ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10,000 ಕೊರೊನಾ ಸೋಂಕಿತ ಶಂಕಿತರಿಗೆ ಒಂದೇ ದಿನದಲ್ಲಿ ತಪಾಸಣೆ!

|
Google Oneindia Kannada News

ನವದೆಹಲಿ, ಮಾರ್ಚ್.22: ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪೈಕಿ ಎರಡನೇ ಸ್ಥಾನದಲ್ಲಿ ಇರುವ ಭಾರತದಲ್ಲಿ ಜನರಿಗೆ ಕೊರೊನಾ ವೈರಸ್ ಸೋಂಕು ತಗಲಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಲ್ಯಾಬ್ ಗಳ ಕೊರತೆ ಆರಂಭದಲ್ಲಿ ಎದ್ದು ಕಾಣುತ್ತಿತ್ತು.

ಈ ಹಿಂದೆ ಕೇವಲ 5 ಸಾವಿರ ಜನರಿಗೆ ವೈದ್ಯಕೀಯ ತಪಾಸಣೆ ನಡೆಸಲು ವಾರವೆಲ್ಲ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಇದೀಗ ಭಾರತದಲ್ಲಿ ಒಂದೇ ದಿನ 10,000 ಜನರನ್ನು ತಪಾಸಣೆಗೆ ಒಳಪಡಿಸುವ ಸಾಮರ್ಥ್ಯವಿದೆ ಎಂದು ಆರೋಗ್ಯ ಸಚಿವಾಲಯವು ಸ್ಪಷ್ಟಪಡಿಸಿದೆ.

ಕೊರೊನಾ ವಿರುದ್ಧ ಯುದ್ಧ; ಭಾರತಕ್ಕೆ ವರವಾಗುತ್ತಾ 102 ವರ್ಷಗಳ ಅನುಭವ?ಕೊರೊನಾ ವಿರುದ್ಧ ಯುದ್ಧ; ಭಾರತಕ್ಕೆ ವರವಾಗುತ್ತಾ 102 ವರ್ಷಗಳ ಅನುಭವ?

ಭಾನುವಾರ ಕೊರೊನಾ ವೈರಸ್ ನಿಂದ ಭಾರತದಲ್ಲಿ ಮತ್ತಿಬ್ಬರು ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದ ಸೂರತ್ ನಲ್ಲಿ 69 ವರ್ಷದ ವೃದ್ಧನು ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದು, ಗುಜರಾತ್ ನ ವಡೋದರಾದಲ್ಲಿ 65 ವರ್ಷದ ವೃದ್ಧೆಯೊಬ್ಬರು ಪ್ರಾಣ ಬಿಟ್ಟಿರುವ ಬಗ್ಗೆ ವರದಿಯಾಗಿದೆ.

ಭಾರತದಲ್ಲಿ 60 ಖಾಸಗಿ ಲ್ಯಾಬ್ ಗಳಿಗೆ ಅನುಮತಿ

ಭಾರತದಲ್ಲಿ 60 ಖಾಸಗಿ ಲ್ಯಾಬ್ ಗಳಿಗೆ ಅನುಮತಿ

ದೇಶದಲ್ಲಿ ಕೊರೊನಾ ವೈರಸ್ ತಪಾಸಣೆಗೆ ಕೇಂದ್ರ ಸರ್ಕಾರವು 111 ಲ್ಯಾಬ್ ಗಳನ್ನು ತೆರಯಲು ತೀರ್ಮಾನಿಸಿದ್ದು ಆಗಿದೆ. ಇದರ ನಡುವೆ 60 ಖಾಸಗಿ ಲ್ಯಾಬ್ ಗಳಿಗೆ ಭಾರತದ ವೈದ್ಯಕೀಯ ಸಂಶೋಧನಾ ಸಮಿತಿ(ICMR)ಯು ಅನುಮತಿ ನೀಡಿದೆ.

ವಾರಕ್ಕೆ 50 ರಿಂದ 70 ಸಾವಿರ ಜನರ ವೈದ್ಯಕೀಯ ತಪಾಸಣೆ

ವಾರಕ್ಕೆ 50 ರಿಂದ 70 ಸಾವಿರ ಜನರ ವೈದ್ಯಕೀಯ ತಪಾಸಣೆ

ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ದಿನಕ್ಕೆ 5 ಸಾವಿರ ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಸಾಮರ್ಥ್ಯವಿತ್ತು. ಇಂದು ದೇಶದಲ್ಲಿ ದಿನಕ್ಕೆ 10 ಸಾವಿರ ಜನರು ಅಂದರೆ ವಾರಕ್ಕೆ 50 ರಿಂದ 70 ಸಾವಿರ ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಐಸಿಎಂಆರ್ ನಿರ್ದೇಶಕ ಬಲರಾಮ್ ಭಾರ್ಗವ್ ತಿಳಿಸಿದ್ದಾರೆ.

ಕೊರೊನಾ ವೈರಸ್ ಹರಡುವಿಕೆಗೆ ದಿಗ್ಬಂಧನವೇ ಔಷಧಿ

ಕೊರೊನಾ ವೈರಸ್ ಹರಡುವಿಕೆಗೆ ದಿಗ್ಬಂಧನವೇ ಔಷಧಿ

ಮಾರಕ ಕೊರೊನಾ ವೈರಸ್ ಸೋಂಕಿಗೆ ಯಾವುದೇ ಮದ್ದು ಕಂಡು ಹಿಡಿದಿಲ್ಲ. ಈ ಹಿನ್ನೆಲೆ ಸೋಂಕಿತರು ಮತ್ತು ಶಂಕಿತರ ನಡುವಿನ ಸಂಪರ್ಕವನ್ನು ಕಡಿತಗೊಳಿಸುವುದರಿಂದ ಸೋಂಕು ಹರಡುವುದನ್ನು ತಡೆ ಹಿಡಿಯಬಹುದು. ಹೀಗಾಗಿ ಜನತಾ ಕರ್ಫ್ಯೂಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ ಎಂದು ತಿಳಿಸಿದ್ದರು.

ದೇಶದಲ್ಲಿ ಇರುವುದೆಷ್ಟು ಕೊರೊನಾ ಸೋಂಕಿತರು?

ದೇಶದಲ್ಲಿ ಇರುವುದೆಷ್ಟು ಕೊರೊನಾ ಸೋಂಕಿತರು?

ಇನ್ನು, ಜನತಾ ಕರ್ಫ್ಯೂಗೆ ಕರೆ ನೀಡಿದ ದಿನವೂ ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರು ಪತ್ತೆಯಾದರು. ಭಾನುವಾರ 9 ಜನರಿಗೆ ಮಾರಕ ಸೋಂಕು ತಗಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆಯು 341ಕ್ಕೆ ಏರಿಕೆಯಾಗಿದೆ.

English summary
Coronavirus: India Have Capacity To Conduct 10,000 Tests Per Day Health Ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X