• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಇದಿಯೋ? ಇಲ್ಲವೇ? ನಾಯಿಗಳೇ ಹೇಳುತ್ತವೆ

|
Google Oneindia Kannada News

ಹೊಸದಿಲ್ಲಿ ಜನವರಿ 14: ನೀವು ಇಲ್ಲಿಯವರೆಗೆ ವಿಮಾನ ನಿಲ್ದಾಣಗಳಲ್ಲಿ, ಕ್ರೀಡೆಗಳಲ್ಲಿ, ಶಾಲೆಗಳಲ್ಲಿ ಅಥವಾ ಸಂಗೀತ ಕಚೇರಿಗಳಲ್ಲಿ ನಾಯಿಗಳನ್ನು ಸ್ನಿಫಿಂಗ್ ಮಾಡುವುದನ್ನು ನೋಡಿರಬೇಕು. ನಾಯಿಗಳು ವಾಸನೆಯಿಂದಲೇ ಹಲವಾರು ವಿಚಾರಗಳನ್ನು ಬಹಿರಂಗಗೊಳಿಸುವ ಸಾಮಾರ್ಥ್ಯವನ್ನು ಹೊಂದಿವೆ. ಈಗ ನಾವು ನೀವೆಲ್ಲರೂ ಆಶ್ಚರ್ಯಪಡುವ ವಿಚಾರವೇನೆಂದರೆ ನಾಯಿಗಳಿಂದ ಕೊರೊನಾ ಸೋಂಕಿತ ವ್ಯಕ್ತಿಯನ್ನು ಗುರುತಿಸಬಹುದು. ಹೌದು ಇಂತಹ ತರಬೇತಿಯನ್ನು ವಿಜ್ಞಾನಿಗಳು ನಾಯಿಗಳಿಗೆ ನೀಡಿದ್ದಾರೆ. ಈಗ ನಾಯಿ ನೀವು ಕೊರೋನಾ ಸೋಂಕಿಗೆ ಒಳಗಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ವಾಸನೆಯ ಮೂಲಕ ಹೇಳುತ್ತದೆ. ಇಲ್ಲಿಯವರೆಗೆ ಕೊರೊನಾವೈರಸ್ ಅನ್ನು ಗುರುತಿಸಲು ಪ್ರತಿಜನಕ ಮತ್ತು RTPCR ಪರೀಕ್ಷೆಗಳ ಅಗತ್ಯವಿತ್ತು. ಆದರೆ ಈಗ ನಾಯಿ ಕೂಡ ವಾಸನೆ ಮೂಲಕ ಯಾರಿಗಾದರೂ ಕೋವಿಡ್ -19 ಸೋಂಕು ಇದೆಯೇ ಅಥವಾ ಇಲ್ಲವೇ ಎಂದು ಹೇಳುತ್ತದೆ.

