ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check:ಕೊರೊನಾ ಹರಡಲು ದೆಹಲಿ ಮಸೀದಿಯಲ್ಲಿ ಸಾಮೂಹಿಕ ಸೀನುವಿಕೆ!

|
Google Oneindia Kannada News

ನವದೆಹಲಿ, ಏಪ್ರಿಲ್ 4: ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಇದ್ದರೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಸಾಗಿದೆ. ಅದರಲ್ಲೂ ದೆಹಲಿಯ ನಿಜಾಮುದ್ದೀನ್‌ನ ತಬ್ಲಿಘಿ ಜಮಾತ್ ಮಸೀದಿ ಇಡೀ ದೇಶದಲ್ಲಿ ನಂಬರ್ 1 ಕೊರೊನಾ ಹಾಟ್‌ಸ್ಪಾಟ್‌ ಎಂದು ಗುರುತಿಸಿಕೊಂಡಿದೆ.

ಲಾಕ್‌ಡೌನ್ ಜಾರಿಯಿದ್ದರೂ ತಬ್ಲಿಘಿ ಜಮಾತ್ ಮಸೀದಿ ಸಾಮೂಹಿಕ ಪ್ರಾರ್ಥನೆ ನಡೆದಿದ್ದು ಅವಾಂತರ ಹುಟ್ಟಿಹಾಕಿರುವ ಬೆನ್ನಲ್ಲೆ, ಜಮಾತ್‌ನ ಈ ನಡೆಯ ಬಗ್ಗೆ ಹಲವು ಖಂಡನೆಗಳು ವ್ಯಕ್ತವಾಗುತ್ತಿವೆ.

Fact Check: ಸಿಬಿಎಸ್ಇ ಕ್ಲಾಸ್ 10, 12 ರ ಪರೀಕ್ಷೆ ದಿನಾಂಕ ಘೋಷಣೆ? Fact Check: ಸಿಬಿಎಸ್ಇ ಕ್ಲಾಸ್ 10, 12 ರ ಪರೀಕ್ಷೆ ದಿನಾಂಕ ಘೋಷಣೆ?

ಈ ಹಿನ್ನೆಲೆಯಲ್ಲಿ ತಬ್ಲಿಘಿ ಜಮಾತ್ ಮಸೀದಿ ಸಾಮೂಹಿಕ ಪ್ರಾರ್ಥನೆ ದೇಶದಲ್ಲಿ ಕೊರೊನಾ ಹರಡಲು ನಡೆಸಿದ ಪ್ರಯತ್ನವಾಗಿತ್ತು ಎಂಬುದಕ್ಕೆ ವಿಡಿಯೋ ಲಭ್ಯವಾಗಿದೆ ಎಂಬ ವಿವಾದಾತ್ಮಕ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವಿಡಿಯೋದಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿರುವವರು ಕೊರೊನಾ ಹರಡಲು ಎಲ್ಲರೂ ಒಂದೆಡೆ ಸೇರಿ ಸಾಮೂಹಿಕವಾಗಿ ಸೀನುವ ಸನ್ನಿವೇಶ ವಿಡಿಯೋದಲ್ಲಿ ಇದೆ. ಈ ವಿಡಿಯೋ ಸತ್ಯಾಸತ್ಯತೆಯನ್ನು ಒನ್ ಇಂಡಿಯಾ ಪರಿಶೀಲಿಸಿದೆ.

ಹಲವರು ವಿಡಿಯೋ ಶೇರ್ ಮಾಡಿದ್ದರು

ಹಲವರು ವಿಡಿಯೋ ಶೇರ್ ಮಾಡಿದ್ದರು

ದೆಹಲಿಯ ತಬ್ಲಿಘಿ ಜಮಾತ್ ಮಸೀದಿಯಲ್ಲಿ ಮಾರ್ಚ್ 13 ರಿಂದ 15 ರವೆರೆಗೆ ನಡೆದ ಸಾಮೂಹಿಕ ಪ್ರಾರ್ಥನೆ ಸಭೆಯಲ್ಲಿ ವಿವಿಧ ರಾಜ್ಯಗಳ ಮತ್ತು ವಿದೇಶಗಳ 2,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಅಲ್ಲಿ ಭಾಗವಹಿಸಿದ್ದವರು ಮೊಣಕಾಲುಗಳ ಮೇಲೆ ಕುಳಿತು ಪ್ರಾರ್ಥನೆ ಮಾಡುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿತ್ತು. ನಿಜಾಮುದ್ದೀನ್ ಮಸೀದಿಯಲ್ಲಿ ಕರೋನವೈರಸ್ ಸೋಂಕು ಹರಡಲು ಉದ್ದೇಶಪೂರ್ವಕವಾಗಿ ಸೀನುತ್ತಿದ್ದಾರೆ ಎಂದು ಹಲವರು ವಿಡಿಯೋ ಶೇರ್ ಮಾಡಿದ್ದರು.

