ್ರಗಳನ್ನು ಬುಧವಾರದಿಂದ ಮುಚ್ಚಲಾಗುವುದು" ಎಂದು ದೆಹಲಿ ಶಾಸಕ ಅತಿಶಿ ಹೇಳಿದ್ದಾರೆ. 45 ಕ್ಕಿಂತ ಹೆಚ್ಚು ವಯಸ್ಸಿನವರಿಗೆ ಕೋವಾಕ್ಸಿನ್‌ ಲಸಿಕೆ ಕೊರತೆ ಕಾಣಿಸಿಕೊಂಡಿದೆ. ಇದರಿಂದಾಗಿ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ವರದಿ ತಿಳಿಸಿದೆ.

ಇದಕ್ಕೂ ಮೊದಲು ದೆಹಲಿ ಸರ್ಕಾರವು ಕೊರತೆ ಕಾರಣ ನೀಡಿ 18-44 ವಯೋಮಾನದವರ ಕೋವಾಕ್ಸಿನ್ ಕೇಂದ್ರಗಳನ್ನು ಮುಚ್ಚಿತ್ತು. ಭಾನುವಾರ ಹೊಸ ಸ್ಟಾಕ್‌ ಲಭ್ಯವಾಗಿದೆ. ಸೋಮವಾರ ಎರಡನೇ ಡೋಸ್‌ ಪಡೆಯುವವರಿಗೆ ಲಸಿಕೆ ನೀಡಲಾಗಿದೆ.

"ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿಯಲ್ಲ ಎಂದ ಅಧ್ಯಯನಕ್ಕೆ ಆಧಾರವೇ ಇಲ್ಲ"

ಈ ಬಗ್ಗೆ ಮಾಹಿತಿ ನೀಡಿರುವ ಶಾಸಕ ಅತಿಶಿ, "8,000 ಡೋಸ್ ಕೋವಾಕ್ಸಿನ್ ಇಂದು ಬಹುತೇಕ ಖಾಲಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕೇಂದ್ರಗಳನ್ನು ನಾಳೆಯಿಂದ ಮುಚ್ಚಬೇಕಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗಿದೆ. ಕೇಂದ್ರ ಸರ್ಕಾರವು ಈ ವಿಭಾಗಕ್ಕೆ ಲಸಿಕೆ ಕಳುಹಿಸಲು ನಾವು ಕಾಯುತ್ತಿದ್ದೇವೆ. ಈ ವಿಭಾಗಕ್ಕೆ ಕೋವಿಶೀಲ್ಡ್ ಸ್ಟಾಕ್ ಲಭ್ಯವಿದೆ" ಎಂದು ತಿಳಿಸಿದ್ದಾರೆ.

 Covaxin shortage looms: centres shuts in New Delhi

ಹಾಗೆಯೇ "ಸೋಮವಾರ 66,082 ಜನರಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 33,696 ಜನರು ಮೊದಲ ಡೋಸ್ ಮತ್ತು 32,386 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಇಲ್ಲಿಯವರೆಗೆ, 57.33 ಲಕ್ಷ ಜನರಿಗೆ ಕನಿಷ್ಠ ಒಂದು ಡೋಸ್‌ ನೀಡಲಾಗಿದೆ. 13 ಲಕ್ಷ ಜನರಿಗೆ ಎರಡೂ ಡೋಸ್‌ ಲಸಿಕೆ ಲಭಿಸಿದೆ. 45 ಕ್ಕಿಂತ ಹೆಚ್ಚು ಜನಸಂಖ್ಯೆಯ ಅರ್ಧದಷ್ಟು ಜನರು ಕನಿಷ್ಠ ಒಂದು ಡೋಸ್‌ ಪಡೆದಿದ್ದಾರೆ" ಮಾಹಿತಿ ನೀಡಿದ್ದಾರೆ.

"ಕಳೆದ ಕೆಲವು ವಾರಗಳಲ್ಲಿ, ಈ ಗುಂಪಿನ ವ್ಯಾಕ್ಸಿನೇಷನ್ ವೇಗವು ನಿಧಾನವಾಗಿದೆ. ಇತ್ತೀಚೆಗೆ ಈ ಗುಂಪಿನಲ್ಲಿ ಅಧಿಕ ಕೋವಿಡ್ ಬಂದಿರುವುದು ಹಾಗೂ ಲಸಿಕೆ ಪಡೆಯುವುದರಿಂದ ಸ್ವಲ್ಪ ಹಾನಿಯಾಗಬಹುದು ಎಂಬ ತಪ್ಪು ಕಲ್ಪನೆ ಕಾರಣವಾಗಿದೆ" ಎಂದು ಅಭಿಪ್ರಾಯಿಸಿದ್ದಾರೆ.

ಡೆಲ್ಟಾ, ಬೀಟಾ ರೂಪಾಂತರಿಗಳಿಂದ ಕೋವಾಕ್ಸಿನ್ ಲಸಿಕೆ ರಕ್ಷಣೆ: ಅಧ್ಯಯನ ವರದಿಡೆಲ್ಟಾ, ಬೀಟಾ ರೂಪಾಂತರಿಗಳಿಂದ ಕೋವಾಕ್ಸಿನ್ ಲಸಿಕೆ ರಕ್ಷಣೆ: ಅಧ್ಯಯನ ವರದಿ

18-44 ವರ್ಷಗಳ ವಿಭಾಗಕ್ಕೆ, ಏತನ್ಮಧ್ಯೆ ನಗರದಲ್ಲಿ ಕೋವಿಶೀಲ್ಡ್ ಡೋಸ್‌ ಇನ್ನೂ ಇದೆ. ಮೊದಲ ಡೋಸ್‌ ಪಡೆಯುವವರು ಯಾವುದೇ ಸರ್ಕಾರಿ ಕೇಂದ್ರದಲ್ಲಿ ಪಡೆದಿಲ್ಲ ಎಂಬುದು ಆಗಿದೆ. ಸರ್ಕಾರಿ ಮತ್ತು ಖಾಸಗಿ ಕೇಂದ್ರಗಳಲ್ಲಿ ತಮ್ಮ ಎರಡನೇ ಡೋಸ್‌ ಲಸಿಕೆಗಾಗಿ ಕಾಯುತ್ತಿರುವವರಿಗೆ ಈ ಲಸಿಕೆ ಮೀಸರಿಸಲಾಗಿದೆ ಎನ್ನಲಾಗಿದೆ.

ಪಿಎಂ ನರೇಂದ್ರ ಮೋದಿ ಸೋಮವಾರ 18-44 ವಯೋಮಾನದವರಿಗೂ ಉಚಿತ ಕೊರೊನಾ ಲಸಿಕೆ ಘೋಷಿಸಿದ್ದು ಈ ನೀತಿಯಡಿಯಲ್ಲಿ, ಲಸಿಕೆ ಜೂನ್ 21 ರಿಂದ ಎಲ್ಲಾ ವರ್ಗದ ಜನರಿಗೆ ಲಭ್ಯವಾಗಲಿದೆ.

(ಒನ್‌ಇಂಡಿಯಾ ಸುದ್ದಿ)

English summary
Covaxin shortage looms for 45+ now, centres shut today in New Delhi. Earlier, the Delhi government was forced to shut Covaxin centres for those in the 18-44 age group due to shortage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X