ಷೇಧಿತ ಔಷಧಗಳ ಬಗ್ಗೆ ತಿಳಿಯಲು ನಾಯಿಗಳ ಬಳಕೆ

ಷೇಧಿತ ಔಷಧಗಳ ಬಗ್ಗೆ ತಿಳಿಯಲು ನಾಯಿಗಳ ಬಳಕೆ

ವೈದ್ಯಕೀಯ ಕ್ಷೇತ್ರದಲ್ಲಿ ಬಾಂಬ್ ಮತ್ತು ನಿಷೇಧಿತ ಔಷಧಗಳ ಬಗ್ಗೆ ತಿಳಿಯಲು ನಾಯಿಗಳನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಕೆಲವು ವಿಧದ ಕ್ಯಾನ್ಸರ್, ಮಧುಮೇಹ ಮತ್ತು ಪಾರ್ಕಿನ್ಸನ್ ಕಾಯಿಲೆಯ ವಾಸನೆಯನ್ನು ನಾಯಿಗಳಿಗೆ ತೋರಿಸುವ ಮೂಲಕ ಅದಕ್ಕೆ ತರಬೇತಿ ನೀಡಲಾಗುತ್ತದೆ. ಈ ಪ್ರಕ್ರಿಯೆಯನ್ನು 'ಬಯೋಡೆಟೆಕ್ಷನ್' ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಯಾವುದೇ ಪರೀಕ್ಷೆಗಳು ಅಥವಾ ರಾಸಾಯನಿಕಗಳನ್ನು ಒಳಗೊಂಡಿರುವುದಿಲ್ಲ. 2020 ರಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಹೆಚ್ಚು ಬಾದಿಸಿದಾಗ ವಿಜ್ಞಾನಿಗಳು ಮತ್ತು ತಜ್ಞರು COVID-19 ವೈರಸ್ ಅನ್ನು ವಾಸನೆ ಮೂಲಕ ಪತ್ತೆ ಹಚ್ಚುವ ತರಬೇತಿಯನ್ನು ನೀಡಲು ಪ್ರಾರಂಭಿಸಿದರು ಮತ್ತು ಅವರಲ್ಲಿ ಶೀಘ್ರವಾಗಿ ಯಶಸ್ಸನ್ನು ಕಂಡುಕೊಂಡಿದ್ದಾರೆ.

ವಿಜ್ಞಾನಿಗಳಿಗೆ ದೊಡ್ಡ ಯಶಸ್ಸು

ವಿಜ್ಞಾನಿಗಳಿಗೆ ದೊಡ್ಡ ಯಶಸ್ಸು

US ಸರ್ಕಾರದ ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ (NCBI) ಪ್ರಕಾರ, ನಾಯಿಗಳು ತಮ್ಮ ಅತ್ಯಂತ ಸೂಕ್ಷ್ಮವಾದ ವಾಸನೆ ಕಂಡುಹಿಡಿಯುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಇದು 1.5 ಟ್ರಿಲಿಯನ್‌ ಸಾಂದ್ರತೆಯಲ್ಲಿ ವಿಷಕಾರಿ ಪದಾರ್ಥಗಳನ್ನು ಸಹ ಪತ್ತೆ ಮಾಡುತ್ತದೆ. ಯಾರಾದರೂ ಅನಾರೋಗ್ಯಕ್ಕೆ ಒಳಗಾದಾಗ ಮಾನವ ದೇಹವು ನಿರ್ದಿಷ್ಟ ಬಾಷ್ಪಶೀಲ ಸಾವಯವ ಸಂಯುಕ್ತಗಳನ್ನು ಅಥವಾ VOC ಗಳನ್ನು ಬಿಡುಗಡೆ ಮಾಡುತ್ತದೆ. ಅದು ಅನಿಲವಾಗಿ ಹೊರಸೂಸುತ್ತದೆ ಮತ್ತು ಪ್ರತಿ ಸೋಂಕು ವಿಶಿಷ್ಟವಾದ ವಾಸನೆಯನ್ನು ಹೊಂದಿರುತ್ತದೆ. ಆದ್ದರಿಂದ ವಿಶಿಷ್ಟ VOC ಗಳೊಂದಿಗೆ COVID-19 ಸೋಂಕಿಗೆ ಒಳಗಾದ ಜನರು 'ಬಯೋಡೆಟೆಕ್ಷನ್ ನಾಯಿಗಳು' ಗುರುತಿಸಬಹುದಾದ ವಿಶಿಷ್ಟವಾದ ವಾಸನೆಯನ್ನು ಹೊರಹಾಕುತ್ತಾರೆ.