ಜನವರಿ 29 ರಂದು ಪೋಸ್ಟ್‌ ಆಗಿತ್ತು

ಅದರೆ, ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ, ಈ ವಿಡಿಯೋ ನಿಜಾಮುದ್ದೀನ್‌ನಲ್ಲಿ ನಡೆದದ್ದೇ ಆಗಿದೆ. ಆದರೆ, ತಬ್ಲಿಘಿ ಜಮಾತ್ ಸಮ್ಮೇಳನಕ್ಕೂ ಕೆಲವು ತಿಂಗಳ ಮೊದಲು ನಡೆದಿದ್ದಾಗಿದೆ ಎಂಬುದು ಗೊತ್ತಾಗಿದೆ. ಜನವರಿ 29 ರಂದು ಫೇಸ್‌ಬುಕ್ ಬಳಕೆದಾರ 'Ridouan Soumaa' ಎಂಬುವರು ಈ ವಿಡಿಯೋ ಪೋಸ್ಟ್‌ ಮಾಡಿದ್ದರು.

ಜಿಕಿರ್ ಪ್ರದರ್ಶಿಸುತ್ತಿದ್ದಾರೆ

ಜಿಕಿರ್ ಪ್ರದರ್ಶಿಸುತ್ತಿದ್ದಾರೆ

ಮೂಲಗಳ ಪ್ರಕಾರ ವಿಡಿಯೋದಲ್ಲಿ ನಿಜಾಮುದ್ದೀನ್‌ನಲ್ಲಿ ಮಸೀದಿಯಲ್ಲಿ ಮುಸ್ಲಿಂ ಯುವಕರು ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ. ವೀಡಿಯೊದಲ್ಲಿರುವ ಜನರು ಜಿಕಿರ್ ಪ್ರದರ್ಶಿಸುತ್ತಿದ್ದಾರೆ, ಇದು ಸೂಫಿಸಂನಲ್ಲಿ ಹೆಚ್ಚಾಗಿ ಅನುಸರಿಸುವ ಪ್ರಾರ್ಥನೆಯ ವಿಧಾನವಾಗಿದೆ. ಸಾಮಾನ್ಯವಾಗಿ ಜಿಕಿರ್ ಸಮಯದಲ್ಲಿ ಜನರು ಪ್ರಾರ್ಥನೆಯನ್ನು ಪುನರಾವರ್ತಿಸುತ್ತಾರೆ ಎಂಬುದಾಗಿ ತಿಳಿದು ಬಂದಿದೆ.

ಸುಳ್ಳು ಸುದ್ದಿಗಳಿಗೂ ಬರವಿಲ್ಲವಾಗಿದೆ

ಸುಳ್ಳು ಸುದ್ದಿಗಳಿಗೂ ಬರವಿಲ್ಲವಾಗಿದೆ

ಆದಾಗ್ಯೂ, ವೀಡಿಯೊದ ಮೂಲ ಬಹಿರಂಗಗೊಂಡಿಲ್ಲ. ಆದರೆ, ದೆಹಲಿಯ ಹಜರತ್ ನಿಜಾಮುದ್ದೀನ್ ಮಸೀದಿಯಲ್ಲಿ ಕರೋನವೈರಸ್ ಹರಡಲು ಉದ್ದೇಶಪೂರ್ವಕವಾಗಿ ಸೀನುವುದಕ್ಕೂ, ಈ ವಿವಾದಾತ್ಮಕ ವೀಡಿಯೊಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಖಚಿತವಾಗಿದೆ. ಒಟ್ಟಿನಲ್ಲಿ ಕೊರೊನಾ ಹಾವಳಿ ನಡುವೆ ಸುಳ್ಳು ಸುದ್ದಿಗಳಿಗೂ ಬರವಿಲ್ಲವಾಗಿದೆ.

English summary
Coronavirus Fact Cheak: Mass Sneezing At Delhi Nizamudin Mosque For Spreading Coronavirus. confirmed, in fact check this is fake video.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X