ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ - 19 ಸೋಂಕು; ದೇಶದಲ್ಲಿ 2ನೇ ಸ್ಥಾನಕ್ಕೆ ಬಂದ ದೆಹಲಿ

|
Google Oneindia Kannada News

ನವದೆಹಲಿ, ಜೂನ್ 22 : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2909 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖವಾಗಿವೆ. ದೇಶದಲ್ಲಿನ ಕೊರೊನಾ ವೈರಸ್ ಸೋಂಕಿತರ ಪಟ್ಟಿಯಲ್ಲಿ ದೆಹಲಿ 2ನೇ ಸ್ಥಾನಕ್ಕೆ ಬಂದಿದೆ.

ಸೋಮವಾರ ದೆಹಲಿಯಲ್ಲಿ 2909 ಹೊಸ ಪ್ರಕರಣ ದಾಖಲಾಗಿದ್ದು, 58 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 62,655ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 23,820.

ಕೊರೊನಾವೈರಸ್ ತಪಾಸಣೆಯಲ್ಲಿ ದಾಖಲೆ ಬರೆದ ತಮಿಳುನಾಡು! ಕೊರೊನಾವೈರಸ್ ತಪಾಸಣೆಯಲ್ಲಿ ದಾಖಲೆ ಬರೆದ ತಮಿಳುನಾಡು!

ದೇಶದಲ್ಲಿನ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಸೋಮವಾರದ ತನಕ ತಮಿಳುನಾಡು 2ನೇ ಸ್ಥಾನದಲ್ಲಿತ್ತು. ಇಂದು ದೆಹಲಿ 62,655 ಪ್ರಕರಣಗಳ ಮೂಲಕ 2ನೇ ಸ್ಥಾನಕ್ಕೆ ಬಂದಿದೆ.

ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಯಾಗುತ್ತಾ?ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿಯಾಗುತ್ತಾ?

Coronavirus Case Delhi Surpasses Tamil Nadu

ತಮಿಳುನಾಡಿನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 62,087. ರಾಜ್ಯದಲ್ಲಿ ಇದುವರೆಗೂ 794 ಜನರು ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಮೃತಪಟ್ಟವರ ಸಂಖ್ಯೆ 2,233ಕ್ಕೆ ಏರಿಕೆಯಾಗಿದೆ.

ಗೋವಾದಲ್ಲಿ ಕೊರೊನಾ ವೈರಸ್‌ಗೆ ಮೊದಲ ಬಲಿ ಗೋವಾದಲ್ಲಿ ಕೊರೊನಾ ವೈರಸ್‌ಗೆ ಮೊದಲ ಬಲಿ

ಗೋವಾದಲ್ಲಿ ಮೊದಲ ಸಾವು : ಸೋಮವಾರ ಗೋವಾ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತನಾಗಿದ್ದ 85 ವರ್ಷದ ವೃದ್ಧ ಮೃತಪಟ್ಟಿದ್ದಾನೆ. ರಾಜ್ಯದಲ್ಲಿ ಕೊರೊನಾಗೆ ಇದೇ ಮೊದಲ ಬಲಿಯಾಗಿದೆ.

ರಾಜ್ಯದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಮಾಧ್ಯಮಗಳ ಜೊತೆ ಮಾತನಾಡಿದ್ದು, "ರಾಜ್ಯದಲ್ಲಿ 818 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 683 ಸಕ್ರಿಯ ಪ್ರಕರಣಗಳು" ಎಂದು ಹೇಳಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯಂತೆ ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 4,25,282ಕ್ಕೆ ಏರಿಕೆಯಾಗಿದೆ. ಇದುವರೆಗೂ ಒಟ್ಟು 13,699 ಜನರು ಮೃತಪಟ್ಟಿದ್ದಾರೆ.

English summary
New Delhi reported 2909 new cases on Monday. Delhi surpassed Tamil Nadu to become the second worst-hit state. Total number of positive cases stand at 62,655 in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X