ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ 2ನೇ ಅಲೆ: ಭಾರತಕ್ಕೆ ಪ್ರಯಾಣಿಸಬೇಡಿ ಎಂದು ಸಲಹೆ ನೀಡಿದ ಅಮೆರಿಕ

|
Google Oneindia Kannada News

ನವದೆಹಲಿ, ಏಪ್ರಿಲ್ 20: ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಉಲ್ಬಣದ ಮಧ್ಯೆ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ತನ್ನ ನಾಗರಿಕರಿಗೆ ಭಾರತಕ್ಕೆ ಪ್ರಯಾಣಿಸುವುದನ್ನು ತಪ್ಪಿಸಲು ಸಲಹೆ ನೀಡಿದೆ.

ಸಿಡಿಸಿ ತನ್ನ ಸಲಹೆಯಲ್ಲಿ, ""ಭಾರತದಲ್ಲಿ ಕೋವಿಡ್-19 ಹರಡುವಿಕೆ ಹೆಚ್ಚಿನ ಮಟ್ಟದಲ್ಲಿದ್ದು, ಪ್ರಸ್ತುತ ಇಲ್ಲಿನ ಪರಿಸ್ಥಿತಿಯ ಕಾರಣದಿಂದಾಗಿ ಸಂಪೂರ್ಣವಾಗಿ ಲಸಿಕೆ ಹಾಕಿದ ಪ್ರಯಾಣಿಕರು ಸಹ ಕೋವಿಡ್-19 ರೂಪಾಂತರ ಸೋಂಕು ತಗಲುವ ಅಪಾಯವನ್ನು ಹೊಂದಬಹುದು ಮತ್ತು ಭಾರತಕ್ಕೆ ತೆರಳುವ ಎಲ್ಲಾ ಪ್ರಯಾಣವನ್ನು ತಪ್ಪಿಸಬೇಕೆಂದು'' ಹೇಳಿದೆ.

ಭಾರತದಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದ ವ್ಯಾಕ್ಸಿನೇಷನ್ ಕೇಂದ್ರಗಳ ಸಂಖ್ಯೆಭಾರತದಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದ ವ್ಯಾಕ್ಸಿನೇಷನ್ ಕೇಂದ್ರಗಳ ಸಂಖ್ಯೆ

ನೀವು ಭಾರತಕ್ಕೆ ಪ್ರಯಾಣಿಸಬೇಕೆಂದಾದರೆ, ""ಪ್ರಯಾಣಕ್ಕೂ ಮುನ್ನ ಮೊದಲು ಸಂಪೂರ್ಣವಾದ ಲಸಿಕೆ ಪಡೆಯಿರಿ. ಎಲ್ಲಾ ಪ್ರಯಾಣಿಕರು ಕಡ್ಡಾಯ ಮಾಸ್ಕ್ ಧರಿಸಬೇಕು, ಇತರರಿಂದ 6 ಅಡಿ ದೂರವಿರಬೇಕು, ಜನಸಂದಣಿಯನ್ನು ತಪ್ಪಿಸಬೇಕು ಮತ್ತು ಸ್ವಚ್ಛವಾಗಿ ಕೈ ತೊಳೆಯಬೇಕು" ಎಂದು ಸಲಹೆ ನೀಡಿದೆ.

Coronavirus Second Wave: USA Advises Its Citizens To Avoid Travelling To India

ಸಂಪೂರ್ಣ ಕೊರೊನಾ ಲಸಿಕೆ ಹಾಕಿದ ಪ್ರಯಾಣಿಕರಿಗೆ ಸಿಡಿಸಿಯು ಪ್ರಯಾಣ ಶಿಫಾರಸುಗಳನ್ನು ಸಹ ನೀಡಿದ್ದು, "ಅಮೇರಿಕದಲ್ಲಿ ನೀವು ಸಂಪೂರ್ಣವಾಗಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರೆ, ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿಕದಿಂದ ಹೊರಡುವ ಮೊದಲು ಪರೀಕ್ಷಿಸಬೇಕಾಗಿಲ್ಲ, ನಿಮ್ಮ ತಲುಪುವ ಸ್ಥಳಕ್ಕೆ ಹೋದಾಗ ಮತ್ತು ನೀವು ಬಂದ ನಂತರ ನೀವು ಸ್ವಯಂ-ಸಂಪರ್ಕತಡೆಯನ್ನು ಮಾಡಬೇಕಾಗಿಲ್ಲ" ಎಂದು ಹೇಳಿದೆ.

ಬ್ರಿಟನ್ ದೇಶವು ಭಾರತವನ್ನು ಸೋಮವಾರ ಕೆಂಪು ಪಟ್ಟಿಗೆ ಸೇರಿಸಿ ಘೋಷಿಸಲಾಗಿದೆ. ಯುಕೆ ಅಥವಾ ಐರಿಷ್ ಪ್ರಜೆಗಳನ್ನು ಹೊರತುಪಡಿಸಿ ಭಾರತದಿಂದ ಬರುವ ಎಲ್ಲರನ್ನು ನಿಷೇಧಿಸಿದೆ.

ರೂಪಾಂತರಿತ ಕೊರೊನಾ ವೈರಸ್ ಸೋಂಕಿನ ಭೀತಿಯಿಂದ ಹಾಂಗ್ ಕಾಂಗ್ ಭಾರತದಿಂದ ವಿಮಾನಗಳನ್ನು ಭಾನುವಾರವೇ ನಿರ್ಬಂಧಿಸಿತ್ತು. ಈ ಹಿಂದೆ, ನ್ಯೂಜಿಲೆಂಡ್ ಸಹ ಭಾರತದಿಂದ ಬರುವ ಪ್ರಯಾಣಿಕರನ್ನು ನಿರ್ಬಂಧಿಸಿದೆ.

English summary
Amid surge in Covid-19 cases in India, the American Centers for Disease Control and Prevention (CDC) has advised its citizens to avoid traveling to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X