ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕುರಿತು ಸುಳ್ ಸುದ್ದಿ ನೋಡಿದ್ದೀರಾ ಕೂಡಲೇ ಕಂಪ್ಲೆಂಟ್ ಕೊಡಿ!

|
Google Oneindia Kannada News

ನವದೆಹಲಿ, ಏಪ್ರಿಲ್.07: ಕೊರೊನಾ ವೈರಸ್ ಕಾಟ ಒಂದು ಕಡೆಯಾದರೆ ಮಾರಕ ರೋಗದ ಕುರಿತು ಸುಳ್ಳು ಸುದ್ದಿಗಳ ಹಾವಳಿ ಮತ್ತೊಂದು ಕಡೆ ಹೆಚ್ಚಾಗುತ್ತಿದೆ. ಸುಳ್ಳು ಸುದ್ದಿ ವದಂತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪುಂಡು-ಪೋಕರಿಗಳಿಗೆ ಕಿಡಿಗೇಡಿಗಳು ಹರಿ ಬಿಡುತ್ತಿದ್ದಾರೆ.

ಕೊರೊನಾ ವೈರಸ್ ಕುರಿತು ವದಂತಿಗಳನ್ನು ಹರಡದಂತೆ ಎಷ್ಟೇ ಎಚ್ಚರಿಕೆ ನೀಡಿದರೂ ಕಿಡಿಗೇಡಿಗಳು ತಮ್ಮ ಪುಂಡಾಟವನ್ನು ಮುಂದುವರಿಸಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೆಹಲಿ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

ಸುಳ್ಸುದ್ದಿ ವಿರುದ್ಧ ಸಮರ, ವಾಟ್ಸಾಪ್ ಸಂದೇಶ ಹಂಚಿಕೆಗೆ ಕಡಿವಾಣ ಸುಳ್ಸುದ್ದಿ ವಿರುದ್ಧ ಸಮರ, ವಾಟ್ಸಾಪ್ ಸಂದೇಶ ಹಂಚಿಕೆಗೆ ಕಡಿವಾಣ

ದೆಹಲಿ ಪೊಲೀಸರ ಶಾಂತಿ ಸೇವಾ ನ್ಯಾಯ ಎಂಬ ಅಧಿಕೃತ ವೆಬ್ ಸೈಟ್ ನಲ್ಲಿ ಕೊರೊನಾ ಸಹಾಯವಾಣಿ ಜೊತೆಗೆ ಸುಳ್ಳು ಸುದ್ದಿ ಪರಿಶೀಲನೆ (Fake News Verification) ವಿಭಾಗವನ್ನು ಪರಿಚಯಿಸಲಾಗಿದೆ. ಇದರಲ್ಲಿ ಸುಳ್ ಸುದ್ದಿಗಳ ಬಗ್ಗೆ ಜನರು ಖಾತ್ರಿ ಪಡಿಸಿಕೊಳ್ಳಬಹುದಾಗಿದೆ.

ಸಂಶಯವಿದ್ದಲ್ಲಿ ಲಿಂಕ್ ಅಪ್ ಲೋಡ್ ಮಾಡಿರಿ

ಸಂಶಯವಿದ್ದಲ್ಲಿ ಲಿಂಕ್ ಅಪ್ ಲೋಡ್ ಮಾಡಿರಿ

ಕೊರೊನಾ ವೈರಸ್ ಕುರಿತು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಪೈಕಿ ಸುದ್ದಿಯ ಬಗ್ಗೆ ಅನುಮಾನಗಳಿದ್ದಲ್ಲಿ. ಸುಳ್ಳು ಸುದ್ದಿ ಅಥವಾ ವದಂತಿ ಎಂದು ಎನಿಸಿದ್ದಲ್ಲಿ ಪೊಲೀಸ್ ಇಲಾಖೆ ಆರಂಭಿಸಿದ ಈ ವೆಬ್ ಸೈಟ್ ನಲ್ಲಿ ಅದರ ಲಿಂಕ್ ನ್ನು ಪೇಸ್ಟ್ ಮಾಡಬೇಕು.

