ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಸಂಪರ್ಕ ಬೆಳೆಸುವುದರಿಂದ ಮಾರಕ ಕೊರೊನಾ ವೈರಸ್ ಹರಡಬಹುದೇ?

|
Google Oneindia Kannada News

ನವದೆಹಲಿ, ಮಾರ್ಚ್.04: ಜಗತ್ತಿನಾದ್ಯಂತ ಹರಡುತ್ತಿರುವ ಮಾರಕ ಕೊರೊನಾ ವೈರಸ್ ಸುತ್ತ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. 70 ದೇಶಗಳಲ್ಲಿ ಕಾಣಿಸಿಕೊಂಡಿರುವ ಸೋಂಕಿಗೆ ಕಾರಣ ಏನು ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.

3,198 ಮಂದಿ ಪ್ರಾಣ ತೆಗೆದಿರುವ ಕೊರೊನಾ ವೈರಸ್ ಸೋಂಕು ವಿಶ್ವದಾದ್ಯಂತ 93,455 ಜನರಲ್ಲಿ ಕಾಣಿಸಿಕೊಂಡಿದೆ. ಸೋಂಕಿತರ ಸಂಖ್ಯೆ ಗಂಟೆಯಿಂದ ಗಂಟೆಗೆ ಹೆಚ್ಚುತ್ತಲೇ ಸಾಗುತ್ತಿದೆ. ಜನರಲ್ಲಿ ಮನೆ ಮಾಡಿರುವ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ತೆಗೆದುಕೊಳ್ಳುತ್ತಿವೆ.

CoronaVirus: ಚೀನಾದಲ್ಲಿ ಹುಟ್ಟಿದ ಸೋಂಕು ವಿಶ್ವಕ್ಕೆ ಹರಡಿದ್ದು ಹೇಗೆ?CoronaVirus: ಚೀನಾದಲ್ಲಿ ಹುಟ್ಟಿದ ಸೋಂಕು ವಿಶ್ವಕ್ಕೆ ಹರಡಿದ್ದು ಹೇಗೆ?

ಕೊರೊನಾ ವೈರಸ್ ನಿಂದ ಜಾಗೃತಿ ವಹಿಸುವಂತೆ ಮುನ್ಸೂಚನೆ ನೀಡಲಾಗುತ್ತಿದ್ದು, ಮಾರಕ ಸೋಂಕು ಹೇಗೆ ಹರಡುತ್ತದೆ. ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಮೊದಲ ಲಕ್ಷಣಗಳು ಯಾವುವು. ಯಾವುದರಿಂದ ಸೋಂಕು ಹರಡುತ್ತದೆ. ಯಾವುದರಿಂದ ಸೋಂಕು ಹರಡುವುದಿಲ್ಲ ಎಂಬುದರ ಕುರಿತು ವಿಸ್ತೃತ ವರದಿ ನಿಮ್ಮ ಮುಂದೆ.

ಮನುಷ್ಯರಿಗೆ ಪ್ರಾಣಿಯಿಂದ ಹರಡಿರುವ ಕೊರೊನಾ ವೈರಸ್

ಮನುಷ್ಯರಿಗೆ ಪ್ರಾಣಿಯಿಂದ ಹರಡಿರುವ ಕೊರೊನಾ ವೈರಸ್

ಕಳೆದ ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಚೀನಾದಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವ ಬಗ್ಗೆ ವರದಿಯಾಗಿತ್ತು. ಬಾವಲಿಯನ್ನು ಸೇವಿಸಿದ ಯುವತಿಯಿಂದ ಸೋಂಕು ಹರಡಿದೆ ಎಂದು ಹೇಳಲಾಗುತ್ತಿತ್ತು. ಸಾಮಾನ್ಯವಾಗಿ ಈ ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ ಎಂದು ತಿಳಿದು ಬಂದಿದೆ. ಆದರೆ, ಶ್ವಾನಗಳಿಂದ ಮನುಷ್ಯರಿಗೆ ಈ ಸೋಂಕು ಹರಡುವ ಸಾಧ್ಯತೆಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಸ್ಪಷ್ಟಪಡಿಸಿದೆ.

ಕೊರೊನಾ ವೈರಸ್ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಲಕ್ಷಣ?

ಕೊರೊನಾ ವೈರಸ್ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಲಕ್ಷಣ?

