ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ದಿನ 2293 ಪ್ರಕರಣಗಳು: ಟಾಪ್ 10 ರಾಜ್ಯಗಳು ಯಾವುವು?

|
Google Oneindia Kannada News

ನವ ದೆಹಲಿ, ಮೇ 1: ಸರ್ಕಾರ ಏನೇ ಕ್ರಮ ತೆಗೆದುಕೊಳ್ಳುತ್ತಿದ್ದರೂ, ದೇಶದಲ್ಲಿ ಕೊರೊನಾ ಕ್ರಮಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲಿಯೂ ನಿನ್ನೆ (ಶುಕ್ರವಾರ) ಇದುವರೆಗೆ ಅತಿ ಹೆಚ್ಚು ಕೊರೊನಾ ಕೇಸ್‌ಗಳು ಒಂದೇ ದಿನ ಪತ್ತೆಯಾಗಿವೆ.

ಒಂದೇ ದಿನ ಭಾರತದಲ್ಲಿ ಬರೋಬ್ಬರಿ 2293 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ನಿನ್ನೆಗೆ ಕೊರೊನಾ ಸೋಂಕಿತರ ಸಂಖ್ಯೆ 37,336 ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ 9 ಹೊಸ ಕೊರೊನಾ ಪ್ರಕರಣಗಳು ಪತ್ತೆ: ಒಟ್ಟು 598 ರಾಜ್ಯದಲ್ಲಿ 9 ಹೊಸ ಕೊರೊನಾ ಪ್ರಕರಣಗಳು ಪತ್ತೆ: ಒಟ್ಟು 598

ಏಕೆ ಈ ಮಟ್ಟಕ್ಕೆ ಒಂದೇ ದಿನ ಏರಿಕೆ ಕಂಡಿದೆ. ಯಾವ ಯಾವ ರಾಜ್ಯದಲ್ಲಿ ಹೆಚ್ಚಾಗಿದೆ ಎಂದು ನೋಡಿದರೆ, ಆ ಪಾಲು ಮಹಾರಾಷ್ಟ್ರದಲ್ಲಿ ಹೆಚ್ಚಾಗಿದೆ. ಆದರೆ, ಕೇರಳದಲ್ಲಿ ನಿನ್ನೆ ಒಂದೇ ಒಂದು ಕೇಸ್‌ ಸಹ ಕಂಡು ಬಂದಿಲ್ಲ. ಮಾರ್ಚ್ 18 ರಂದು ಕೇರಳದಲ್ಲಿ ಇದೇ ರೀತಿ ಯಾವುದೇ ಕೇಸ್ ಪತ್ತೆಯಾಗಿರಲಿಲ್ಲ. ಆದಾದ ನಂತರ ಒಂದು ತಿಂಗಳಿನಲ್ಲಿ ಕೇರಳದಲ್ಲಿ ಮತ್ತೆ ನಿನ್ನೆ ಒಂದೂ ಪ್ರಕರಣ ದಾಖಲಾಗಿಲ್ಲ.

ಒಂದೇ ದಿನ ಮಹಾರಾಷ್ಟ್ರದಲ್ಲಿ 1008 ಕೇಸ್

ಒಂದೇ ದಿನ ಮಹಾರಾಷ್ಟ್ರದಲ್ಲಿ 1008 ಕೇಸ್

ಮಹಾರಾಷ್ಟ್ರದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಿಗದೇ ಓಡುತ್ತಿದೆ. ನಿನ್ನೆ ಒಂದೇ ದಿನ ಅಲ್ಲಿ ಬರೋಬ್ಬರಿ 1008 ಹೊಸ ಪ್ರಕರಣಗಳು ಕಂಡು ಬಂದಿವೆ. ಆಶ್ಚರ್ಯ ಎಂದರೆ, ಇದೇ ಮೊದಲ ಬಾರಿಗೆ ಒಂದು ರಾಜ್ಯದಲ್ಲಿ ಒಂದೇ ದಿನ ಸಾವಿರ ಪ್ರಕರಣಗಳು ಪತ್ತೆಯಾಗಿದೆ. ಸದ್ಯ ಅಲ್ಲಿನ ಕೊರೊನಾ ಸೋಂಕಿತ ಸಂಖ್ಯೆ 11506ಕ್ಕೆ ಏರಿಕೆಯಾಗಿದ್ದು, 1879 ಜನರು ಗುಣಮುಖರಾಗಿದ್ದಾರೆ.

