ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ: 17 ಸಾವಿರ ಖೈದಿಗಳಿರುವ ಜೈಲಿನಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ

|
Google Oneindia Kannada News

ದೆಹಲಿ, ಮಾರ್ಚ್ 14: ಭಾರತದಲ್ಲಿ ಕೊರೊನಾ ಭೀತಿ ಗಂಟೆ ಗಂಟೆಗೂ ಹೆಚ್ಚಾಗುತ್ತಿದೆ. ಮನೆಯಿಂದ ಜನರು ಹೊರಬರಲು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ನಿಶ್ಯಬ್ದದ ವಾತಾವರಣ ನಿರ್ಮಾಣವಾಗಿದೆ.

ಮಾಲ್, ಸಿನಿಮಾ ಚಿತ್ರಮಂದಿರ, ಸಭೆ, ಮದುವೆ ಸಮಾರಂಭ, ಪಬ್, ನೈಟ್ ಕ್ಲಬ್ ಸೇರಿದಂತೆ ಬಹುತೇಕ ಎಲ್ಲ ಚಟುವಟಿಕೆಗಳನ್ನು ರದ್ದಾಗಿದೆ. ಇದೀಗ, ದೆಹಲಿ ಜೈಲಿನಲ್ಲಿ ಮುನ್ನೆಚ್ಚರಿಕೆ ಕ್ರಮಗಾಗಿ ಖೈದಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ.

ಚೀನಾ ಚೇತರಿಸಿಕೊಂಡರು ನಿಲ್ಲದ ಸಾವಿನ ಸಂಖ್ಯೆ: 5000 ಗಡಿ ದಾಟಿದ ಕೊರೊನಾ ಬಲಿಚೀನಾ ಚೇತರಿಸಿಕೊಂಡರು ನಿಲ್ಲದ ಸಾವಿನ ಸಂಖ್ಯೆ: 5000 ಗಡಿ ದಾಟಿದ ಕೊರೊನಾ ಬಲಿ

ಸುಮಾರು 17,500 ಖೈದಿಗಳು ತಿಹಾರ್ ಜೈಲಿನಲ್ಲಿದ್ದು, ಕೊರೊನಾ ಸೋಂಕು ತಗಲುವ ಸಾಧ್ಯತೆ ಇರಬಹುದು ಎಂಬ ಮುಂದಾಲೋಚನೆಯಿಂದ ಮುಂಜಾಗ್ರತೆ ಕ್ರಮವಾಗಿ ಪ್ರತ್ಯೇಕ ಕೊಠಡಿ (isolation ward) ಸ್ಥಾಪಿಸಲಾಗಿದೆ.

Delhi Tihar Jail Gets Isolation Ward

ಸದ್ಯದ ಮಟ್ಟಿಗೆ ತಿಹಾರ್ ಜೈಲಿನ ಯಾವುದೇ ಖೈದಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ. ಆದರೂ ಎಲ್ಲರನ್ನು ಪರೀಕ್ಷಿಸಲಾಗುತ್ತಿದೆ. ಹೊಸ ಖೈದಿಗಳನ್ನು ಕಡ್ಡಾಯವಾಗಿ ಪರೀಕ್ಷಿಸಲಾಗುತ್ತಿದೆ ಎಂದು ಎಎನ್‌ಐ ವರದಿ ಮಾಡಿದೆ.

ಕಲಬುರಗಿಯಲ್ಲಿ 76 ವರ್ಷದ ವೃದ್ದ ಕೊರೊನಾಗೆ ಮೊದಲ ಬಲಿಯಾಗಿದ್ದರು. ಶುಕ್ರವಾರ ದೆಹಲಿಯಲ್ಲಿ 69 ವರ್ಷದ ಮಹಿಳೆ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಇದುವರೆಗೂ ಎರಡು ಸಾವು ಸಂಭವಿಸಿದೆ. ಜಗತ್ತಿನಾದ್ಯಂತ ಕೊರೊನಾ ಸಾವಿನ ಸಂಖ್ಯೆ 5 ಸಾವಿರ ಗಡಿದಾಟಿದೆ.

English summary
Tihar Jail official: An isolation ward has been set up at the jail. All inmates have been checked & not displayed symptoms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X