ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿರುವ ವಿಜಯ್ ಮಲ್ಯ ಆಸ್ತಿ ಜಪ್ತಿಗೆ ಆದೇಶ

|
Google Oneindia Kannada News

ನವದೆಹಲಿ,ಮಾರ್ಚ್ 23: ಬೆಂಗಳೂರಿನಲ್ಲಿರುವ ಉದ್ಯಮಿ ವಿಜಯ್ ಮಲ್ಯ ಅವರ ಆಸ್ತಿಯನ್ನು ಜಪ್ತಿ ಮಾಡಲು ದೆಹಲಿ ಹೈಕೋರ್ಟ್ ಆದೇಶ ನೀಡಿದೆ.

ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆದೇಶ ನೀಡಿದೆ. ಮುಂದಿನ ವಿಚಾರಣೆ ನಡೆಯುವ ಜುಲೈ 10ರೊಳಗೆ ಮಲ್ಯರಿಗೆ ಸೇರಿದ ಸ್ವತ್ತುಗಳನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಬೆಂಗಳೂರು ಪೊಲೀಸರಿಗೆ ಸೂಚನೆ ನೀಡಿದೆ.

ನಾನು ಹಣ ವಾಪಸ್ ನೀಡಲು ಸಿದ್ಧ, ಆದರೆ ಸರ್ಕಾರವೇ ಬಿಡ್ತಿಲ್ಲ: ವಿಜಯ್ ಮಲ್ಯ ಆರೋಪ ನಾನು ಹಣ ವಾಪಸ್ ನೀಡಲು ಸಿದ್ಧ, ಆದರೆ ಸರ್ಕಾರವೇ ಬಿಡ್ತಿಲ್ಲ: ವಿಜಯ್ ಮಲ್ಯ ಆರೋಪ

ಈ ಸಂಬಂಧ ಹಿಂದೆ ನೀಡಲಾದ ಆದೇಶವನ್ನು ಜಾರಿಗೊಳಿಸಲು ಹೆಚ್ಚು ಸಮಯದ ಅಗತ್ಯವಿದೆ ಎಂದು ಕೋರಿ ಬೆಂಗಳೂರು ಪೊಲೀಸರು ಜಾರಿ ನಿರ್ದೇಶನಾಲಯ (ಇಡಿ)ಯ ವಿಶೇಷ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್) ಎನ್.ಕೆ. ಮಟ್ಟಾ ಮತ್ತು ಹಿರಿಯ ವಕೀಲರಾದ ಸಂವೇದನಾ ವರ್ಮಾ ಮೂಲಕ ಕೋರ್ಟ್ ಮನವಿ ಸಲ್ಲಿಸಿದ್ದರು.

Court orders attachment of Vijay Mallyas properties

ಮುಖ್ಯ ಮೆಟ್ರೊಪಾಲಿಟನ್ ದಂಡಾಧಿಕಾರಿ ದೀಪಕ್ ಶೇರಾವತ್ ಅವರು ಈ ಸಂಬಂಧ ಹೊಸ ನಿರ್ದೇಶನಗಳನ್ನು ಜಾರಿಗೊಳಿಸಿದೆ. ಬೆಂಗಳೂರಿನಲ್ಲಿ ಮಲ್ಯಗೆ ಸೇರಿದ 159 ಸ್ವತ್ತುಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಯಾವುದನ್ನೂ ಜಪ್ತಿ ಮಾಡಲು ಸಾಧ್ಯವಾಗಿಲ್ಲ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದರು.

English summary
A Delhi court has ordered attachment of liquor baron Vijay Mallya's properties in Bengaluru in a case relating to FERA violations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X