• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೆಹಲಿಯಲ್ಲಿ ಆಕ್ಸಿಜನ್ ಸಾಂದ್ರಕಗಳ ವಿವರಣೆ ಕೋರಿದ ಹೈಕೋರ್ಟ್

|
Google Oneindia Kannada News

ನವದೆಹಲಿ, ಮೇ 03: ಕೊರೊನಾವೈರಸ್ ಎರಡನೇ ಅಲೆಯ ನಡುವೆ ರಾಷ್ಟ್ರ ರಾಜಧಾನಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಹಿನ್ನೆಲೆ ಸರ್ಕಾರದ ಬಳಿ ಅದೆಷ್ಟು ಪ್ರಮಾಣದ ವೈದ್ಯಕೀಯ ಆಮ್ಲಜನಕ ಮತ್ತು ಸಾಂದ್ರಕಗಳಿವೆ ಎಂದು ಮಾಹಿತಿ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ನವದೆಹಲಿಯಲ್ಲಿ ಆಮ್ಲಜನಕ ಸಿಲಿಂಡರ್, ವೆಂಟಿಲೇಟರ್ ಹಾಗೂ ಬೆಡ್ ಅಭಾವದಿಂದ ಮನೆಗಳಲ್ಲೇ ಕೊವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯಕೀಯ ಸೌಲಭ್ಯಗಳು ಸೂಕ್ತ ಸಮಯದಲ್ಲಿ ಸಿಗದೇ 40ಕ್ಕೂ ಹೆಚ್ಚು ಕೊವಿಡ್-19 ರೋಗಿಗಳು ಪ್ರಾಣ ಬಿಟ್ಟಿದ್ದಾರೆ.

 ಕೇಂದ್ರ ಸರಕಾರದ ವಿರುದ್ದ ಕೊರೊನಾ ತಜ್ಞರ ಸಮಿತಿಯ ಗಂಭೀರ ಆರೋಪ ಕೇಂದ್ರ ಸರಕಾರದ ವಿರುದ್ದ ಕೊರೊನಾ ತಜ್ಞರ ಸಮಿತಿಯ ಗಂಭೀರ ಆರೋಪ

ಕಳೆದ ಶನಿವಾರ ಮತ್ರಾ ಆಸ್ಪತ್ರೆಯಲ್ಲಿ 12 ಮಂದಿ ಕೊರೊನಾವೈರಸ್ ರೋಗಿಗಳು ಮಹಾಮಾರಿಯಿಂದಲೇ ಬಲಿಯಾಗಿದ್ದರು. ಇದರ ಜೊತೆಗೆ ಕಳೆದ ವಾರ ಕೊವಿಡ್-19 ಸೋಂಕಿನ ಜೊತೆಗೆ ಉಸಿರಾಟದ ಸಮಸ್ಯೆಯಿಂದಾಗಿ 25 ಜನರು ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಆಮ್ಲಜನಕ ಸಾಂದ್ರಕ ಆಮದುಗೆ ಅನುಮತಿ:

ಕೊರೊನಾವೈರಸ್ ಸೋಂಕಿನ ಏರಿಕೆ ನಡುವೆ ವಿದೇಶಗಳಿಂದ ಆಮ್ಲಜನಕ ಸಾಂದ್ರಕಗಳನ್ನು ಆಮದು ಮಾಡಿಕೊಳ್ಳುವುದುಕ್ಕೆ ಅನುಮತಿ ನೀಡಲಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಹಾಗೂ ಯುನೈಟೆಡ್ ಕಿಂಗ್ ಡನ್ ರಾಷ್ಟ್ರಗಳಿಂದ ಆಮ್ಲಜನಕ ಸಾಂದ್ರಕಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ನಮ್ಮ ಸುತ್ತಲಿನ ಗಾಳಿಯನ್ನು ಸಂಗ್ರಹಿಸಿ ಆಮ್ಲಜನಕವನ್ನು ಪರಿವರ್ತಿಸಿ ರೋಗಿಗಳಿಗೆ ನೀಡುವ ಸಾಂದ್ರಕಗಳ ಆಮದು ಮಾಡಿಕೊಳ್ಳಲು ಸರ್ಕಾರಕ್ಕೆ ಅನುಮತಿ ನೀಡಲಾಗಿದೆ.

ಕಣ್ ಮುಚ್ಚಿಕೊಂಡು ಕುಳಿತ್ತಿದ್ದೀರಾ?:

ಜನರು ಮುಳುಗುವಂತಾ ಪರಿಸ್ಥಿತಿ ಎದುರಾಗಿದ್ದು, ನೀವೇನು ಕಣ್ಣು ಮೇಲೆ ಇಟ್ಟುಕೊಂಡಿದ್ದೀರಾ. ಈಗಾಗಲೇ ಎಂಟಕ್ಕೂ ಹೆಚ್ಚು ಮಂದಿ ಆಮ್ಲಜನಕವಿಲ್ಲದೇ ಪ್ರಾಣ ಬಿಟ್ಟಿದ್ದಾರೆ. ಇದನ್ನೆಲ್ಲಾ ಕಣ್ಣು ಮುಚ್ಚಿಕೊಂಡು ಕುಳಿತು ನೋಡುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ವಿಪಿನ್ ಸಂಘಿ ಹಾಗೂ ರೇಖಾ ಪಲ್ಲಿ ಎಚ್ಚರಿಸಿದ್ದಾರೆ.

English summary
Coronavirus: Delhi High Court Asked Details Of Oxygen Concentrators.ಕೊರೊನಾವೈರಸ್:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X