ಕೊರೊನಾ ವೈರಸ್ ಸೋಂಕಿತರಲ್ಲಿ ಹಲವು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಮೊದಲಿಗೆ ಜ್ವರ, ಶೀತ, ಕೆಮ್ಮು, ತಲೆನೋವು, ಶ್ವಾಸಕೋಶದಲ್ಲಿನ ಸಮಸ್ಯೆ ಹಾಗೂ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಸೋಂಕಿತರಲ್ಲಿ ನಿಮೋನಿಯಾ, ಕಿಡ್ನಿ ವೈಫಲ್ಯವು ಕೂಡಾ ಕಾಣಿಸಿಕೊಳ್ಳಲಿದೆ.

ಕೊರೊನಾ ವೈರಸ್: ಚೀನಾದಿಂದ 'ರೋಗ' ಆಮದು ಮಾಡಿಕೊಳ್ಳುತ್ತಿದೆಯಾ ಭಾರತ?ಕೊರೊನಾ ವೈರಸ್: ಚೀನಾದಿಂದ 'ರೋಗ' ಆಮದು ಮಾಡಿಕೊಳ್ಳುತ್ತಿದೆಯಾ ಭಾರತ?

ಮುತ್ತು ಕೊಟ್ಟರೆ ಅಂಟಿಕೊಳ್ಳುತ್ತೆ ಕೊರೊನಾ ಸೋಂಕು

ಮುತ್ತು ಕೊಟ್ಟರೆ ಅಂಟಿಕೊಳ್ಳುತ್ತೆ ಕೊರೊನಾ ಸೋಂಕು

ವಿದೇಶಗಳಲ್ಲಿ ಹಸ್ತಲಾಘನ ಮತ್ತು ಚುಂಬನ ಸಂಸ್ಕೃತಿ ಆಚರಣೆಯು ಸರ್ವೇ ಸಾಮಾನ್ಯ. ಈ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಚುಂಬನದಿಂದ ಕೊರೊನಾ ವೈರಸ್ ಸೋಂಕು ಖಂಡಿತವಾಗಿಯೂ ಹರಡುತ್ತದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಸೋಂಕಿತರ ಸ್ಮರ್ಶ ಮತ್ತು ಕೆಮ್ಮಿನಿಂದ ಕೊರೊನಾ

ಸೋಂಕಿತರ ಸ್ಮರ್ಶ ಮತ್ತು ಕೆಮ್ಮಿನಿಂದ ಕೊರೊನಾ

ವಿಶ್ವದಲ್ಲಿ ಕ್ಷಿಪ್ರಗತಿಯಲ್ಲಿ ವ್ಯಾಪಕವಾಗಿ ಕೊರೊನಾ ವೈರಸ್ ಸೋಂಕು ಹರಡಲು ಸಾಕಷ್ಟು ಕಾರಣಗಳಿವೆ. ಸೋಂಕಿತರ ಕಣ್ಣು, ಬಾಯಿ, ಮೂಗು, ಮುಖ, ಹಾಗೂ ಸ್ಪರ್ಶದಿಂದ ಕೊರೊನಾ ವೈರಸ್ ಹರಡುತ್ತದೆ. ಇದಿಷ್ಟೇ ಅಲ್ಲದೇ ಸೋಂಕಿತರು ಒಮ್ಮೆ ಕೆಮ್ಮಿದರೆ ಸುತ್ತಲೂ ಇರುವ ಜನರಿಗೆ ಸೋಂಕು ಹರಡುವ ಅಪಾಯವಿದೆ.

ಕೊರೊನಾ ಪೀಡಿತ ದೇಶದಿಂದ ಬಂದವರಿಗೆ ಭಾರತದಲ್ಲಿ ಹೇಗಿರುತ್ತೆ ಚಿಕಿತ್ಸೆ?ಕೊರೊನಾ ಪೀಡಿತ ದೇಶದಿಂದ ಬಂದವರಿಗೆ ಭಾರತದಲ್ಲಿ ಹೇಗಿರುತ್ತೆ ಚಿಕಿತ್ಸೆ?

