ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ರಾಜ್ಯದಲ್ಲಿ ಕೊವಿಡ್-19 ಸೋಂಕಿತರಿಗಿಂತ ಗುಣಮುಖ ಆದವರೇ ಹೆಚ್ಚು!

|
Google Oneindia Kannada News

ನವದೆಹಲಿ, ಜುಲೈ.09: ಕೊರೊನಾವೈರಸ್ ಅಟ್ಟಹಾಸದಿಂದ ದಿನೇದಿನೆ ರಾಷ್ಟ್ರ ರಾಜಧಾನಿಯಲ್ಲಿನ ಚಿತ್ರಣವೂ ಬದಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 2187 ಮಂದಿಗೆ ಸೋಂಕು ಅಂಟಿಕೊಂಡಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ.

ಮಹಾಮಾರಿಯು ನವದೆಹಲಿ ಜನರ ಎದೆಯಲ್ಲಿ ಭಯವನ್ನು ಹುಟ್ಟು ಹಾಕುತ್ತಿದ್ದು, ಕೊರೊನಾವೈರಸ್ ಸೋಂಕಿತರ ಒಟ್ಟು ಸಂಖ್ಯೆಯು 1,07,051ಕ್ಕೆ ಏರಿಕೆಯಾಗಿದೆ. ಇನ್ನು, ಕೋವಿಡ್-19 ಮಹಾಮಾರಿಗೆ ಬಲಿಯಾದವರ ಒಟ್ಟು ಸಂಖ್ಯೆ 3258ಕ್ಕೆ ಏರಿಕೆಯಾಗಿದೆ.

ಕೊರೊನಾವೈರಸ್ ಭೀತಿ ನಡುವೆಯೂ ಭಾರತದ ಈ ರಾಜ್ಯಗಳು ಸೇಫ್!ಕೊರೊನಾವೈರಸ್ ಭೀತಿ ನಡುವೆಯೂ ಭಾರತದ ಈ ರಾಜ್ಯಗಳು ಸೇಫ್!

ಕೊರೊನಾವೈರಸ್ ಸೋಂಕು ಹರಡುವಿಕೆ ಪ್ರಮಾಣ ತಗ್ಗಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರವು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದೆ. ಸೋಂಕಿತ ಲಕ್ಷಣ ಕಂಡು ಬಂದವರಲ್ಲಿ ಬಹುತೇಕ ಜನರನ್ನು ಗೃಹ ದಿಗ್ಬಂಧನದಲ್ಲೇ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

12,000 ಕೊವಿಡ್-19 ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ

12,000 ಕೊವಿಡ್-19 ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ

ನವದೆಹಲಿಯಲ್ಲಿ ಕೊರೊನಾವೈರಸ್ ಸೋಂಕಿತರೆಲ್ಲ ಆಸ್ಪತ್ರೆಗೆ ದಾಖಲಿಸಿಕೊಳ್ಳುವ ವ್ಯವಸ್ಥೆಯಿಲ್ಲ. ಬದಲಿಗೆ ಸೌಮ್ಯ ಲಕ್ಷಣಗಳು ಕಂಡು ಬಂದಿರುವ ಸೋಂಕಿತರನ್ನು ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಗುರುವಾರದ ಅಂಕಿ-ಅಂಶಗಳ ಪ್ರಕಾರ 12,543 ಸೋಂಕಿತರನ್ನು ಹೀಗೆ ಹೋಮ್ ಐಸೋಲೇಷನ್ ನಲ್ಲಿ ಇರಿಸಿ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ.

ಸೋಂಕಿತರಿಗಿಂತ ಗುಣಮುಖ ಆದವರೇ ಹೆಚ್ಚು

ಸೋಂಕಿತರಿಗಿಂತ ಗುಣಮುಖ ಆದವರೇ ಹೆಚ್ಚು

ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಕಡಿವಾಣ ಹಾಕುವ ನಿಟ್ಟಿನಲ್ಲಿ ಶಿಸ್ತುಕ್ರಮಗಳನ್ನು ಜಾರಿಗೊಳಿಸುತ್ತಿದೆ. ಸರ್ಕಾರದ ಚಿಕಿತ್ಸಾ ಮಾದರಿಯಿಂದ ನವದೆಹಲಿಯಲ್ಲಿ ಕೊರೊನಾವೈರಸ್ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಳವಾಗುತ್ತಿದೆ. ಗುರುವಾರ 2187 ಹೊಸ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದರೆ, ಕಳೆದ 24 ಗಂಟೆಗಳಲ್ಲಿ 4027 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ದಕ್ಷಿಣ ಭಾರತಕ್ಕೆ ದಂಗು ಬಡಿಸಿದ ಕೊರೊನಾವೈರಸ್; ಇಲ್ಲಿದೆ ರಿಪೋರ್ಟ್!ದಕ್ಷಿಣ ಭಾರತಕ್ಕೆ ದಂಗು ಬಡಿಸಿದ ಕೊರೊನಾವೈರಸ್; ಇಲ್ಲಿದೆ ರಿಪೋರ್ಟ್!

