ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಮೂತ್ರ, ಸಗಣಿಯಿಂದ ಕೊರೊನಾ ಗುಣಪಡಿಸಬಹುದು: ಸ್ವಾಮಿ ಚಕ್ರಪಾಣಿ

|
Google Oneindia Kannada News

ನವದೆಹಲಿ, ಫೆಬ್ರವರಿ 1: ಗೋಮೂತ್ರ ಕುಡಿಯುವುದರಿಂದ ಕೊರೊನಾ ವೈರಸ್ ಗುಣಪಡಿಸಬಹುದು ಎಂದು ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ ಹೇಳಿದ್ದಾರೆ.

ಭಾರತದಲ್ಲೂ ಕೊರೊನಾ ಸೋಂಕು ಪತ್ತೆಯಾಗಿದೆ. ಇಡೀ ದೇಶವನ್ನೇ ಆಕ್ರಮಿಸುವ ಸಾಧ್ಯತೆ ಇದೆ. ಗೋವಿನ ಮೂತ್ರ ಹಾಗೂ ಸಗಣಿಯಿಂದ ಸೋಂಕನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೊರೊನಾ ವೈರಸ್ ಹೋಗಲಾಡಿಸಲು ಯಜ್ಞ

ಕೊರೊನಾ ವೈರಸ್ ಹೋಗಲಾಡಿಸಲು ಯಜ್ಞ

ಕೊರೊನಾ ವೈರಸ್ ನಿವಾರಣೆಯಾಗಿ ವಿಶೇಷ ಹೋಮ ನಡೆಸಲಾಗುವುದು ಎಂದು ಮಹಾರಾಜ್ ತಿಳಿಸಿದ್ದಾರೆ.

ಕೊರೊನಾ ವೈರಸ್: ವಿಶ್ವ ತುರ್ತು ಪರಿಸ್ಥಿತಿ ಘೋಷಿಸಿದ ಆರೋಗ್ಯ ಸಂಸ್ಥೆಕೊರೊನಾ ವೈರಸ್: ವಿಶ್ವ ತುರ್ತು ಪರಿಸ್ಥಿತಿ ಘೋಷಿಸಿದ ಆರೋಗ್ಯ ಸಂಸ್ಥೆ

ಗೋ ಮೂತ್ರ ಹಾಗೂ ಸಗಣಿ ಲೇಪಿಸಿ

ಗೋ ಮೂತ್ರ ಹಾಗೂ ಸಗಣಿ ಲೇಪಿಸಿ

ಗೋಮೂತ್ರ ಕುಡಿಯುವದರಿಂದ ಗೋವಿನ ಸಗಣಿಯನ್ನು ದೇಹದ ತುಂಬಾ ಲೇಪಿಸುವುದರಿಂದ ಸೋಂಕು ಕಡಿಮೆಯಾಗಲಿದೆ. ಮೈಮೇಲೆ ಸಗಣಿಯನ್ನು ಲೇಪಿಸಿ ಓಂ ನಮಃ ಶಿವಾಯ ಎಂದು ಜಪ ಮಾಡಬೇಕು.

