ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಕಂಟಕ: ಭಾರತದ ನಿರ್ಧಾರದಿಂದ ಯುರೋಪ್ ರಾಷ್ಟ್ರಗಳಲ್ಲಿ ಆತಂಕ

|
Google Oneindia Kannada News

ನವದೆಹಲಿ, ಮಾರ್ಚ್.04: ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ನದ್ದೇ ಮಾತು. ದಿನದಿಂದ ದಿನಕ್ಕೆ ಮಾರಕ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ವಿಶ್ವದಾದ್ಯಂತ ಇದುವರೆಗೂ 3 ಸಾವಿರಕ್ಕೂ ಹೆಚ್ಚು ಮಂದಿ ಮಾರಕ ಸೋಂಕಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ.

ವಿಶ್ವದ ಕೊರೊನಾ ಪೀಡಿತ ರಾಷ್ಟ್ರಗಳ ಜೊತೆಗೆ 26 ಬಗೆಯ ಔಷಧಿ ಪದಾರ್ಥಗಳ ವಹಿವಾಟಿಗೆ ಸರ್ಕಾರವು ನಿರ್ಬಂಧ ವಿಧಿಸಿದೆ. ಜೆನರಿಕ್ ಔಷಧಿಗಳ ಕೇಂದ್ರ ಎನಿಸಿರುವ ಭಾರತವು ತೆಗೆದುಕೊಂಡಿರುವ ಇದೊಂದು ನಿರ್ಧಾರ ಯುರೋಪ್ ರಾಷ್ಟ್ರಗಳಲ್ಲಿ ಆತಂಕ ಸೃಷ್ಟಿಸಿದೆ.

ಲೈಂಗಿಕ ಸಂಪರ್ಕ ಬೆಳೆಸುವುದರಿಂದ ಮಾರಕ ಕೊರೊನಾ ವೈರಸ್ ಹರಡಬಹುದೇ?ಲೈಂಗಿಕ ಸಂಪರ್ಕ ಬೆಳೆಸುವುದರಿಂದ ಮಾರಕ ಕೊರೊನಾ ವೈರಸ್ ಹರಡಬಹುದೇ?

ಭಾರತದಲ್ಲೂ ಕೊರೊನಾ ವೈರಸ್ ಕಾಣಿಸಿಕೊಂಡಿದ್ದು , 28 ಜನರಲ್ಲಿ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಮುಂದೆ ಎದುರಾಗುವ ಅಪಾಯವನ್ನು ನಿಭಾಯಿಸುವ ನಿಟ್ಟಿನಲ್ಲಿ ಅಗತ್ಯ ಔಷಧಿಗಳನ್ನು ವಿದೇಶಕ್ಕೆ ರಫ್ತು ಮಾಡದೇ ಇರಲು ಫಾರ್ಮಾಸೆಟಿಕಲ್ ಎಕ್ಪ್ ಪರ್ಟ್ ಪ್ರಮೋಶನ್ ಕೌನ್ಸಿಲ್ ಆಫ್ ಇಂಡಿಯಾದ ಚೇರ್ ಮನ್ ದಿನೇಶ್ ದಿಯು ತಿಳಿಸಿದ್ದಾರೆ.

ಯುರೋಪಿಯನ್ ದೇಶಗಳಿಂದ ದೂರವಾಣಿ ಕರೆ

ಯುರೋಪಿಯನ್ ದೇಶಗಳಿಂದ ದೂರವಾಣಿ ಕರೆ

ಜೆನರಿಕ್ ಔಷಧಿಗಳಿಗಾಗಿ ಯುರೋಪ್ ರಾಷ್ಟ್ರಗಳು ಭಾರತವನ್ನೇ ನೆಚ್ಚಿಕೊಂಡಿವೆ. ಫಾರ್ಮಾಸೆಟಿಕಲ್ ಎಕ್ಪ್ ಪರ್ಟ್ ಪ್ರಮೋಶನ್ ಕೌನ್ಸಿಲ್ ಆಫ್ ಇಂಡಿಯಾ ತೆಗೆದುಕೊಂಡ ನಿರ್ಧಾರದಿಂದ ಆಗ್ನೇಯ ಏಷ್ಯಾ, ಲ್ಯಾಟಿನ್ ಅಮೆರಿಕಾ, ಮತ್ತು ಆಫ್ರಿಕಾ ರಾಷ್ಟ್ರಗಳು ಆತಂಕಕ್ಕೆ ಒಳಗಾಗಿವೆ. ಇದರ ಬೆನ್ನಲ್ಲೇ ಯುರೋಪ್ ರಾಷ್ಟ್ರಗಳಿಂದ ಮೇಲಿಂದ ಮೇಲೆ ದೂರವಾಣಿ ಕರೆಗಳು ಬರುತ್ತಿವೆ ಎಂದು ದಿನೇಶ್ ದಿಯು ತಿಳಿಸಿದ್ದಾರೆ.

