ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಶಾಸಕಿ ಅತಿಶಿಗೆ ಕೊರೊನಾ ಸೋಂಕು ಪಾಸಿಟಿವ್

|
Google Oneindia Kannada News

ದೆಹಲಿ ರಾಜ್ಯದ ಶಾಸಕಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡರು ಆದ ಅತೀಶಿಗೆ ಬುಧವಾರ ಕೋವಿಡ್-19 ಸೋಂಕು ತಗುಲಿರುವುದು ದೃಢವಾಗಿದೆ. ಬುಧವಾರ ಪರೀಕ್ಷೆಯ ಬಳಿಕ ಕೋವಿಡ್-19 ಪಾಸಿಟಿವ್ ಎಂದು ವರದಿ ಬಂದಿದೆ.

Recommended Video

History of India China border dispute | Oneindia Kannada

ಇವರು ಅಷ್ಟೇ ಅಲ್ಲದೆ ಎಎಪಿ ವಕ್ತಾರ ಅಕ್ಷಯ್ ಮರಾಠೆ ಮತ್ತು ಸಲಹೆಗಾರ ಅಭಿನಂದಿತ ದಯಾಳ್ ಮಾಥೂರ್‌ಗೂ ಕೂಡ ಕೋವಿಡ್-19 ಪಾಸಿಟಿವ್ ಆಗಿದೆ.

ಒಂದೇ ದಿನ 10,974 ಕೇಸ್ ಪತ್ತೆ, ಒಟ್ಟು ಸಾವಿನ ಸಂಖ್ಯೆ 11903ಒಂದೇ ದಿನ 10,974 ಕೇಸ್ ಪತ್ತೆ, ಒಟ್ಟು ಸಾವಿನ ಸಂಖ್ಯೆ 11903

ಕಲ್ಕಾಜಿ ಕ್ಷೇತ್ರದಿಂದ ವಿಧಾನಸಭೆಯ ಸದಸ್ಯರಾದ ಅತಿಶಿ ತನ್ನನ್ನು ಪ್ರತ್ಯೇಕಿಸಿಕೊಂಡಿದ್ದು, ಪ್ರಸ್ತುತ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕೋವಿಡ್-19 ಪರೀಕ್ಷೆ ನೆಗೆಟಿವ್ ಬಂದು ಒಂದೇ ವಾರದಲ್ಲಿ ಈ ವರದಿ ಬಂದಿದೆ.

Cornavirus Newdelhi: AAP MLA Atishi Tests Positive For Covid-19

ಮಂಗಳವಾರ, ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ವೈರಸ್ ರೋಗಲಕ್ಷಣಗಳನ್ನು ತೋರಿಸಿದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪರೀಕ್ಷೆಗಳು ನಂತರದ ದಿನಗಳಲ್ಲಿ ನೆಗೆಟಿವ್ ಬಂದಿದೆ. ಆದರೆ, ಜೈನ್ ಬುಧವಾರ ಮತ್ತೊಂದು ಪರೀಕ್ಷೆಗೆ ಒಳಗಾಗಿದ್ದು ಫಲಿತಾಂಶದ ನಿರೀಕ್ಷೆಯಲ್ಲಿದೆ.

'ಸರ್ಕಾರದ ಗುತ್ತಿಗೆಗಳಿಂದ ಚೀನಾ ನಿಷೇಧಿಸಿ, ಹುತಾತ್ಮ ಯೋಧರನ್ನು ಗೌರವಿಸಿ''ಸರ್ಕಾರದ ಗುತ್ತಿಗೆಗಳಿಂದ ಚೀನಾ ನಿಷೇಧಿಸಿ, ಹುತಾತ್ಮ ಯೋಧರನ್ನು ಗೌರವಿಸಿ'

ದೇಶದಲ್ಲಿ ಮೂರನೇ ಅತಿ ಹೆಚ್ಚು ಪ್ರಕರಣಗಳು ದೆಹಲಿಯಲ್ಲಿದ್ದು, ಸೋಂಕಿತರ ಸಂಖ್ಯೆ 45,000 ಗಡಿ ದಾಟಿದೆ. ಈವರೆಗೆ 1,837 ಜನರು ಈ ವೈರಸ್‌ಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಸುಮಾರು 23,000 ಸಕ್ರಿಯ ರೋಗಿಗಳು ಪ್ರಸ್ತುತ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

English summary
Member of the Delhi legislative assembly and Aam Aadmi Party (AAP) leader Atishi on Wednesday tested positive for covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X