1 ಮೀಟರ್ ಅಂತರ ಕಾಯ್ದುಕೊಂಡರೆ ಉತ್ತಮ

1 ಮೀಟರ್ ಅಂತರ ಕಾಯ್ದುಕೊಂಡರೆ ಉತ್ತಮ

ಕೊರೊನಾ ವೈರಸ್ ಸೋಂಕಿತರಿಂದ ಅಂತರ ಕಾಯ್ದುಕೊಂಡಷ್ಟು ಯಾವುದೇ ಅಪಾಯವಿಲ್ಲ. ಮಾರಕ ಸೋಂಕು ಕಾಣಿಸಿಕೊಂಡ ರೋಗಿಗಳಿಂದ ಕನಿಷ್ಠ 1 ಮೀಟರ್ ಅಂದರೆ 3 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಜನಸಂದಣಿ ಮಧ್ಯದಲ್ಲಿ ಓಡಾಡುವುದರಿಂದ, ಸೋಂಕಿತರು ಸುತ್ತ ಸುಳಿದಾಡುವುದರಿಂದ ವೈರಸ್ ಹರಡುವ ಅಪಾಯವಿದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ.

ಕೊರೊನಾ ವೈರಸ್ ಸೂಕ್ಷ್ಮಾಣುವಿನ ಹನಿ ಸ್ಪರ್ಶವೂ ಅಪಾಯ

ಕೊರೊನಾ ವೈರಸ್ ಸೂಕ್ಷ್ಮಾಣುವಿನ ಹನಿ ಸ್ಪರ್ಶವೂ ಅಪಾಯ

ಮಾರಣಾಂತಿಕ ರೋಗಕ್ಕೆ ಕೊರೊನಾ ವೈರಸ್ ಪೀಡಿತರ ಒಂದೇ ಒಂದು ಹನಿ ಸೂಕ್ಷ್ಮಾಣುವಿನ ಸ್ಪರ್ಶವೇ ಸಾಕು. ಸೋಂಕಿತರ ಉಸಿರಾಟ ಮತ್ತು ಒಂದು ಹನಿ ಸೂಕ್ಷ್ಮಾಣುವು ಗಾಳಿಗೆ ಸೇರಿ ಅದೇ ಗಾಳಿಯನ್ನು ಬೇರೊಬ್ಬರು ಉಸಿರಾಡುವುದರಿಂದಲೂ ಸೋಂಕು ಹರಡುತ್ತದೆ ಎಂದು ಕೆಲವು ವೈದ್ಯಕೀಯ ಅಧ್ಯಯನಗಳು ಹೇಳುತ್ತಿವೆ.

ಕೊರೊನಾ ಹರಡುವುದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ

ಕೊರೊನಾ ಹರಡುವುದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ

ಕೊರೊನಾ ವೈರಸ್ ಸೋಂಕು ವೃದ್ಧರಲ್ಲಿ ಬೇಗ ಹರಡುತ್ತದೆಯೇ ಎಂಬ ಅನುಮಾನಗಳಿವೆ. ಆದರೆ, ಅದು ಶುದ್ಧಸುಳ್ಳು. ಕೊರೊನಾ ವೈರಸ್ ಗೆ ವೃದ್ಧರಲ್ಲಿ ಬೇಗ ಕಾಣಿಸಿಕೊಳ್ಳುವುದಿಲ್ಲ. ಏಕೆಂದರೆ ಸೋಂಕಿಗೆ ಇಂಥದ್ದೇ ವಯಸ್ಸಿನ ಮಿತಿಯಿಲ್ಲ.

ಪುರುಷರಿಗೆ ಹೋಲಿಸಿದರೆ ಮಹಿಳೆಯರೇ ಸೇಫ್

ಪುರುಷರಿಗೆ ಹೋಲಿಸಿದರೆ ಮಹಿಳೆಯರೇ ಸೇಫ್

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಕೊರೊನಾ ವೈರಸ್ ಪೀಡಿತರಲ್ಲಿ ಮಹಿಳೆಯರ ಪ್ರಮಾಣ ಪುರುಷರಿಗೆ ಹೋಲಿಸದರೆ ಕಡಿಮೆಯಾಗಿದೆ. ಚೀನಾದಲ್ಲಿ ಸೋಂಕಿತ ಮಹಿಳೆಯರಲ್ಲಿ ಶೇ.2.8ರಷ್ಟು ಮಹಿಳೆಯರು ಪ್ರಾಣ ಬಿಟ್ಟಿದ್ದಾರೆ. ಆದರೆ, ಈ ಅಂಕಿ-ಅಂಶಗಳನ್ನು ಗಮನಿಸಿದಾಗ ಸೋಂಕಿತ ಪುರುಷರ ಸಾವಿನ ಪ್ರಮಾಣ ಶೇ.4.7ರಷ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಮಾರಕ ಕೊರೊನಾ ಸೋಂಕಿಗಿಲ್ಲ ಮದ್ದು

