ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ: ದೆಹಲಿ ಉಪ ಕಾರ್ಯದರ್ಶಿ ಅಮಾನತುಗೊಳಿಸಿದ ಗವರ್ನರ್‌

|
Google Oneindia Kannada News

ನವದೆಹಲಿ, ಜೂ. 23: ಭ್ರಷ್ಟಾಚಾರ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಚೇರಿಯ ಉಪ ಕಾರ್ಯದರ್ಶಿ ಮತ್ತು ಇಬ್ಬರು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ)ಗಳನ್ನು ಅಮಾನತುಗೊಳಿಸಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಆದೇಶ ಹೊರಡಿಸಿದ್ದಾರೆ.

ಪ್ರಕಾಶ್ ಚಂದ್ರ ಠಾಕೂರ್‌ರನ್ನು ಮುಖ್ಯಮಂತ್ರಿ ಕಚೇರಿಯಲ್ಲಿ ಉಪ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿದೆ. ವಸಂತ ವಿಹಾರ್ ಎಸ್‌ಡಿಎಂ ಹರ್ಷಿತ್ ಜೈನ್ ಮತ್ತು ವಿವೇಕ್ ವಿಹಾರ್ ಎಸ್‌ಡಿಎಂ ದೇವೇಂದ್ರ ಶರ್ಮಾ ಅಮಾನತುಗೊಳಿಸಲಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಉಮ್ರಾನ್‌ ಮಲಿಕ್ ಭೇಟಿಯಾಗಿ ಶುಭಾರೈಸಿದ ಲೆ. ಗವರ್ನರ್‌, ಸರಕಾರಿ ಕೆಲಸದ ಆಫರ್ ಉಮ್ರಾನ್‌ ಮಲಿಕ್ ಭೇಟಿಯಾಗಿ ಶುಭಾರೈಸಿದ ಲೆ. ಗವರ್ನರ್‌, ಸರಕಾರಿ ಕೆಲಸದ ಆಫರ್

ಕಲ್ಕಾಜಿ ಹೊರವಲಯ ಹಾಗೂ ಇಡಬ್ಲ್ಯೂಎಸ್ ಫ್ಲಾಟ್‌ಗಳ ನಿರ್ಮಾಣದಲ್ಲಿ ಲೋಪಗಳು ಕಂಡು ಬಂದ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಸೋಮವಾರ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ) ಇಬ್ಬರು ಸಹಾಯಕ ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದ್ದಾರೆ.

Corruption: Delhi Governor Suspended Deputy Secretary

ಕಳೆದ ವಾರ, ರಾಷ್ಟ್ರೀಯ ರಾಜಧಾನಿ ಹೆಹಲಿಯ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಪರಿಶೀಲಿಸಲು ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಲೆಫ್ಟಿನೆಂಟ್ ಗವರ್ನರ್‌ ವಹಿಸಿದ್ದರು. ಇದರಲ್ಲಿ ಪ್ರಸ್ತುತ ಕಾನೂನು ಮತ್ತು ಸುವ್ಯವಸ್ಥೆಯ ಸನ್ನಿವೇಶ, ಅಪರಾಧ ದತ್ತಾಂಶ ವಿಶ್ಲೇಷಣೆ, ತಡೆಗಟ್ಟುವ ಕ್ರಮಗಳು, ಪ್ರಮುಖ ಸವಾಲುಗಳು, ಸುಧಾರಣೆಗಳು ಅಥವಾ ಕೈಗೊಂಡ ಉಪಕ್ರಮಗಳು ಮತ್ತು ಅವುಗಳ ಬಗ್ಗೆ ಪೊಲೀಸ್‌ ಆಯುಕ್ತರು ಗವರ್ನರ್‌ರಿಗೆ ತಿಳಿಸಿದರು.

