ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು: ಕನಿಷ್ಠ ಒಂದು ವಾರ ವಿಳಂಬ

|
Google Oneindia Kannada News

ಬೆಂಗಳೂರು, ಫೆಬ್ರವರಿ 05: ನಿರ್ಭಯಾ ಅತ್ಯಾಚಾರಿಗಳ ಗಲ್ಲು ಶಿಕ್ಷೆ ಮತ್ತೆ ಕನಿಷ್ಠ ಒಂದು ವಾರ ವಿಳಂಬ ಆಗಲಿದೆ.

ದೆಹಲಿ ಮತ್ತು ಕೇಂದ್ರ ಸರ್ಕಾರಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಅಪರಾಧಿಗಳ ಕ್ಯುರೇಟಿವ್ ಅರ್ಜಿಗೆ ತಡೆ ನೀಡಲು ಒಪ್ಪಲಿಲ್ಲ ಆದರೆ ನಿರ್ಭಯಾ ಅಪರಾಧಿಗಳು ಒಂದು ವಾರದಲ್ಲಿ ಎಲ್ಲ ಕಾನೂನು ಮನವಿಗಳನ್ನೂ ಸಲ್ಲಿಸಬೇಕು ಎಂದು ಹೇಳಿತು.

'ಒಬ್ಬ ಅಪರಾಧಿಯ ಕ್ಯುರೇಟಿವ್ ಅರ್ಜಿ ನ್ಯಾಯಾಲಯದ ಮುಂದೆ ಇದ್ದಾಗ ಉಳಿದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬಹುದು ಎಂದು ದೆಹಲಿ ಕಾರಾಗೃಹ ನಿಯಮಗಳಲ್ಲಿ ಇಲ್ಲ ಹಾಗಾಗಿ ಒಬ್ಬ ಅಪರಾಧಿಯ ಕ್ಯುರೇಟಿವ್ ಅರ್ಜಿ ವಿಚಾರಣೆಯಲ್ಲಿದ್ದಾಗ ಉಳಿದವರಿಗೆ ಶಿಕ್ಷೆ ನೀಡಲಾಗದು' ಎಂದು ದೆಹಲಿ ಹೈಕೋರ್ಟ್ ಹೇಳಿದೆ.

Court Gave One Week Time To Nirbhaya Convicts

ಆದರೆ ನಿರ್ಭಯಾ ಪ್ರಕರಣ ಅಪರಾಧಿಗಳಿಗೆ ಸೂಚನೆಯನ್ನೂ ನೀಡಿರುವ ನ್ಯಾಯಾಲಯ, 'ಏನೇ ಕಾನೂನಾತ್ಮಕ ಪ್ರಕರಣಗಳಿದ್ದರೂ ಅವನ್ನು ಒಂದು ವಾರದ ಒಳಗಾಗಿ ಮುಗಿಸಬೇಕು' ಎಂದು ಹೇಳಿದೆ.

ಫೆಬ್ರವರಿ 1 ರಂದು ನಿರ್ಭಯಾ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕಾಗಿತ್ತು. ಆದರೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ ಕಾರಣ ಮರಣ ದಂಡನೆ ಶಿಕ್ಷೆ ವಿಧಿಸಿರಲಿಲ್ಲ. ಇದರ ವಿರುದ್ಧ ಕೇಂದ್ರ ಮತ್ತು ದೆಹಲಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದ್ದವು.

English summary
Delhi court gave one week time to Nirbhaya convicts to complete all legal remedies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X