ನಾಯಿಗಳಿಂದ ನಿಖರ ಫಲಿತಾಂಶ

ನಾಯಿಗಳಿಂದ ನಿಖರ ಫಲಿತಾಂಶ

ಪ್ರಪಂಚದಾದ್ಯಂತದ ಅನೇಕ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕೊರೋನಾವನ್ನು ತನಿಖೆ ಮಾಡಲು 'ಬಯೋಡೆಟೆಕ್ಷನ್ ಡಾಗ್ಸ್' ಅನ್ನು ಬಳಸಲಾಗುತ್ತಿದೆ. ಲೆಬನಾನ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಫಿನ್‌ಲ್ಯಾಂಡ್‌ನ ವಿಶ್ವದ ವಿವಿಧ ವಿಮಾನ ನಿಲ್ದಾಣಗಳಲ್ಲಿ 'ಬಯೋಡೆಕ್ಷನ್ ಡಾಗ್'ಗಳಿಂದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಫಿನ್‌ಲ್ಯಾಂಡ್ ಮತ್ತು ಲೆಬನಾನ್‌ನಲ್ಲಿ ನಡೆಸಿದ ಪರೀಕ್ಷೆಗಳ ಆರಂಭಿಕ ಸಂಶೋಧನೆಗಳಲ್ಲಿ ನಾಯಿಗಳು ಕೊರೊನಾ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿವೆ ಎಂದು NCBI ವರದಿ ಮಾಡಿದೆ. US ನಲ್ಲಿನ ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ಕಾರ್ಯಕ್ರಮದಲ್ಲಿ ನಾಯಿಗಳು 98% ಅನ್ನು ಕೊರೊನಾ ಪ್ರಕರಗಳನ್ನು ಪತ್ತೆಹಚ್ಚಿದೆ.

ಶಾಲೆಯಲ್ಲೂ ಕೊರೊನಾ ಪತ್ತೆ ಮಾಡುವ ಶ್ವಾನ

ಶಾಲೆಯಲ್ಲೂ ಕೊರೊನಾ ಪತ್ತೆ ಮಾಡುವ ಶ್ವಾನ

ವರದಿಯ ಪ್ರಕಾರ, 2022 ರಲ್ಲಿ ಕೋವಿಡ್ ಸ್ನಿಫಿಂಗ್ ನಾಯಿಗಳನ್ನು ನಿಯೋಜಿಸುವ ಇಂತಹ ಸ್ಥಳಗಳು ಮತ್ತು ಘಟನೆಗಳ ಸಂಖ್ಯೆ ಹೆಚ್ಚುತ್ತಿದೆ. ದುಬೈನಲ್ಲಿ ಪೊಲೀಸರು 38 ಸ್ನಿಫರ್ ಡಾಗ್‌ಗಳ ವಿಶೇಷ ಘಟಕವನ್ನು ರಚಿಸಿದ್ದಾರೆ. ಅದು 92% ನಿಖರತೆಯೊಂದಿಗೆ ಮಾನವ ಬೆವರು ಮಾದರಿಗಳಿಂದ COVID-19 ಅನ್ನು ಪತ್ತೆ ಮಾಡುತ್ತದೆ. ಅಮೆರಿಕದ ಮಸಾಚುಸೆಟ್ಸ್‌ನಲ್ಲಿ ಕೋವಿಡ್‌ನ್ನು ಪತ್ತೆ ಮಾಡುವ ನಾಯಿಗಳನ್ನು ಶಾಲೆಗಳಲ್ಲೂ ಬಳಸಲಾಗುತ್ತಿದೆ. ಪ್ರತಿದಿನ 15 ಶಾಲೆಗಳಿಗೆ ಭೇಟಿ ನೀಡುವ ಮತ್ತು ವೈರಸ್ ವಾಸನೆಯನ್ನು ಬೀರುವ ಮಕ್ಕಳನ್ನು ಶ್ವಾನಗಳು ಗುರುತಿಸುತ್ತವೆ. ಈ ಪರೀಕ್ಷೆಯನ್ನು ಮಾಡುವ ಹಂತಾ ಮತ್ತು ಡ್ಯೂಕ್ ಎಂಬ ಎರಡು ನಾಯಿಗಳಿಗೆ ಶೆರಿಫ್ ಕಚೇರಿಯು ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಬೋಸ್ಟನ್ ಗ್ಲೋಬ್ ವರದಿ ಮಾಡಿದೆ.

