ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೋರ್ಜರಿ ಕೇಸ್ : ಜಗದೀಶ್ ಟೈಟ್ಲರ್ ಗೆ ಜಾಮೀನು

By Mahesh
|
Google Oneindia Kannada News

Court grants bail to Jagdish Tytler in forgery case
ನವದೆಹಲಿ, ಅ.1: ಪ್ರಧಾನ ಮಂತ್ರಿಯವರಿಗೆ ನಕಲಿ ಪತ್ರ ರವಾನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಗೆ ದೆಹಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ವಿವಾದಿತ ಉದ್ಯಮಿ ಅಭಿಶೇಕ್ ವರ್ಮಾ ಇದರಲ್ಲಿ ಪ್ರಮುಖ ಆರೋಪಿಯಾಗಿದ್ದರು.

ಟೈಟ್ಲರ್ ಅವರು ವೈಯಕ್ತಿಕ ಬಾಂಡ್ 2 ಲಕ್ಷ ಹಾಗೂ ಇಬ್ಬರು ಶ್ಯೂರಿಟಿ ನೀಡಿ ಸಿಬಿಐ ವಿಶೇಷ ನ್ಯಾ. ವಿಕೆ ಗುಪ್ತ ಅವರು ಜಾಮೀನು ಮಂಜೂರು ಮಾಡಿದರು.

ಟೈಟ್ಲರ್ ಪರವಾಗಿ ಕೋರ್ಟ್ ನಲ್ಲಿ ಹಾಜರಾದ ಹಿರಿಯ ವಕೀಲ ದಿನೇಶ್ ಮಾಥುರ್, ಕೊನೆಕ್ಷಣದಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಹೆಸರನ್ನು ಪ್ರಕರಣದಲ್ಲಿ ಸೇರಿಸಲಾಗಿತ್ತು. ಕೋರ್ಟ್ ಗೆ ಅವರು ಸ್ವತಃ ಹಾಜರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸುವ ಅಗತ್ಯವಿಲ್ಲ ಎಂದು ವಾದ ಮಂಡಿಸಿದರು.

ಸಂವಿಧಾನದ 420ನೆ ವಿಧಿಯನ್ನು ಅವರ ವಿರುದ್ಧ ಪ್ರಯೋಗಿಸಲು ಬರುವುದಿಲ್ಲ ಎಂದು ಅವರು ಕೋರ್ಟ್ ನಲ್ಲಿ ಹೇಳಿದರು. ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿದ ಸಿಬಿಐ ಪ್ರಾಸಿಕ್ಯೂಟರ್ ಅತುಲ್ ಶರ್ಮಾ, ಟೈಟ್ಲರ್ ಪ್ರಭಾವಿ ವ್ಯಕ್ತಿಯಾಗಿರುವ ಕಾರಣ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಆದ್ದರಿಂದ ಅವರಿಗೆ ಜಾಮೀನು ನೀಡಬಾರದು ಎಂದು ವಾದಿಸಿದರು.

ಮತ್ತೊಂದು ಪ್ರಕರಣ: 1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ನಂತರ ನಡೆದ ಸಿಖ್ಖರ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನ ಹಿರಿಯ ನಾಯಕ ಜಗದೀಶ್ ಟೈಟ್ಲರ್ ವಿರುದ್ಧ ಸಿಬಿಐ ಮರು ತನಿಖೆ ನಡೆಸುವಂತೆ ದೆಹಲಿ ನ್ಯಾಯಾಲಯ ಏ.10, 2013 ರಂದು ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ನಂತರ ಉತ್ತರ ದೆಹಲಿಯ ಗುರ್ ದ್ವಾರ ಬಳಿ ನಡೆದಿದ್ದ ಸಿಖ್ ಹತ್ಯಾಕಾಂಡದ ಅರೋಪವನ್ನು ಟೈಟ್ಲರ್ ಮೇಲೆ ಹೊರೆಸಲಾಗಿತ್ತು. 1984ರಲ್ಲಿ ನಡೆದ ಸಿಖ್ ವಿರೋಧಿ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಗೆ ಕ್ಲೀನ್ ಚಿಟ್ ಕೊಟ್ಟ ಸಿಬಿಐ ವರದಿಗೆ ದೆಹಲಿ ಹೈಕೋರ್ಟ್ ಸಹಮತ ವ್ಯಕ್ತಪಡಿಸಿತ್ತು.

(ಪಿಟಿಐ)

English summary
A Delhi court on Monday(Sept 30) granted bail to Congress leader Jagdish Tytler, charged along with controversial businessman Abhishek Verma in a case of alleged forgery of a letter sent to the Prime Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X