ಪೊಲೀಸರಿಗೆ ದೂರು ನೀಡುವುದು ಹೇಗೆ?

ಪೊಲೀಸರಿಗೆ ದೂರು ನೀಡುವುದು ಹೇಗೆ?

ದೆಹಲಿ ಪೊಲೀಸರ ಶಾಂತಿ ಸೇವಾ ನ್ಯಾಯ ಎಂಬ ಅಧಿಕೃತ ವೆಬ್ ಸೈಟ್ ನಲ್ಲಿ ಸೂಚಿಸಿರುವ ನಿರ್ದಿಷ್ಟ ಸ್ಥಳದಲ್ಲಿ ದೂರುದಾರರು ಸುಳ್ಳು ಸುದ್ದಿಯ ಲಿಂಕ್ ನ್ನು ಅಪ್ ಲೋಡ್ ಮಾಡಬೇಕು. ಇಲ್ಲಿ ದೂರುದಾರರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಈ-ಮೇಲ್ ವಿಳಾಸ ಹಾಗೂ ಯಾವ ಠಾಣಾ ವ್ಯಾಪ್ತಿಗೆ ಸೇರಿದವರು ಎಂದು ನಮೂದಿಸಬೇಕು.

ಸುದ್ದಿ ಮರು ಪರಿಶೀಲನೆ ನಡೆಸಲಿರುವ ಸೈಬರ್ ಸೆಲ್

ಸುದ್ದಿ ಮರು ಪರಿಶೀಲನೆ ನಡೆಸಲಿರುವ ಸೈಬರ್ ಸೆಲ್

ಕೊರೊನಾ ಕುರಿತು ವದಂತಿ ಮತ್ತು ಸುಳ್ಳು ಸುದ್ದಿಯ ದೂರುಗಳನ್ನು ಆಧರಿಸಿ ದೆಹಲಿಯ ಸೈಬರ್ ಸೆಲ್ ಪೊಲೀಸರು ಸುದ್ದಿಯನ್ನು ಮರುಪರಿಶೀಲನೆ ನಡೆಸಲಿದ್ದಾರೆ. ಸುದ್ದಿಯು ನಿಜವಾಗಿದ್ದಾ ಅಥವಾ ಸುಳ್ಳು ಸುದ್ದಿಯಾ ಎಂಬುದನ್ನು ಪರಾಮರ್ಶೆ ಮಾಡುತ್ತಾರೆ.

500 ವೆಬ್ ಸೈಟ್ ಗಳಿಂದ ಸುಳ್ಳು ಸುದ್ದಿ ಹರಡುವಿಕೆ

500 ವೆಬ್ ಸೈಟ್ ಗಳಿಂದ ಸುಳ್ಳು ಸುದ್ದಿ ಹರಡುವಿಕೆ

ಕಳೆದ ಕೆಲವು ತಿಂಗಳುಗಳಿಂದ ಈಚೆಗೆ ಸುಳ್ಳು ಸುದ್ದಿ ಹರಡುವುದಕ್ಕಾಗಿ 500ಕ್ಕೂ ಅಧಿಕ ವೆಬ್ ಸೈಟ್ ಗಳು ಹುಟ್ಟಿಕೊಂಡಿವೆ. ಈ ವೆಬ್ ಸೈಟ್ ಗಳು ದೇಶದಲ್ಲಿ ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ಹರಿ ಬಿಡುತ್ತಿವೆ ಎಂದು ಭಾರತೀಯ ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ಕುರಿತು ಗೊಂದ ನಿವಾರಣೆಗೆ ಕ್ರಮ

ಕೊರೊನಾ ಕುರಿತು ಗೊಂದ ನಿವಾರಣೆಗೆ ಕ್ರಮ

ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆ ಮತ್ತು ಭಾರತ ಲಾಕ್ ಡೌನ್ ಕುರಿತು ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲಗಳಿವೆ. ಇದರ ಮಧ್ಯೆ ಜನರನ್ನು ಗೊಂದಲಕ್ಕೀಡು ಮಾಡುವಂತಾ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

English summary
Coronavirus Rumours: Delhi Police Launches Fake News Verification Madule For FactCheck.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X