ತರಬೇತಿಯಲ್ಲಿ ವಿಜ್ಞಾನಿಗಳು ಯಶಸ್ಸು

ತರಬೇತಿಯಲ್ಲಿ ವಿಜ್ಞಾನಿಗಳು ಯಶಸ್ಸು

ಆಸ್ಟ್ರಿಯನ್ ಮಿಲಿಟರಿ ತನ್ನ ಕೆಲವು ನಾಯಿಗಳಿಗೆ ವಾಸನೆಯ ಮೂಲಕ ಕೋವಿಡ್ ಪತ್ತೆಹಚ್ಚುವ ತರಬೇತಿ ನೀಡಿದೆ. ಆದರೆ ದೊಡ್ಡ ಪ್ರಮಾಣದಲ್ಲಿ ಸೋಂಕಿಗೆ ಒಳಗಾದ ಜನರ ಪರೀಕ್ಷೆಗೆ ನಾಯಿಗಳನ್ನು ನಿಯೋಜಿಸುವುದಿಲ್ಲ. ಜೊತೆಗೆ ಅಮೆರಿಕದ ಖಾಸಗಿ ಸಂಸ್ಥೆಗಳು ಕೋವಿಡ್ ಅನ್ನು ಪತ್ತೆಹಚ್ಚಲು ನಾಯಿಗಳಿಗೆ ತರಬೇತಿ ನೀಡಿವೆ. ಇದು ಅವರಿಗೂ ಪ್ರಯೋಜನವನ್ನು ನೀಡಿದೆ. ಕೋವಿಡ್ ಸ್ನಿಫಿಂಗ್ ನಾಯಿಗಳಾದ ಬಯೋಡೆಟೆಕ್ಷನ್ K9 ಮತ್ತು 360 K9 ಅನ್ನು US ನಲ್ಲಿ ಸಂಗೀತ ಕಚೇರಿಗಳು ಮತ್ತು ಕಾರ್ ರೇಸ್‌ಗಳಂತಹ ದೊಡ್ಡ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತಿದೆ.

ಸ್ನಿಫಿಂಗ್ ನಾಯಿಗಳಿಗೆ ಬೇಡಿಕೆ ಹೆಚ್ಚು

ಸ್ನಿಫಿಂಗ್ ನಾಯಿಗಳಿಗೆ ಬೇಡಿಕೆ ಹೆಚ್ಚು

ಕೊರೋನಾ ಮತ್ತು ಓಮಿಕ್ರಾನ್‌ನ ಮೂರನೇ ಅಲೆ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಈ ಪರಿಸ್ಥಿತಿಯಲ್ಲಿ ಪ್ರತಿಯೊಂದು ದೇಶವೂ ಸರಳ ಮತ್ತು ಅಗ್ಗದ ಕೊರೋನಾ ಪರೀಕ್ಷೆ ಮತ್ತು ಕ್ಷಿಪ್ರ ಪರೀಕ್ಷೆಯತ್ತ ಗಮನಹರಿಸಲು ಬಯಸಿದೆ. ಹೀಗಾಗಿ ಕೋವಿಡ್-ಸ್ನಿಫಿಂಗ್ ನಾಯಿಗಳ ಬೇಡಿಕೆ ಹೆಚ್ಚಾಗಬಹುದು. ಆದರೆ ಕೊರೊನಾ ಹೆಚ್ಚಾಗುತ್ತಿರುವ ಕಾಲದಲ್ಲಿ ನಾಯಿಗಳನ್ನು ಪರೀಕ್ಷೆಗೆ ಗುರಿ ಮಾಡುವುದನ್ನು ಸರ್ಕಾರ ಅಥವಾ ವೈದ್ಯಕೀಯ ಒಪ್ಪಿರುವ ಮಾಹಿತಿ ಇನ್ನೂ ಹೊರಬಂದಿಲ್ಲ.

English summary
Dogs were able to detect odour from asymptomatic and symptomatic COVID-infected individuals says new study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X