ಜೂನ್ 23ರಂದು ಭಾರತದ ನಿಮ್ಮ ನಗರದಲ್ಲಿ ಪೆಟ್ರೋಲ್-ಡೀಸೆಲ್ ದರ ತಿಳಿಯಿರಿಜೂನ್ 23ರಂದು ಭಾರತದ ನಿಮ್ಮ ನಗರದಲ್ಲಿ ಪೆಟ್ರೋಲ್-ಡೀಸೆಲ್ ದರ ತಿಳಿಯಿರಿ

ಲೆಫ್ಟಿನೆಂಟ್ ಗವರ್ನರ್ ದೆಹಲಿ ಪೊಲೀಸರು ಕೈಗೊಂಡ ಕ್ರಮಗಳನ್ನು ವಿಶೇಷವಾಗಿ ತನಿಖೆಯಿಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಪ್ರತ್ಯೇಕಿಸಿ ಪೊಲೀಸ್ ಠಾಣೆ ಮಟ್ಟದಲ್ಲಿ ಪಿಸಿಆರ್ ಅನ್ನು ಏಕೀಕರಿಸುವುದು, ಮಹಿಳಾ ಸುರಕ್ಷತೆಗಾಗಿ ಉಪಕ್ರಮಗಳು, ಯುವಾ ಕ್ರಮದ ಮೂಲಕ ಕೌಶಲ್ಯ ತರಬೇತಿ ಇತ್ಯಾದಿಗಳನ್ನು ಶ್ಲಾಘಿಸಿದರು.

ವೈಜ್ಞಾನಿಕ ಪುರಾವೆಗಳ ಸಂಗ್ರಹಣೆಯ ಮೇಲೆ ವಿಶೇಷ ಗಮನಹರಿಸುವ ಮೂಲಕ ಪ್ರಕರಣಗಳ ಸಮಯೋಚಿತ ಮತ್ತು ಸರಿಯಾದ ತನಿಖೆಯನ್ನು ಖಚಿತಪಡಿಸಿಕೊಳ್ಳುವಂತೆ ಅವರು ಸೂಚನೆ ನೀಡಿದರು. ಇದರಿಂದಾಗಿ ಅಪರಾಧದ ಪ್ರಮಾಣವನ್ನು ತಗ್ಗಿಸುತ್ತದೆ ಹಾಗೂ ಆ ಮೂಲಕ ಕಾನೂನಿನ ಪ್ರತಿಬಂಧಕ ಪರಿಣಾಮವನ್ನು ಬಲಪಡಿಸುತ್ತದೆ ಎಂದು ಹೇಳಿದರು.

Corruption: Delhi Governor Suspended Deputy Secretary

ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯ ಪೊಲೀಸಿಂಗ್‌ನ ಪ್ರಾಮುಖ್ಯತೆ ತಿಳಿಸಿದ ಅವರು, ಸಾರ್ವಜನಿಕ ಕುಂದುಕೊರತೆಗಳ ಪರಿಹಾರಕ್ಕಾಗಿ ಸ್ಥಳೀಯ ಪ್ರದೇಶಗಳಲ್ಲಿ ಸಾರ್ವಜನಿಕ ವಿಚಾರಣೆಗಳಿಗೆ ಒತ್ತು ನೀಡುವಂತೆ ಹೇಳಿದರು. ಲೆಫ್ಟಿನೆಂಟ್ ಗವರ್ನರ್ ಹೆಚ್ಚುವರಿ ಕೌಶಲ್ಯಗಳನ್ನು ಸುಧಾರಿಸಲು ಪೊಲೀಸ್ ಸಿಬ್ಬಂದಿಗೆ ನಿಯಮಿತ ತರಬೇತಿ ಅಗತ್ಯತೆ ಹಾಗೂ ಪಿಂಚದಣಿ ಮತ್ತು ಗ್ರಾಚ್ಯುಟಿಯ ಬಾಕಿ ಇರುವ ವಿಷಯಗಳ ಪರಿಹಾರ ಸೇರಿದಂತೆ ಪೊಲೀಸ್ ಸಿಬ್ಬಂದಿಯ ಕಲ್ಯಾಣ ಕ್ರಮಗಳನ್ನು ಹೆಚ್ಚಿಸಲು ಒತ್ತು ನೀಡುವಂತೆ ಹೇಳಿದರು.

ವಸತಿ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿಯ ತೃಪ್ತಿಯನ್ನು ಹೆಚ್ಚಿಸುವ ಸಲುವಾಗಿ ದೆಹಲಿ ಪೊಲೀಸ್ ವಸತಿ ನಿಗಮವನ್ನು ಮತ್ತಷ್ಟು ಬಲಪಡಿಸಬೇಕೆಂದು ಗವರ್ನರ್‌ ಸಕ್ಸೇನಾ ಸಲಹೆ ನೀಡಿದರು.

English summary
Delhi Lieutenant Governor Vinay Kumar Saxena has ordered the suspension of Delhi Chief minister Arvind Kejriwal's office deputy secretary and two Sub-Divisional Magistrates on corruption charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X