ಟಾಪ್‌ 10 ರಾಜ್ಯಗಳು

ಟಾಪ್‌ 10 ರಾಜ್ಯಗಳು

ಮಹಾರಾಷ್ಟ್ರ, ಗುಜರಾತ್, ದೆಹಲಿ, ಮಧ್ಯ ಪ್ರದೇಶ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಟಾಪ್‌ 10 ರಾಜ್ಯಗಳಾಗಿವೆ. ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ಗುಜರಾತ್ ಇದ್ದು, ಅಲ್ಲಿ 4721 ಸೋಂಕಿತರು ಇದ್ದಾರೆ. ಆ ಬಳಿಕ ದೆಹಲಿ ಇದ್ದು, ಸೋಂಕಿತರ ಸಂಖ್ಯೆ 3738 ಆಗಿದೆ.

ಕೊರೊನಾ ರೋಗಿಗಳಿಗೆ 'ಈ' ಔಷಧಿ ಕೊಡಲು ಅಮೇರಿಕಾ ಗ್ರೀನ್ ಸಿಗ್ನಲ್!ಕೊರೊನಾ ರೋಗಿಗಳಿಗೆ 'ಈ' ಔಷಧಿ ಕೊಡಲು ಅಮೇರಿಕಾ ಗ್ರೀನ್ ಸಿಗ್ನಲ್!

ಕೇರಳ ಬೆಸ್ಟ್‌

ಕೇರಳ ಬೆಸ್ಟ್‌

ಕೇರಳ ಕೊರೊನಾ ನಿಯಂತ್ರಣದಲ್ಲಿ ಮಾದರಿಯಾಗಿದೆ. ದೇಶದಲ್ಲಿ ಇದೇ ರಾಜ್ಯದಲ್ಲಿ ಮೊದಲು ಕೊರೊನಾ ವೈರಸ್‌ ಪ್ರಕರಣ ಕಂಡು ಬಂದಿತ್ತು. ಆದರೆ, ಆ ನಂತರ ಆ ರಾಜ್ಯ ಎದ್ದು ಬಂದಿದೆ. ನಿನ್ನೆ ದೇಶದಲ್ಲಿ 2293 ಕೊರೊನಾ ಕೇಸ್‌ಗಳು ಬಂದರೂ, ಕೇರಳದಲ್ಲಿ ಒಂದು ಪ್ರಕರಣ ಇಲ್ಲ. ಕಳೆದ ಅನೇಕ ದಿನಗಳಿಂದ ಅಲ್ಲಿ ಒಂದೆರಡು ಕೇಸ್‌ಗಳು ಕಂಡು ಬರುತ್ತಿದೆ. ಒಟ್ಟು ಸೋಂಕಿತರ ಸಂಖ್ಯೆ 497 ಇದ್ದು, ಅದರಲ್ಲಿ 383 ಜನರು ಗುಣಮುಖರಾಗಿದ್ದಾರೆ.

ಕರ್ನಾಟಕದ ಕತೆ ಏನು?

ಕರ್ನಾಟಕದ ಕತೆ ಏನು?

ಕರ್ನಾಟಕದಲ್ಲಿ ನಿನ್ನೆ 24 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಮೇ 1ರ ಸಂಜೆ 5 ಗಂಟೆಯಿಂದ ಮೇ 2ರ ಮಧ್ಯಾಹ್ನ 12 ಗಂಟೆ ಒಳಗೆ 9 ಪ್ರಕರಣಗಳು ಕಂಡು ಬಂದಿವೆ. ಒಟ್ಟು ಸೋಂಕಿತರ ಸಂಖ್ಯೆ 598ಕ್ಕೆ ಏರಿಕೆಯಾಗಿದೆ. ಈವರೆಗೆ 255 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 25 ಜನರು ಕೊರೊನಾಗೆ ಬಲಿಯಾಗಿದ್ದಾರೆ.

English summary
Coronavirus numbers on friday: No cases in Kerala. Reported 2293 new cases in india.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X