ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಪ್ರಧಾನಿ ಎಂದು ದೇಶ ಒಪ್ಪುವುದಿಲ್ಲ : ದಿಗ್ವಿಜಯ್

|
Google Oneindia Kannada News

Digvijay Singh
ನವದೆಹಲಿ, ಸೆ.13 : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುಲು ಸಜ್ಜಾಗಿರುವಂತೆ ಕಾಂಗ್ರೆಸ್ ಮೋದಿ ವಿರುದ್ಧ ವಾಗ್ದಾಳಿ ಆರಂಭಿಸಿದೆ. "ಮೋದಿಯನ್ನು ದೇಶದ ಜನರು ಪ್ರಧಾನಿಯಾಗಿ ಒಪ್ಪುವುದಿಲ್ಲ" ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಶುಕ್ರವಾರ ನವದೆಹಲಿಯಲ್ಲಿ ಮಾತನಾಡಿದ ದಿಗ್ವಿಜಯ್ ಸಿಂಗ್, "ಮೋದಿ ದೇಶವನ್ನು ಒಗ್ಗೂಡಿಸುವ ಸಾಮರ್ಥ್ಯ ಹೊಂದಿಲ್ಲ, ಹೀಗಾಗಿ ದೇಶವೆಂದಿಗೂ ಅವರನ್ನು ಪ್ರಧಾನಿಯನ್ನಾಗಿ ಒಪ್ಪಿಕೊಳ್ಳುವುದಿಲ್ಲ'" ಎಂದು ಅಭಿಪ್ರಾಯಪಟ್ಟಿದ್ದಾರೆ.

ನರೇಂದ್ರ ಮೋದಿ ತನ್ನ ವೈಯಕ್ತಿಕ ಮಹಾತ್ವಾಕಾಂಕ್ಷೆಗಾಗಿ ಪಕ್ಷದ ಮೈತ್ರಿಕೂಟವನ್ನು ಒಡೆಯುವ ಮತ್ತು ವಿವಾದ ಸೃಷ್ಟಿಸುತ್ತಿದ್ದಾರೆ. ಇಂತಹ ವ್ಯಕ್ತಿ ದೇಶದಲ್ಲಿ ಜನರು ಒಗ್ಗಾಟ್ಟಾಗಿರಲು ಬಿಡುವುದಿಲ್ಲ. ಆದ್ದರಿಂದ, ಜನರು ಅವರನ್ನು ಪ್ರಧಾನಿಯಾಗಿ ಸ್ವೀಕರಿಸುವುದಿಲ್ಲ ಎಂದು ವಿಶ್ಲೇಷಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಮೋದಿ ಚಿಂತೆಯ ವಿಷಯವಲ್ಲ. ಯಾರ ವಿರುದ್ಧವೂ ಹೋರಾಡುವ ಶಕ್ತಿ ಪಕ್ಷಕ್ಕಿದೆ. ಮೋದಿ ಕೋಮುವಾದವನ್ನು ಹರಡುತ್ತಿರುವ ಸಿದ್ಧಾಂತವನ್ನು ದೇಶದಲ್ಲಿ ಪ್ರತಿಪಾದಿಸುತ್ತಿದ್ದಾರೆ. ಆದ್ದರಿಂದ ಅವರನ್ನು ವಿರೋಧಿಸುತ್ತಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ.

ಬಿಜೆಪಿಯು ಯಾವತ್ತೂ ದೇಶದಲ್ಲಿ ಧಾರ್ಮಿಕ ಧ್ರುವೀಕರಣಕ್ಕಾಗಿಯೇ ಕೆಲಸ ಮಾಡುತ್ತದೆ. ಮುಜಾಫರ್ ನಗರದಲ್ಲಿ ನಡೆದ ಹಿಂಸಾಚಾರದಲ್ಲಿಯೂ ಬಿಜೆಪಿಯ ಕೈವಾಡವಿದೆ ಎಂದು ಗಂಭೀರವಾಗಿ ಆರೋಪಿಸಿದರು.

English summary
Congress General Secretary Digvijay Singh has said that, the country will never accept Gujarat Chief Minister and BJP's possible prime ministerial candidate Narendra Modi as he can not keep the nation united. Modi broke his own alliance and created a controversy in his party he will neither keep the nation he alleged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X