ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Coronavirus: ಕ್ವಾರಂಟೈನ್ ನಿಯಮ ಮುರಿದ ಮೇರಿ ಕೋಮ್

|
Google Oneindia Kannada News

ನವ ದೆಹಲಿ, ಮಾರ್ಚ್ 21: ಕೊರೊನಾ ವೈರಸ್ ಹರದಂತೆ ಪಾಲಿಸಬೇಕಾದ ನಿಯಮಗಳಲ್ಲಿ ಕ್ವಾರಂಟೈನ್ (14 ದಿನ ಪ್ರತ್ಯೇಕವಾಗಿ ಇರುವುದು) ಒಂದಾಗಿದೆ. ಸೋಂಕಿತರು ಹಾಗೂ ವಿದೇಶದಿಂದ ಮರಳಿದವರನ್ನು ಕ್ವಾರಂಟೈನ್ ನಲ್ಲಿ ಇಡಲಾಗುತ್ತಿದೆ. ಆದರೆ, ಈ ನಿಮಯವನ್ನು ಭಾರತದ ಜನಪ್ರಿಯ ಬಾಕ್ಸರ್ ಮೋರಿ ಕೋಮ್ ಮುರಿದಿದ್ದಾರೆ ಎನ್ನುವ ಆರೋಪ ಎದುರಿಸುತ್ತಿದ್ದಾರೆ.

ಮೋರಿ ಕೋಮ್ ಜೋಡರ್ನ್ ಅಮ್ಮನ್ ನಲ್ಲಿ ಏಷ್ಯಾ ಒಲಂಪಿಕ್ ಕ್ವಾಲಿಫೈರ್ ಪಂದ್ಯದಲ್ಲಿ ಭಾಗಿಯಾಗಿದ್ದರು. ಆ ನಂತರ ಮಾರ್ಚ್ 13 ರಂದು ಭಾರತಕ್ಕೆ ಬಂದರು. ವಿದೇಶದಿಂದ ಬಂದವರಿಗೆ ಕಡ್ಡಾಯವಾಗಿ 14 ದಿನ ಪ್ರತ್ಯೇಕವಾಗಿ ಇರಲು ಸೂಚನೆ ನೀಡಿದ್ದು, ಮೋರಿ ಕೋಮ್‌ರಿಗೆ ಸಹ ಹೇಳಲಾಗಿತ್ತು. ಆದರೆ, ಈ ನಿಯಮವನ್ನು ಅವರು ಪಾಲಿಸಿಲ್ಲ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೂ ಕೊರೊನಾ ಪರೀಕ್ಷೆ?ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೂ ಕೊರೊನಾ ಪರೀಕ್ಷೆ?

ಮಾರ್ಚ್ 13 ರಂದು ಭಾರತಕ್ಕೆ ಬಂದ ಮೋರಿ ಕೋಮ್ ಐದು ದಿನಗಳ ನಂತರ ಮಾರ್ಚ್ 18 ರಂದು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಏರ್ಪಾಡು ಮಾಡಿದ್ದ ಉಪಹಾರ ಪಾರ್ಟಿಯಲ್ಲಿ ಅವರು ಭಾಗಿಯಾಗಿದ್ದಾರೆ. ರಾಮನಾಥ್ ಕೋವಿಂದ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋಗಳ ಮೂಲಕ ಈ ವಿಷಯ ಬೆಳಕಿಗೆ ಬಂದಿದೆ.

Coronavirus: Boxer Mary Kom Breaks Quarantine Protocol

ಇದೇ ಪಾರ್ಟಿಯಲ್ಲಿ ಗಾಯಕಿ ಕನ್ನಿಕಾ ಕಪೂರ್ ಸಹ ಭಾಗಿಯಾಗಿದ್ದರು. ಕೊರೊನಾ ಸೋಂಕಿತೆಯಾಗಿ ಕಾರ್ಯಕ್ರಮಕ್ಕೆ ಹೋಗಿದ್ದ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಈಗ ಮೋರಿ ಕೋಮ್ ವಿಷಯ ಕೂಡ ತಿಳಿದು ಬಂದಿದೆ. ಇದೇ ಕಾರ್ಯಕ್ರಮದಲ್ಲಿ ಇದ್ದಿದ್ದರ ಕಾರಣ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

English summary
Coronavirus: Boxer Mary Kom breaks quarantine protocol by attending breakfast hosted by president Ramnath Kovind.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X