ನವದೆಹಲಿಯಲ್ಲಿ ಶೇ.76.81ರಷ್ಟು ಸೋಂಕಿತರು ಗುಣಮುಖ

ನವದೆಹಲಿಯಲ್ಲಿ ಶೇ.76.81ರಷ್ಟು ಸೋಂಕಿತರು ಗುಣಮುಖ

ನವದೆಹಲಿಯಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆಗಿಂತ ವೇಗವಾಗ ಗುಣಮುಖ ಪ್ರಮಾಣ ಹೆಚ್ಚಾಗುತ್ತಿದೆ. 1,07,051 ಒಟ್ಟು ಸೋಂಕಿತರ ಪೈಕಿ 82226 ಸೋಂಕಿತರು ಗುಣಮುಖರಾಗಿದ್ದು, 21567 ಸಕ್ರಿಯ ಪ್ರಕರಣಗಳಿವೆ. ಒಟ್ಟು ಶೇ.78.81ರಷ್ಟು ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ. ಗುರುವಾರ ಒಟ್ಟು 22289 ಜನರನ್ನು ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದ್ದು, ಈ ಪೈಕಿ 2187 ಜನರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಸೋಂಕು ಹರಡುವಿಕೆಯ ಸರಾಸರಿ ಪ್ರಮಾಣವು ಶೇ.9.81ರಷ್ಟಿದೆ.

ಮನೆಯಲ್ಲಿದ್ದೇ ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು ಹೇಗೆ?ಮನೆಯಲ್ಲಿದ್ದೇ ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು ಹೇಗೆ?

15096 ಬೆಡ್ ಗಳ ಪೈಕಿ 10312 ಬೆಡ್ ಗಳು ಖಾಲಿ

15096 ಬೆಡ್ ಗಳ ಪೈಕಿ 10312 ಬೆಡ್ ಗಳು ಖಾಲಿ

ನವದೆಹಲಿಯಲ್ಲಿ ಬಹುಪಾಲು ಕೊರೊನಾವೈರಸ್ ಸೋಂಕಿತರನ್ನು ಹೋಮ್ ಐಸೋಲೇಷನ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಆರಂಭದಲ್ಲಿ ಸರ್ಕಾರಕ್ಕೆ ಎದುರಾಗಿದ್ದ ಕೊವಿಡ್-19 ಸೋಂಕಿತರಿಗೆ ಬೆಡ್ ಗಳ ಸಮಸ್ಯೆಗೆ ಒಂದು ಪರಿಹಾರ ಸಿಕ್ಕಂತೆ ಆಗಿದೆ. ನವೆದಹಲಿಯ ಕೊವಿಡ್ ಆಸ್ಪತ್ರೆಗಳಲ್ಲಿ ಇರುವ 15096 ಬೆಡ್ ಗಳ ಪೈಕಿ 10312 ಬೆಡ್ ಗಳು ಖಾಲಿ ಖಾಲಿಯಾಗಿವೆ. 4784 ಸೋಂಕಿತರು ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶೇ.68.30ರಷ್ಟು ಬೆಡ್ ಗಳು ಖಾಲಿಯಾಗಿವೆ ಎಂದು ಅಂಕಿ-ಅಂಶಗಳು ತಿಳಿಸಿವೆ.

ದೆಹಲಿ: ಹೊಸ ಕೊರೊನಾ ಪ್ರಕರಣಗಳಿಗಿಂತ ಚೇತರಿಕೆ ಪ್ರಮಾಣವೇ ಹೆಚ್ಚುದೆಹಲಿ: ಹೊಸ ಕೊರೊನಾ ಪ್ರಕರಣಗಳಿಗಿಂತ ಚೇತರಿಕೆ ಪ್ರಮಾಣವೇ ಹೆಚ್ಚು

English summary
New Delhi: Coronavirus Cured Cases Higher Than Positive Cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X