ವಿಶ್ವ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ ಆರೋಗ್ಯ ಸಂಸ್ಥೆ

ವಿಶ್ವ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ ಆರೋಗ್ಯ ಸಂಸ್ಥೆ

ಜಗತ್ತಿನಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಹೇರಲಾಗಿದೆ. ಸ್ವಿಡ್ಜರ್‌ಲೆಂಡ್ನಲ್ಲಿರುವ ಜಿನಿವಾದಲ್ಲಿರುವ ವಿಶ್ವ ಆರೋಗ್ಯ ಸಂಘಟನೆ ಆರಂಭದಲ್ಲಿ ಕೊರೊನಾ ವೈರಸ್ ನಿಂದ ಜಾಗತಿಕವಾಗಿ ಅಪಾಯವಿದೆ ಎಂಬ ಎಚ್ಚರಿಕೆಯನ್ನು ತಳ್ಳಿಹಾಕಿತ್ತು. ಕೊರೊನಾ ವೈರಸ್: ಸುಳ್ಳು ಸುದ್ದಿ ನಂಬುವ ಮುನ್ನ ಇದು ನಿಮಗೆ ತಿಳಿದಿರಲಿ ಆದರೆ ಕಳೆದ ನಾಲ್ಕೈದು ದಿನಗಳ ಅಪಾಯದ ಮೌಲ್ಯಮಾಪನವನ್ನು ಪರಿಷ್ಕರಿಸಿ ಜಾಗತಿಕ ಮಟ್ಟದಲ್ಲಿ ವೈರಸ್ ನಿಂದ ಜಾಗ್ರತೆ ವಹಿಸುವಂತೆ ದೇಶಗಳಿಗೆ ಎಚ್ಚರಿಕೆ ನೀಡಿದೆ. ಚೀನಾ ಸರ್ಕಾರ ಮತ್ತೆ 43 ಮಂದಿ ಕೊರೊನಾ ವೈರಸ್ ಸೋಂಕಿಗೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದು ಈ ಮೂಲಕ ಚೀನಾದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 213ಕ್ಕೇರಿದೆ. ನಿನ್ನೆ ದೃಢಪಟ್ಟ ಇಬ್ಬರ ಸಾವು ಹುಬೈ ಪ್ರಾಂತ್ಯದಲ್ಲಿ ಆಗಿದೆ. ಭಾರತದಿಂದ ಚೀನಾಕ್ಕೆ ಐವರು ವೈದ್ಯರು ತೆರಳಿದ್ದರು.

ಚೀನಾದಲ್ಲಿ ಕೊರೊನಾ ಭಯದಲ್ಲಿದ್ದ ಭಾರತೀಯರನ್ನು ಕರೆತಂದ ವೈದ್ಯರುಚೀನಾದಲ್ಲಿ ಕೊರೊನಾ ಭಯದಲ್ಲಿದ್ದ ಭಾರತೀಯರನ್ನು ಕರೆತಂದ ವೈದ್ಯರು

ಚೀನಾದಿಂದ ಭಾರತಕ್ಕೆ ಮರಳಿದ 324 ಮಂದಿ

ಚೀನಾದಿಂದ ಭಾರತಕ್ಕೆ ಮರಳಿದ 324 ಮಂದಿ

ಚೀನಾದಲ್ಲಿ 324 ಭಾರತೀಯರು ಕೊರೊನಾ ವೈರಸ್​ನಿಂದ ಪ್ರಾಣರಕ್ಷಣೆ ಮಾಡಿಕೊಳ್ಳುವುದಕ್ಕೆ ಕಾಯುತ್ತಿದ್ದರು. ಅವರನ್ನು ಭಾರತಕ್ಕೆ ಕರೆತರಲೆಂದು ಬೋಯಿಂಗ್​ 747 ವಿಮಾನ ರಾಷ್ಟ್ರ ರಾಜಧಾನಿ ದೆಹಲಿಯಿಂದ ತೆರಳಿತ್ತು.

ಮಾಸ್ಕ್, ಗ್ಲೌಸ್​, ಔಷಧಿಗಳನ್ನು ವಿಮಾನದ ಪ್ರತಿ ಆಸನದಲ್ಲೂ ಇರಿಸಲಾಗಿದ್ದು, ಇಬ್ಬರು ವಿಶೇಷ ವೈದ್ಯರನ್ನು ಸಹ ಜತೆಯಲ್ಲಿ ಕಳುಹಿಸಿಕೊಡಲಾಗುತ್ತಿದೆ. ವುಹಾನ್​ನಲ್ಲಿ ವಿಮಾನಕ್ಕೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಾಗ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗಿದೆ. ಒಂದು ವೇಳೆ ಯಾವುದೇ ವ್ಯಕ್ತಿಯಲ್ಲಿ ಕೊರೊನಾ ವೈರಸ್​ ಕಂಡುಬಂದಲ್ಲಿ ಅಂತಹ ವ್ಯಕ್ತಿಯನ್ನು ವಿಮಾನದೊಳಗೆ ಬಿಡಲಾಗುವುದಿಲ್ಲ ಎಂದು ಕೂಡ ಹೇಳಿದ್ದರು.

English summary
As the coronavirus scare runs across the world with one confirmed case in India, Hindu Mahasabha has proposed bizarre treatment for the dreaded virus infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X