ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ಟಾ ರೂಪಾಂತರಿ ವಿರುದ್ಧ ಎರಡು ಲಸಿಕೆ ಪರಿಣಾಮಕಾರಿ

|
Google Oneindia Kannada News

ನವದೆಹಲಿ, ಜೂನ್ 22: ಕೊರೊನಾವೈರಸ್‌ನ ಡೆಲ್ಟಾ ರೂಪಾಂತರಿ ವಿರುದ್ಧ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ಲಸಿಕೆ ಪರಿಣಾಮಕಾರಿ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಯಾವುದೇ ರೂಪಾಂತರವನ್ನು ಅದರ ಪ್ರಸರಣದ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ. ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, '' ಭಾರತ ಸೇರಿದಂತೆ 80 ದೇಶಗಳಲ್ಲಿ ಡೆಲ್ಟಾ ರೂಪಾಂತರ ಕಂಡುಬಂದಿದೆ. ಅಮೆರಿಕ, ಯುಕೆ, ಪೋರ್ಚುಗಲ್, ಸ್ವಿಡ್ಜರ್‌ಲೆಂಡ್, ಜಪಾನ್, ನೇಪಾಳ, ಚೀನಾ, ರಷ್ಯಾ ಮತ್ತು ಭಾರತದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಕಂಡುಬಂದಿದೆ'' ಎಂದು ಹೇಳಿದ್ದಾರೆ.

ದೇಶದಲ್ಲಿ ಕೊರೊನಾ ಎರಡನೇ ಅಲೆ ಕೊನೆಯಾಯ್ತಾ? ತಜ್ಞರ ಪ್ರಕಾರ ಏನು...ದೇಶದಲ್ಲಿ ಕೊರೊನಾ ಎರಡನೇ ಅಲೆ ಕೊನೆಯಾಯ್ತಾ? ತಜ್ಞರ ಪ್ರಕಾರ ಏನು...

ಭಾರತದಲ್ಲಿ ಇಲ್ಲಿಯವರೆಗೆ ಡೆಲ್ಟಾ ಪ್ಲಸ್ ರೂಪಾಂತರದ ಒಟ್ಟು 22 ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ವರದಿಯಾದ 22 ಡೆಲ್ಟಾ ಪ್ಲಸ್ ರೂಪಾಂತರಗಳ ಪೈಕಿ 16 ಪ್ರಕರಣಗಳು ಮಹಾರಾಷ್ಟ್ರದ ಜಲ್ಗಾಂವ್ ಮತ್ತು ರತ್ನಗಿರಿಯಲ್ಲಿವೆ ಎಂದು ತಿಳಿಸಿದ್ದಾರೆ. ಉಳಿದವು ಕೇರಳ ಹಾಗೂ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿವೆ.

Covaxin, Covishield Effective Against Delta Variant Of Covid-19

ಆರೋಗ್ಯ ಸಚಿವಾಲಯವು ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶಕ್ಕೆ ಪತ್ರ ಬರೆದಿದ್ದು, ಸೋಂಕಿನ ಡೆಲ್ಟಾ ಪ್ಲಸ್ ರೂಪಾಂತರಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಹೇಳಿದರು.
ಹೊಸ ಲಸಿಕೆ ನೀತಿಯ ಮೊದಲ ದಿನವಾದ ಜೂನ್ 21 ರಂದು ಒಟ್ಟು 88.09 ಲಕ್ಷ ಪ್ರಮಾಣದ ಲಸಿಕೆ ನೀಡಲಾಗಿದೆ ಎಂದರು. ಮಧ್ಯಪ್ರದೇಶವು ಒಂದೇ ದಿನದಲ್ಲಿ 17 ಲಕ್ಷ ಡೋಸ್‌ಗಳನ್ನು ನೀಡುವ ಮೂಲಕ ಇತರೆ ರಾಜ್ಯಗಳಿಗಿಂತ ಮುಂದಿದೆ.

ನಂತರ ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಹರಿಯಾಣ, ಗುಜರಾತ್, ರಾಜಸ್ಥಾನಗಳಿವೆ. ಕೋವಿನ್ ಅಪ್ಲಿಕೇಷನ್‌ಗಳಲ್ಲಿ ತೃತೀಯ ಲಿಂಗಿಗಳನ್ನು ಕೂಡ ಅಳವಡಿಸಲಾಗಿದೆ.

English summary
Covaxin and Covishield are effective against the Delta variant of coronavirus, Health Secretary Rajesh Bhushan said on Tuesday. Any variant is categorised as 'variant of interest' or 'variant of concern' on the basis of its transmissibility and virulence, he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X