ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಶೀಲ್ಡ್ ಇಲ್ಲ, ಕೊವ್ಯಾಕ್ಸಿನ್ ಇಲ್ಲ: 4 ದಿನದಲ್ಲಿ ಲಸಿಕೆ ಎಲ್ಲ ಖಾಲಿ ಖಾಲಿ!

|
Google Oneindia Kannada News

ನವದೆಹಲಿ, ಮೇ 10: ಕೊರೊನಾವೈರಸ್ ಅಟ್ಟಹಾಸದ ನಡುವೆ ಮುಂದಿನ 24 ಗಂಟೆಗಳಲ್ಲಿ ಕೊವಿಶೀಲ್ಡ್ ಲಸಿಕೆ ಮತ್ತು ಮುಂದಿನ ಮೂರು ದಿನಗಳಲ್ಲಿ ಕೊವ್ಯಾಕ್ಸಿನ್ ಲಸಿಕೆಯು ಖಾಲಿ ಆಗಲಿದೆ ಎಂದು ನವದೆಹಲಿ ಆರೋಗ್ಯ ಸಚಿವ್ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನವದೆಹಲಿಯಲ್ಲಿ ಕೊರೊನಾವೈರಸ್ ಲಸಿಕೆ ಖಾಲಿ ಆಗುತ್ತಿದೆ. ಇನ್ನೊಂದು ದಿನದಲ್ಲಿ ಕೊವಿಶೀಲ್ಡ್ ಮತ್ತು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಕೊವ್ಯಾಕ್ಸಿನ್ ಲಸಿಕೆ ಖಾಲಿಯಾಗಲಿದ್ದು, ಸಾಧ್ಯವಾದಷ್ಟು ಬೇಗ ಲಸಿಕೆಯನ್ನು ಸರರಾಜು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

'ಕಾಸ್'ಬಾತ್ ಸುದ್ದಿ: ಖಾಸಗಿ ಆಸ್ಪತ್ರೆಗಳಲ್ಲಿ 300 ರೂ. ಕೊರೊನಾ ಲಸಿಕೆಗೆ 1200 ರೂ.!'ಕಾಸ್'ಬಾತ್ ಸುದ್ದಿ: ಖಾಸಗಿ ಆಸ್ಪತ್ರೆಗಳಲ್ಲಿ 300 ರೂ. ಕೊರೊನಾ ಲಸಿಕೆಗೆ 1200 ರೂ.!

ನೆರೆಯ ಗಜಿಯಾಬಾದ್, ಗುರುಗಾವ್ ಮತ್ತು ನೋಯ್ಡಾ ಪ್ರದೇಶಗಳಿಂದಲೂ ಜನರು ಕೊರೊನಾವೈರಸ್ ಲಸಿಕೆ ಪಡೆಯಲು ದೆಹಲಿಗೆ ಆಗಮಿಸುತ್ತಾರೆ. ಈ ಹಿನ್ನೆಲೆ ದೆಹಲಿ ಆಸ್ಪತ್ರೆಗಳಲ್ಲಿ ಲಸಿಕೆ ಖಾಲಿ ಆಗಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡಾ ಮೊದಲೇ ಎಚ್ಚರಿಕೆ ನೀಡಿದ್ದರು.

Covaxin And Covishield Vaccine Last In Just 3-4 Days, Delhi Health Ministers Alert

18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ:

ನವದೆಹಲಿಯಲ್ಲಿ ಮೇ ತಿಂಗಳ ಆರಂಭದಿಂದ 18 ವರ್ಷ ಮೇಲ್ಪಟ್ಟ ಯುವಕರಿಗೂ ಕೊರೊನಾವೈರಸ್ ಲಸಿಕೆ ವಿತರಣೆ ಆರಂಭಿಸಲಾಗುವುದು ಎಂದುಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಒಂದು ಕಡೆ ಖಾಸಗಿ ಆಸ್ಪತ್ರೆಗಳು ಕಂಪನಿಯಿಂದಲೇ ನೇರವಾಗಿ ಲಸಿಕೆ ಖರೀದಿಸಲು ಅವಕಾಶವಿದೆ. ರಾಜ್ಯ ಸರ್ಕಾರ ಮಾತ್ರ ಕೇಂದ್ರ ಸರ್ಕಾರವು ನೀಡುತ್ತಿರುವ ರಾಜ್ಯದ ನಿಗದಿತ ಪಾಲನ್ನು ಮಾತ್ರ ಪಡೆದುಕೊಳ್ಳುತ್ತಿದೆ. ಏಕೆಂದರೆ ಲಸಿಕೆ ಉತ್ಪಾದನಾ ಕಂಪನಿಗಳು ರಾಜ್ಯ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಲಸಿಕೆಯನ್ನು ನೀಡಲು ಮತ್ತಷ್ಟು ಸಮಯಾವಕಾಶ ಬೇಕಾಗುತ್ತದೆ ಎಂದು ಹೇಳಿವೆ.

Covaxin And Covishield Vaccine Last In Just 3-4 Days, Delhi Health Ministers Alert

3 ಕೋಟಿ ಡೋಸ್ ಲಸಿಕೆ ಅಗತ್ಯವಿದೆ ಎಂದ ಸಿಎಂ:

ನವದೆಹಲಿಯಲ್ಲಿ 18 ರಿಂದ 45 ವರ್ಷ ವಯೋಮಾನದ 2 ಕೋಟಿಗೂ ಅಧಿಕ ಮಂದಿ ಇದ್ದಾರೆ. 50 ಲಕ್ಷಕ್ಕೂ ಹೆಚ್ಚು ಜನರು 45 ವರ್ಷ ಮೇಲಿನವರಾಗಿದ್ದಾರೆ. ಈ ಹಿನ್ನೆಲೆ ರಾಷ್ಟ್ರ ರಾಜಧಾನಿಯಲ್ಲಿ ಒಂದೂವರೆ ಕೋಟಿ ಜನರಿಗೆ ನೀಡುವುದಕ್ಕಾಗಿ 3 ಕೋಟಿ ಡೋಸ್ ಲಸಿಕೆ ಬೇಕಾಗಿದೆ. ಮುಂದಿನ ಮೂರು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳು 18 ವರ್ಷ ಮೇಲ್ಪಟ್ಟ 83 ಲಕ್ಷ ಫಲಾನುಭವಿಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

English summary
Covaxin And Covishield Vaccine Last In Just 3-4 Days, Delhi Health Minister Satyendra Jain Alert.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X