ರೋಗ ನಿರೋಧಕ ಔಷಧಿಗಳ ರಫ್ತಿಗೆ ನಿರ್ಬಂಧ ವಿಧಿಸಿದ ಭಾರತ

ರೋಗ ನಿರೋಧಕ ಔಷಧಿಗಳ ರಫ್ತಿಗೆ ನಿರ್ಬಂಧ ವಿಧಿಸಿದ ಭಾರತ

ಕೊರೊನಾ ವೈರಸ್ ನಿಂದ ಪಾರಾಗಲು ರೋಗ ನಿರೋಧಕ ಔಷಧಿಗಳನ್ನೇ ಅವಲಂಬಿಸಿಕೊಳ್ಳಲಾಗಿದೆ. ಭಾರತವು ರಫ್ತು ಮಾಡುವ ಔಷಧೀಯ ಪದಾರ್ಥಗಳಲ್ಲಿನ ಶೇ.10ರಷ್ಟು ಔಷಧೀಯ ಪದಾರ್ಥಗಳ ರಫ್ತಿಗೆ ಇದೀಗ ನಿರ್ಬಂಧ ವಿಧಿಸಲಾಗಿದೆ. ಇದರಲ್ಲಿ ರೋಗ ನಿರೋಧಕ ಮತ್ತು ಪ್ಯಾರಾಸಿಟಮಲ್ ಔಷಧಿಗಳೂ ಸೇರಿವೆ.

ರಫ್ತಿಗೆ ಅವಕಾಶ ನೀಡುವಂತೆ ಡಿಜಿಎಫ್ ಟಿಗೆ ಮನವಿ

ರಫ್ತಿಗೆ ಅವಕಾಶ ನೀಡುವಂತೆ ಡಿಜಿಎಫ್ ಟಿಗೆ ಮನವಿ

ಕೊರೊನಾ ಪೀಡಿತ ರಾಷ್ಟ್ರಗಳಿಗೆ ಔಷಧೀಯ ಪದಾರ್ಥಗಳ ರಫ್ತು ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ, ಈಗಾಗಲೇ ಉತ್ಪಾದನೆಯಾಗಿರುವ ಔಷಧೀಯ ಪದಾರ್ಥಗಳನ್ನು ರಫ್ತು ಮಾಡಲು ಅವಕಾಶ ನೀಡಬೇಕು. ಇಲ್ಲದಿದ್ದರೆ ವಿದೇಶಿ ವ್ಯಾಪಾರಕ್ಕೆ ಭಾರಿ ಹೊಡೆತ ಬೀಳುವ ಸಾಧ್ಯತೆಗಳಿವೆ ಎಂದು ವಿದೇಶಿ ವ್ಯವಹಾರಗಳ ನಿರ್ದೇಶನಾಲಯಕ್ಕೆ ಮನವಿ ಸಲ್ಲಿಸಲಾಗಿದೆ.

13 ಔಷಧಿಗಳಿಗಾಗಿ ಚೀನಾವನ್ನೇ ಅವಲಂಬಿಸಿದ್ದ ಭಾರತ

13 ಔಷಧಿಗಳಿಗಾಗಿ ಚೀನಾವನ್ನೇ ಅವಲಂಬಿಸಿದ್ದ ಭಾರತ

ಯುರೋಪ್ ರಾಷ್ಟ್ರಗಳಿಗೆ 26 ಬಗೆಯ ಔಷಧೀಯ ಪದಾರ್ಥಗಳ ರಫ್ತಿಗೆ ನಿರ್ಬಂಧ ವಿಧಿಸಲಾಗಿದೆ. ಏಕೆಂದರೆ ಈ ಪೈಕಿ 13 ಔಷಧಿಗಳ ತಯಾರಿಕೆಗೆ ಚೀನಾ ಮೂಲದಿಂದ ಕಚ್ಚಾವಸ್ತುಗಳು ಆಮದು ಆಗುತ್ತಿದ್ದವು. ಅದರಲ್ಲೂ ಕೊರೊನಾ ವೈರಸ್ ಪೀಡಿತ ಪ್ರದೇಶ ಹುಬೈ ನಗರದಿಂದಲೇ ಈ ಔಷಧಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು ಎಂದು ದಿನೇಶ್ ದಿಯು ತಿಳಿಸಿದ್ದಾರೆ.

English summary
Coronavirus Effect: Indian Government Curbs On 26 Drug Exports. Now More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X