ಮಾರಕ ಕೊರೊನಾ ಸೋಂಕಿಗಿಲ್ಲ ಮದ್ದು

ವಿಶ್ವವೇ ನಲುಗುವಂತೆ ಮಾಡಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಔಷಧಿ ಕಂಡು ಹಿಡಿಯಲು ಹಗಲು-ರಾತ್ರಿ ವೈದ್ಯರು ಮತ್ತು ವಿಜ್ಞಾನಿಗಳ ತಂಡ ಪರಿಶ್ರಮ ವಹಿಸುತ್ತಿದೆ. ಆದರೆ, ಇದುವರೆಗೂ ಯಾವುದೇ ಔಷಧಿ ಕಂಡು ಹಿಡಿದಿಲ್ಲ. ಕೆಲವು ಸೋಂಕಿತರಿಗೆ ಪ್ರಯೋಗಾತ್ಮಕ ಚಿಕಿತ್ಸೆ ಮೂಲಕ ಸೋಂಕು ತಡೆಗಟ್ಟಲು ವೈದ್ಯರು ಶತಪ್ರಯತ್ನದಲ್ಲಿ ತೊಡಗಿದ್ದಾರೆ. ಈ ಹಿಂದೆಯೇ ಕೊರೊನಾ ವೈರಸ್ ಗೆ ಔಷಧಿ ಕಂಡು ಹಿಡಿಯಲು ಕನಿಷ್ಠ 18 ತಿಂಗಳ ಬೇಕಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಸ್ಪಷ್ಟನೆಯನ್ನು ನೀಡಿತ್ತು.

ಕೊರೊನಾಗೆ ಒಂದು ಬಾರಿ ವೈದ್ಯಕೀಯ ಪರೀಕ್ಷೆ ಸಾಕೇ?

ಕೊರೊನಾಗೆ ಒಂದು ಬಾರಿ ವೈದ್ಯಕೀಯ ಪರೀಕ್ಷೆ ಸಾಕೇ?

ಕೊರೊನಾ ವೈರಸ್ ಲಕ್ಷಣಗಳು ಕಾಣಿಸಿಕೊಂಡ ನಂತರದಲ್ಲಿ ಒಂದು ಬಾರಿ ವೈದ್ಯಕೀಯ ತಪಾಸಣೆ ನಡೆಸಿದರೆ ಸಾಲದು. ಮೊದಲ ಬಾರಿ ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದರೆ ಸಾಕಾಗುವುದಿಲ್ಲ. ಬದಲಿಗೆ ಎರಡನೇ ಬಾರಿ ಕೊರೊನಾ ವೈರಸ್ ಸೋಂಕಿನ ತಪಾಸಣೆ ನಡೆಸಬೇಕಾಗುತ್ತದೆ. ಆ ನಂತರವಷ್ಟೇ ಸೋಂಕಿತರು ಕೊಂಚ ನಿಟ್ಟುಸಿರು ಬಿಡಬಹುದು.

ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮುನ್ನೆಚ್ಚರಿಕೆ ಕ್ರಮಗಳೇನು?

ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮುನ್ನೆಚ್ಚರಿಕೆ ಕ್ರಮಗಳೇನು?

ಕೊರೊನಾ ವೈರಸ್ ನಿಂದ ಪಾರಾಗಲು ಸಾರ್ವಜನಿಕರಿಗೆ ವಿಶ್ವ ಆರೋಗ್ಯ ಸಂಸ್ಥೆಯು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸೂಚನೆ ನೀಡಿದೆ. ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳುವುದು, ಕೆಮ್ಮುವ ಮುನ್ನ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು. ಸೋಂಕಿತರಿಂದ ಆದಷ್ಟು ಅಂತರ ಕಾಯ್ದುಕೊಳ್ಳುವಂತೆ WHO ಸೂಚನೆ ನೀಡಿದೆ.

English summary
Coronavirus Spread From Sex Or Cough. Peoples Must Now This Things.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X